
ಗ್ಲಾಮರ್ ಜಗತ್ತಿನಲ್ಲಿ ಕೆಲವು ಸಂಬಂಧಗಳು ಯಾವಾಗಲೂ ಗಮನ ಸೆಳೆಯುತ್ತವೆ. ಈ ಜೋಡಿಯ ಆನ್‌ಸ್ಕ್ರೀನ್ ಕೆಮೆಸ್ಟ್ರಿಯಂತೂ ಎಲ್ಲರಿಗೂ ಫೇವರೇಟ್. ಡೇಟಿಂಗ್ ವಿಚಾರವಾಗಿ ಈ ಜೋಡಿ ಸುದ್ದಿಯಲ್ಲಿದ್ದಾರೆ.
ಗೀತಾ ಗೋವಿಂದಮ್ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳಂತ ಸೂಪರ್‌ಹಿಟ್‌ಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದಾಗಿನಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಊಹಾಪೋಹಗಳು ಇವೆ.
ಗದ್ದೆ ಉಳುಮೆ ಮಾಡ್ತಿದ್ದಾರೆ ಕಿರಿಕ್ ಚೆಲುವೆ..!
ಆದ್ರೆ ಇವರಿಬ್ಬರೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಇವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು, ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ಸೆಪ್ಟೆಂಬರ್ 24, 2020 ರಂದು ರಶ್ಮಿಕಾ ಮಂದಣ್ಣ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ವಿಜಯ್ ಅಮ್ಮ ಮಾಧವಿಯವರ 50 ನೇ ಹುಟ್ಟುಹಬ್ಬದಂದು ಅವರೊಂದಿಗೆ ಸೆಲ್ಫಿ ಪೋಸ್ಟ್ ಮಾಡಿದ್ದರು.
ಮಿಷನ್ ಮಜ್ನೂ ಸೆಟ್ನಲ್ಲಿ ಕ್ಯೂಟ್ ಕೆಮೆಸ್ಟ್ರಿ: ಕಿರಿಕ್ ಚೆಲುವೆ ಹ್ಯಾಪಿ
ಕೆಲವು ತಿಂಗಳ ಹಿಂದೆ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಜೀವನದ ಪ್ರೀತಿಯನ್ನು ಕಂಡುಕೊಂಡಿದ್ದಾರೆಯೇ ಎಂದು ಕೇಳಿದಾಗ? ತಾನು ಸಂಬಂಧದಲ್ಲಿದ್ದರೂ ಅದನ್ನು ರಹಸ್ಯವಾಗಿಡಲು ಮತ್ತು ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಲು ಆದ್ಯತೆ ನೀಡುತ್ತೇನೆ ಎಂದು ನಟ ಹೇಳಿದ್ದರು.
ಇದೀಗ ಈ ಜೋಡಿ ಡಿನ್ನರ್ ಡೇಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ರಶ್ಮಿಕಾ-ವಿಜಯ್ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದಾರೆ. ಆದರೆ ಈ ಬಗ್ಗೆ ಈ ಜೋಡಿ ಏನೂ ಹೇಳಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.