ನಟ ವಿಜಯ್ ದೇವರಕೊಂಡಗೆ ವಿದ್ಯಾರ್ಥಿನಿಯರು ವಿಚಿತ್ರ ಬೇಡಿಕೆ ಇಟ್ಟಿದ್ದು, ಇದಕ್ಕೆ ನಟ ಮಾಡಿದ್ದೇನು ನೋಡಿ...
ನಟ-ನಟಿಯರಿಗೆ ಅಭಿಮಾನಿಗಳಿಂದ ಚಿತ್ರ-ವಿಚಿತ್ರ ಬೇಡಿಕೆಗಳು ಬರುತ್ತಲೇ ಇರುತ್ತವೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ತಾರೆಯರ ಬಗ್ಗೆ ಅಭಿಮಾನದ ನುಡಿಗಳನ್ನಾಡುವುದು ಮಾಮೂಲು. ತಮ್ಮ ನೆಚ್ಚಿನ ತಾರೆಯರನ್ನು ಒಮ್ಮೆಯಾದರೂ ನೋಡಬೇಕು ಎಂದು ಬಯಸುವ ದೊಡ್ಡ ವರ್ಗವೇ ಇದೆ. ನಟ-ನಟಿಯರನ್ನೇ ದೇವರು ಎಂಬಂತೆ ಕಾಣುವವರಿಗೂ ಕೊರತೆಯೇನಿಲ್ಲ. ಇದೀಗ, ವಿಜಯ್ ದೇವರಕೊಂಡ ಅಭಿಮಾನಿಗಳಾದ ವಿದ್ಯಾರ್ಥಿನಿಯರು ವಿಚಿತ್ರ ಕೋರಿಕೆಯನ್ನು ನಟನ ಮುಂದೆ ಇಟ್ಟಿದ್ದು, ಅದಕ್ಕೆ ಕುತೂಹಲ ಎಂಬಂತೆ ನಟನೂ ಪ್ರತಿಕ್ರಿಯೆ ನೀಡಿದ್ದಾರೆ.
ಆಗಿದ್ದೇನೆಂದರೆ, ತಾವು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ಗೆ ವಿಜಯ್ ದೇವರಕೊಂಡ ಅವರು ಕಮೆಂಟ್ ಮಾಡಿದರೆ ಮಾತ್ರ ನಾವು ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎಂದು ಇಬ್ಬರು ವಿದ್ಯಾರ್ಥಿಗಳು ಬರೆದುಕೊಂಡಿದ್ದರು. ಈ ವಿದ್ಯಾರ್ಥಿನಿಯರ ಪೋಸ್ಟ್ ನೋಡಿ ನಕ್ಕವರೇ ಹೆಚ್ಚು. ಇನ್ನು ನೀವು ಫೇಲ್ ಆದಂತೆ ಸರಿ ಎಂದು ಹಲವರು ಹೇಳಿದ್ರೆ, ಇಂಥ ಹುಚ್ಚಾಟ ಬಿಟ್ಟು ಪರೀಕ್ಷೆಗೆ ರೆಡಿ ಮಾಡಿಕೊಳ್ಳಿ ಎಂದು ಇನ್ನು ಹಲವರು ಪ್ರತಿಕ್ರಿಯೆ ನೀಡಿದರು. ನಟ ಹೀಗೆಲ್ಲಾ ಕಮೆಂಟ್ ಮಾಡಲು ಸಾಧ್ಯವಿಲ್ಲ. ಅವರಿಗೆ ನಿಮ್ಮ ಪೋಸ್ಟ್ ಕಾಣಿಸುವುದೂ ಇಲ್ಲ ಎಂದು ಬುದ್ಧಿಮಾತನ್ನು ಹೇಳಿದರೂ ವಿದ್ಯಾರ್ಥಿನಿಯರು ತಮ್ಮ ಪಟ್ಟು ಬಿಡಲಿಲ್ಲ.
ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಸಾವಿನ ಬಾಯಿಗೆ ಹೋಗಿ ಬಂದ ಅನುಭವ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ, ವಿಜಯ್ ದೇವರಕೊಂಡ ಅವರು, ವಿದ್ಯಾರ್ಥಿನಿಯರ ಈ ಪೋಸ್ಟ್ಗೆ ಉತ್ತರ ನೀಡಿದ್ದಾರೆ. ನೀವು ಪರೀಕ್ಷೆಯಲ್ಲಿ 90% ಅಂಕ ಗಳಿಸಿದರೆ ನಿಮ್ಮನ್ನು ಖಂಡಿತ ಭೇಟಿ ಮಾಡುತ್ತೇನೆ ಎಂದು ರಿಪ್ಲೈ ಮಾಡಿದ್ದಾರೆ. ನಟನ ಈ ಸಿಂಪ್ಲಿಸಿಟಿಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ, ವಿಜಯ್ ದೇವರಕೊಂಡ ಅವರು ಸದ್ಯ ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ ವಿಷಯದಲ್ಲಿ ಸದ್ದು ಮಾಡುತ್ತಿದ್ದಾರೆ. ಇವರಿಬ್ಬರೂ ಹಲವು ವರ್ಷಗಳಿಂದ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದ್ದರೂ, ಈ ಸುದ್ದಿಯನ್ನು ಇಬ್ಬರೂ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಅದೇನೇ ಇದ್ದರೂ ಈ ಜೋಡಿ ಮಾತ್ರ ಆಗಾಗ್ಗೆ ವಿದೇಶಗಳಿಗೆ ಜಾಲಿ ಟ್ರಿಪ್ ಮಾಡುವುದು ನಡೆಯುತ್ತಲೇ ಇರುವುದು ಅವರ ಫೋಟೋಗಳಿಂದಲೇ ತಿಳಿದುಬರುತ್ತಿವೆ. ಇದೇ ತಿಂಗಳು ಮದ್ವೆ ಎಂದೂ ಭಾರಿ ಸುದ್ದಿಯಾಗಿತ್ತು. ಕೊನೆಗೂ ಈ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದದ ವಿಜಯ್ ದೇವರಕೊಂಡ ,ನಿಶ್ಚಿತಾರ್ಥ, ಮದುವೆ ಸುದ್ದಿಗಳನ್ನು ತಳ್ಳಿಹಾಕಿದ್ದರು. ನಟಿ ರಶ್ಮಿಕಾ ಮಂದಣ್ಣ ಅವರ ಜೊತೆಗೆ ಶೀಘ್ರ ಮದ್ವೆಯೂ ಆಗುತ್ತಿಲ್ಲ, ಫೆಬ್ರುವರಿಯಲ್ಲಿ ನಿಶ್ಚಿತಾರ್ಥನೂ ಮಾಡಿಕೊಳ್ಳುತ್ತಿಲ್ಲ ಎಂದಿದ್ದರು, ಮಾಧ್ಯಮಗಳು ನನ್ನ ಮತ್ತು ರಶ್ಮಿಕಾ ಮದುವೆಯನ್ನು ಆಗ್ಗಾಗ್ಗೆ ಮಾಡಿಸುತ್ತಲೇ ಇರುತ್ತವೆ. ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಮದುವೆ ಮಾಡಿಸುತ್ತವೆ. ಪ್ರತಿ ಬಾರಿಯೂ ನನ್ನ ಮದುವೆ ಸುದ್ದಿ ಬಂದಾಗ ಈ ಬಗ್ಗೆ ಸ್ಪಷ್ಟನೆ ನೀಡುತ್ತಲೇ ಇರುತ್ತೇನೆ. ಇವೆಲ್ಲಾ ಸುಳ್ಳು ಎಂದಿದ್ದರು.
ನಿರ್ದೇಶಕ ರಾಜ್ಕುಮಾರ್ ಸಂತೋಷಿಗೆ 2 ವರ್ಷ ಜೈಲು! ಆಮೀರ್ ಖಾನ್, ಸನ್ನಿ ಡಿಯೋಲ್ಗೂ ಸಂಕಷ್ಟ