ನಿನಗೆ ಕನಿಕರ ಇಲ್ವಾ? ವಿಜಯ್ ದೇವರಕೊಂಡಗೆ ಬೈದ್ರು ರಶ್ಮಿಕಾ ಫ್ಯಾನ್ಸ್

Published : Feb 05, 2025, 05:36 PM ISTUpdated : Feb 06, 2025, 11:38 AM IST
ನಿನಗೆ ಕನಿಕರ ಇಲ್ವಾ? ವಿಜಯ್ ದೇವರಕೊಂಡಗೆ ಬೈದ್ರು ರಶ್ಮಿಕಾ ಫ್ಯಾನ್ಸ್

ಸಾರಾಂಶ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಜಯ್ ದೇವರಕೊಂಡಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗರಂ ಆಗಿದ್ದೇಕೆ? ಕ್ಲಾಸ್ ತೆಗೆದುಕೊಂಡಿದ್ಯಾಕೆ?

ಮುಂಬೈ: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕಾಲು ಮುರಿದುಕೊಂಡಿರೋ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಸಿನಿಮಾ ಸುದ್ದಿಗೋಷ್ಠಿಗೆ ವ್ಹೀಲ್‌ ಚೇರ್‌ನಲ್ಲಿಯೇ ಬಂದು ವೇದಿಕೆ ಮೇಲೆ ಕುಂಟುತ್ತಾ ರಶ್ಮಿಕಾ ಮಂದಣ್ಣ ಬಂದಿದ್ದರು. ಬಾಲಿವುಡ್‌ನ ಬಹುನಿರೀಕ್ಷಿತ ಐತಿಹಾಸಿಕ ಕಥೆಯುಳ್ಳ ಛಾವಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಮಹಾರಾಣಿ ಯೇಸುಬಾಯಿಯಾಗಿ ನಟಿಸಿದ್ದಾರೆ. ಕಾಲು ಮುರಿದುಕೊಂಡಿರುವ ರಶ್ಮಿಕಾ ಮಂದಣ್ಣ ವಿಶ್ರಾಂತಿಯಲ್ಲಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣಾ ಅವರ ವಿಡಿಯೋ ವೈರಲ್ ಆಗಿದ್ದು, ವಿಜಯ್ ದೇವರಕೊಂಡ ಅವರನ್ನು ಶ್ರೀವಲ್ಲಿಯ ಫ್ಯಾನ್ಸ್, ನಿನಗೆ ಕನಿಕರ ಇಲ್ಲವಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಡೇಟ್ ಮಾಡುತ್ತಿರೋ ಸುದ್ದಿ ಸಿನಿಮಾ ಅಂಗಳದಲ್ಲಿ ಹರಿದಾಡುತ್ತಿದೆ. ನಾನು ಸಿಂಗಲ್ ಅಲ್ಲ ಎಂಬುದನ್ನು ವಿಜಯ್ ದೇವರಕೊಂಡ ಘೋಷಿಸಿಕೊಂಡಿದ್ದಾರೆ. ಆದರೆ ಜೊತೆ ಡೇಟಿಂಗ್‌ನಲ್ಲಿದ್ದೀನಿ ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ. ರಶ್ಮಿಕಾ ಜೊತೆ ವಿಜಯ್ ಜೊತೆಯಾಗಿರೋ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗುತ್ತಿರುತ್ತವೆ. 

