
ಖ್ಯಾತ ಬಹುಭಾಷಾ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ, KK) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಬಳಿಕ ಕುಸಿದು ಬಿದ್ದು ಮಂಗಳವಾರ ರಾತ್ರಿ (ಮೇ 31) ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೆಕೆ ಎಂದಿನಂತೆ ಅಭಿಮಾನಿಗಳನ್ನು ರಂಜಿಸಿದ್ದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಕೆಕೆ ಹಾಡು ಕೇಳಿ ಕುಣಿದು ಕುಪ್ಪಳಿಸಿದ್ದರು. ಈ ಕಾರ್ಯಕ್ರಮ ನಡೆದು ಕೆಲವೇ ಕ್ಷಣದಲ್ಲಿ ಗಾಯಕ ಕೆಕೆ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಭಿಮಾನಿಗಳ ಜೊತೆಗೆ ರಾಜಕೀಯ, ಸಿನಿಮಾ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸಂಗೀತ ದಿಗ್ಗಜರು ಸಹ ಕೆಕೆ ಸಾವಿಗೆ ಕಂಬನಿ ಮಿಡಿದ್ದಾರೆ.
ಖ್ಯಾತ ಗಾಯಕ ಕೆಕೆ ಸಂಗೀತ ಕಾರ್ಯಕ್ರಮ ಮುಗಿಸಿ ಬಳಿಕ ಹೋಟೆಲ್‌ಗೆ ತೆರಳಿದ್ದರು. ಅಲ್ಲೇ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿದರು ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಕೆಕೆ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕೆಕೆ ಹಠಾತ್ ಸಾವು ಸಂಗೀತ ಲೋಕಕ್ಕೆ ಬರಸಿಡಲು ಬಡಿದಂತೆ ಆಗಿದೆ. ಕೆಕೆ ಸಾವು ಆಘಾತ ನೀಡಿದೆ ಎಂದು ಅನೇಕ ಸಂಗೀತ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
Singer KK Death; ಖ್ಯಾತ ಗಾಯಕ ಕೆಕೆ ಹಾಡಿರುವ ಕನ್ನಡದ ಪ್ರಸಿದ್ಧ ಗೀತೆಗಳು
ಖ್ಯಾತ ಗಾಯಕ ಸೋನು ನಿಗಂ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಕೆಕೆ ಬಗ್ಗೆ ವಿಡಿಯೋ ಶೇರ್ ಮಾಡಿದ್ದಾರೆ. ಕೆಕೆ ಭಾಯ್ ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು ಖ್ಯಾತ ಕನ್ನಡದ ಗಾಯಕ ವಿಜಯ್ ಪ್ರಕಾಶ್(Vjay Prakash) ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. 'ಕೆಕೆ ನನಗೆ ನನ್ನ ಜಾಹೀರಾತು ದಿನಗಳಿಂದನೂ ಗೊತ್ತು. ಅವರು ಹಾಡಿದ ಪ್ರತಿ ಹಾಡಿನಲ್ಲೂ ಪ್ರತಿಧ್ವನಿಸುವ ಧ್ವನಿ. ಕೆಕೆ ಇನ್ನಿಲ್ಲ ಎನ್ನುವುದು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಆತ್ಮಕ್ಕೆ ಶಾಂತಿ ಸಿಗಲಿ ಸಹೋದರ' ಎಂದು ಹೇಳಿದ್ದಾರೆ.
ಇನ್ನು ಖ್ಯಾತಿ ಗಾಯಕಿ, ನಾಲ್ಕು ರಾಷ್ಟ್ರಪ್ರಶಸ್ತಿ ವಿಜೇತೆ ಶ್ರೇಯಾ ಘೋಷಲ್(Shreya Ghoshal) ಟ್ವೀಟ್ ಮಾಡಿ ನೋವು ಹಂಚಿಕೊಂಡಿದ್ದಾರೆ. 'ಈ ಸುದ್ದಿ ಕೇಳಿ ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಕೆ ಯಾಕೆ, ಇದನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಹೃದಯ ಛಿದ್ರಛಿದ್ರವಾಗಿದೆ' ಎಂದು ಹೇಳಿದ್ದಾರೆ.
ಗಾಯಕ ಕೆಕೆ ಸಾವಿನ ಬಗ್ಗೆ ಅನುಮಾನ; ತಲೆ, ಮುಖದ ಮೇಲೆ ಗಾಯ, ಅಸಹಜ ಸಾವು ಪ್ರಕರಣ ದಾಖಲು
ಭಾರತದ ಮತ್ತೋರ್ವ ಖ್ಯಾತ ಗಾಯಕ ವಿಶಾಲ್ ದದ್ಲಾನಿ(Vishal Dadlani) ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 'ಈ ಸುದ್ದಿ ಕೇಳಿ ನನಗೆ ಕಣ್ಣೀರು ನಿಲ್ಲುತ್ತಿಲ್ಲ. ಎಂಥ ಅದ್ಭುತವಾದ ವ್ಯಕ್ತಿ, ಎಂಥ ಅದ್ಭುತವಾದ ಧ್ವನಿ, ಹೃದಯವಂತ, ಉತ್ತಮ ವ್ಯಕ್ತಿತ್ವ. ಕೆಕೆ ಯಾವಾಗಲು ಜೀವಂತ' ಎಂದು ಹೇಳಿದ್ದಾರೆ.
ಇನ್ನು ಅನೇಕ ಗಣ್ಯರು ಟ್ವೀಟ್ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ. ಗಾಯಕ ಕೆಕೆ ಸಂಗೀತ ಮಾಂತ್ರಿಕ ಎ ಆರ್ ರಹಮಾನ್ ಅವರ ಹಿಟ್ ಹಾಡುಗಳಾದ ಕಲ್ಲೂರಿ ಸಾಲೆ, ಹಲೋ ಡಾಕ್ಟರ್ ಮೂಲಕ ಕೆಕೆ ದೊಡ್ಡ ಮಟ್ಟದ ಬ್ರೇಕ್ ಪಡೆದರು. 1999ರಲ್ಲಿ ಬಂದ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ತಡಪ್ ತಡಪ್ ಕೆ.. ಹಾಡಿನ ಮೂಲಕ ಹಿನ್ನಲೆ ಗಾಯಕರಾಗಿ ಮೊಲ ಬಾರಿಗೆ ಹಾಡಿದರು ಬಳಿಕ ಕೆಕೆ ಬಳಿಕ ದೊಡ್ಡ ಮಟ್ಟದ ಖ್ಯಾತಿಗಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.