
ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ, KK) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಬಳಿಕ ಕುಸಿದು ಬಿದ್ದು ಮಂಗಳವಾರ ರಾತ್ರಿ (ಮೇ 31) ಸಾವನ್ನಪ್ಪಿದ್ದಾರೆ. ಇತ್ತೀಚಿಗಷ್ಟೆ ಮಲೆಯಾಳಂನ ಖ್ಯಾತ ಹಿನ್ನಲೆ ಗಾಯಕ ಎಡವ ಬಶೀರ್ ಹಾಡುತ್ತಲೆ ಕುಸಿದು ಬಿದ್ದು ನಿಧನರಾಗಿದ್ದರು. ಬಾಲಿವುಡ್‌ನ ಮಾನೋ ಹೋ ತುಮ್ ಹಾಡು ಹಾಡುತ್ತಲೇ ಬಶೀರ್ ವೇದಿಕೆಯಲ್ಲಿ ಕುಸಿದು ಬಿದ್ದು ಮೃತರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಖ್ಯಾತ ಗಾಯಕ ಕೆಕೆ ಸಾವು ಸಂಗೀತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ. ಕೋಲ್ಕತ್ತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೆಕೆ ಎಂದಿನಂತೆ ಅಭಿಮಾನಿಗಳನ್ನು ಸಂಗೀತದ ಅಮಲಿನಲ್ಲಿ ತೇಲಿಸಿದ್ದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದ್ದ ಕೆಕೆ ಕಾರ್ಯಕ್ರಮ ಮುಗಿಸಿ ಹೋಟೆಲ್‌ಗೆ ತೆರಳಿದ್ದರು. ಅಲ್ಲೇ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿದರು ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಕೆಕೆ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕೆಕೆ ಹಠಾತ್ ಸಾವು ಸಂಗೀತ ಲೋಕಕ್ಕೆ ಬರಸಿಡಲು ಬಡಿದಂತೆ ಆಗಿದೆ.
ಮೂಲತಃ ಕೇರಳದವರಾದ ಕೆಕೆ ಹುಟ್ಟಿಬೆಳೆದಿದ್ದು ದೆಹಲಿಯಲ್ಲಿ. ಬಾಲಿವುಡ್ ಸಿನಿಮಾ ಮೂಲಕ ಹಿನ್ನಲೆ ಗಾಯಕರಾಗಿ ವೃತ್ತಿ ಜೀವ ಪ್ರಾರಂಭಿಸಿದ್ದ ಕೆಕೆ ಬಳಿಕ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದರು. ಕೇವಲ ಬಾಲಿವುಡ್ ಮಾತ್ರವಲ್ಲದೇ ಕೆಕೆ ಬೇರೆ ಬೇರೆ ಭಾಷೆಯಲ್ಲೂ ಗಾನಸುಧೆ ಹರಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮರಾಠಿ ಸೇರಿದಂತೆ ಅನೇಕ ಭಾಷೆಯ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲೂ ಕೆಕೆ ಅನೇಕ ಗೀತೆಗಳಿಗೆ ಕಂಠದಾನ ಮಾಡಿದ್ದಾರೆ. ಲವ್ ಸಿನಿಮಾ ಮೂಲಕ ಕನ್ನಡ ಗೀತೆಗೆ ಧ್ವನಿಯಾದ ಕೆಕೆ ಬಳಿಕ ಅನೇಕ ಹಾಡುಗಳನ್ನು ಹಾಡಿದ್ದಾರೆ.
ಗಾಯಕ ಕೆಕೆ ಸಾವಿನ ಬಗ್ಗೆ ಅನುಮಾನ; ತಲೆ, ಮುಖದ ಮೇಲೆ ಗಾಯ, ಅಸಹಜ ಸಾವು ಪ್ರಕರಣ ದಾಖಲು
ನಟ ಆದಿತ್ಯ ಮತ್ತು ರಕ್ಷಿತಾ ನಟನೆಯ ಲವ್ ಸಿನಿಮಾದಲ್ಲಿ ಕೆಕೆ ಎರಡು ಹಾಡುಗಳನ್ನು ಹಾಡಿದ್ದಾರೆ. ಬಳಿಕ ರೌಡಿ ಅಳಿಯ, ಸಾವರ್ಭೌಮ, ನ್ಯೂಸ್, ಮದನ, ಪರಿಚಯ, ಮನಸಾರೆ, ಮಳೆ ಬರಲಿ ಮಂಜು ಇರಲಿ, ಯೋಗಿ, ಸಂಚಾರಿ, ಬಹುಪರಾಕ್, ಆರ್ಯನ್ ಸಿನಿಮಾಗಳ ಗೀತೆಗೆ ಧ್ವನಿ ನೀಡಿದ್ದಾರೆ.
ಗಾಯಕ ಕೆಕೆ ಸಾವಿನ ಬಗ್ಗೆ ಅನುಮಾನ; ತಲೆ, ಮುಖದ ಮೇಲೆ ಗಾಯ, ಅಸಹಜ ಸಾವು ಪ್ರಕರಣ ದಾಖಲು
ನಟ ಆದಿತ್ಯ ಮತ್ತು ರಕ್ಷಿತಾ ನಟನೆಯ ಲವ್ ಸಿನಿಮಾದಲ್ಲಿ ಕೆಕೆ ಏಳು ಬಣ್ಣದ...ಹಾಡುಗಳನ್ನು ಹಾಡಿದ್ದಾರೆ. ಅನು ಮಲಿಕ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡಿಗೆ ಕಂಠ ದಾನ ಮಾಡಿದ್ದಾರೆ.
ಕನ್ನಡದ ಪ್ರಸಿದ್ಧ ಗೀತೆಗಳಲ್ಲಿ ಒಂದಾಗಿರುವ ನಡೆದಾಡುವ ಕಾಮನ ಬಿಲ್ಲು...ಹಾಡು ಸಹ ಕೆಕೆ ಧ್ವನಿಯಲ್ಲಿ ಮೂಡಿಬಂದಿದೆ. ಪರಿಚಯ ಸಿನಿಮಾದ ಗೀತೆ ಇದಾಗಿದೆ. ನಟ ತರುಣ್ ಚಂದ್ರ ಮತ್ತು ರೇಖಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾಗೆ ಜಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದರು.
ಇನ್ನು ಶಿವರಾಜ್ ಕುಮಾರ್ ಮತ್ತು ರಮ್ಯಾ ನಟನೆಯ ಆರ್ಯನ್ ಸಿನಿಮಾದ ಒಂದು ಗೀತೆಗೂ ಕೆಕೆ ಧ್ವನಿ ನೀಡಿದ್ದಾರೆ. ಡಿ ರಾಜೇಂದ್ರ ಬಾಬು ಸಾರಥ್ಯದಲ್ಲಿ ಬಂದ ಈ ಸಿನಿಮಾಗೆ ಜಸ್ಸಿ ಗಿಫ್ಟ್ ಸಂಗೀತ ನೀಡಿದ್ದರು. ಒಂದು ಹಾಡು ಮೆಲ್ಲ ಕೇಳಿ ಬಂತು ಎನ್ನುವ ಹಾಡಿಗೆ ಧ್ವನಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.