ಕಾಲಿಗೆ ಗಾಯ ಮಾಡಿಕೊಂಡಿರುವ ಶ್ರೀವಲ್ಲಿ ರೆಸ್ಟ್ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ರಶ್ಮಿಕಾ ಜೊತೆಯಲ್ಲಿಯೇ ವಿಜಯ್ ದೇವರಕೊಂಡ ಇದ್ದಾರೆ. ಹೋಟೆಲ್‌ನಿಂದ ರಶ್ಮಿಕಾ ಮಂದಣ್ಣ ಹೊರಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗೆಳತಿ ರಶ್ಮಿಕಾಗೆ ಯಾವುದೇ ಸಹಾಯ ಮಾಡದೇ ವಿಜಯ್ ದೇವರಕೊಂಡ ಮುಂದೆ ನಡೆದುಕೊಂಡು ಹೋಗಿದ್ದಾರೆ. ಹಿಂದೆ ರಶ್ಮಿಕಾ ಸಪೋರ್ಟಿಂಗ್ ಸ್ಟ್ಯಾಂಡ್ ಮತ್ತು ಸಹಾಯಕರ ಆಸರೆಯೊಂದಿಗೆ ಕಾರ್ ಬಳಿ ಬಂದಿದ್ದಾರೆ. ರಶ್ಮಿಕಾ ಮಂದಣ್ಣ ಕಷ್ಟಪಡುತ್ತಿರೋದನ್ನು ಗಮನಿಸಿದ ನೆಟ್ಟಿಗರು ಯಾವುದೇ ಸಹಾಯ ಮಾಡದ ವಿಜಯ್ ದೇವರಕೊಂಡಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಇದನ್ನೂ ಓದಿ: 'ನಾನೊಬ್ಬರಿಗೆ ಪಾರ್ಟ್ನರ್‌ ಆಗಿದ್ದೇನೆ': ವಿಜಯ್‌ ದೇವರಕೊಂಡ ಬಗ್ಗೆ ರಶ್ಮಿಕಾ ಮಂದಣ್ಣ ಮಾತಾಡಿದ್ರಾ?

ಕನ್ನಡದ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ರಶ್ಮಿಕಾ ನಟನೆಯ ಅನಿಮಲ್, ಪುಷ್ಪಾ 2 ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ಇದೀಗ ಛಾವಾ ಬಿಡುಗಡೆಗೆ ಸಿದ್ಧವಾಗಿದೆ. ಮರಾಠ ಸಾಮ್ರಾಜ್ಯದ ರಾಜ ಛತ್ರಪತಿ ಸಂಭಾಜಿ ಮಹಾರಾಜ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಚಿತ್ರಕ್ಕೆ ಲಕ್ಷ್ಮಣ್ ಉತೇಕರ್ ನಿರ್ದೇಶನವಿದ್ದು, ದಿನೇಶ್ ವಿಜನ್ ಮತ್ತು ಮ್ಯಾಡಾಕ್ ಫಿಲಂಸ್ ಜೊತೆಯಾಗಿ ಬಂಡವಾಳ ಹೂಡಿಕೆ ಮಾಡಿದೆ.  ಫೆಬ್ರವರಿ 14ರಂದು ಸಿನಿಮಾ ಬಿಡುಗಡೆಯಾಗಲಿದೆ.

ರಿಷಬ್ ಶೆಟ್ಟಿ ಸೊಸೆಯಾದ ರಶ್ಮಿಕಾ 
ಛಾವಾ ಪಾತ್ರದ ರಶ್ಮಿಕಾ ಲುಕ್ ವೈರಲ್ ಆಗುತ್ತಿದ್ದಂತೆ  ನೆಟ್ಟಿಗರು ನೀವಿನ್ನು ರಿಷಬ್ ಶೆಟ್ಟಿ ಸೊಸೆಯಂದು ಟ್ರೋಲ್ ಮಾಡಿದ್ದಾರೆ. ರಿಷಭ್ ಶೆಟ್ಟಿ ಸಹ ಛತ್ರಪತಿ ಶಿವಾಜಿ ಮಹಾರಾಜ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವಾಜಿ ಮಹಾರಾಜ ಪುತ್ರ ಸಂಭಾಜಿ ಕಥೆಯೇ ಛಾವಾ ಸಿನಿಮಾ ಆಗಿದೆ. ಸಂಭಾಜಿಯ ಮಡದಿ ಯೇಸುಬಾಯಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಸಿನಿಮಾ ಸಂಬಂಧದಲ್ಲಿ ರಿಷಭ್ ಶೆಟ್ಟಿಯವರ ಸೊಸೆಯಾದರು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. 

ಇದನ್ನೂ ಓದಿ: ನಟಿ ರಶ್ಮಿಕಾಗೆ ಇನ್ನು ನಡೆಯಲು ಆಗೋದೇ ಇಲ್ವಾ? ಇನ್​ಸ್ಟಾ ಪೋಸ್ಟ್​ ನೋಡಿ ಫ್ಯಾನ್ಸ್​ ಶಾಕ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!