
ಚೆನ್ನೈ (ಮಾ.25): ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿರುಚಕಕಾಂತ್ ಬಾಬು ಚೆನ್ನೈನ ಆಟೋರಿಕ್ಷಾವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಜನನಾಥನ್ ಇನ್ನಿಲ್ಲ
ಕೆಲವು ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡ ವಿ. ಬಾಬು ಅವರು ಮಾನಸಿಕವಾಗಿ ನೊಂದಿದ್ದರು. ಸರಿಯಾದ ಉದ್ಯೋಗವು ಇರಲಿಲ್ಲ. ಆಟೋ ಚಲಾಯಿಸಿ ಜೀವನ ನಡೆಸಲು ಆರಂಭಿಸಿದ್ದರು ಹಾಗೂ ದೇವಾಲಯಗಳಲ್ಲಿ ಮಲಗುತ್ತಿದ್ದರು. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟ ಎದುರಾದ ಕಾರಣ ಚೆನ್ನೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ಹಾಗೂ ದೇವಸ್ಥಾನಗಳಲ್ಲಿ ನೀಡುವ ಪ್ರಸಾದವನ್ನು ಸೇವಿಸಿ ಜೀವನ ನಡೆಸುತ್ತಿದ್ದರು.
2004ರಲ್ಲಿ 'ಖಾದಲ್' ಚಿತ್ರದಲ್ಲಿ ವಿ ಬಾಬು ಅಭಿನಯಿಸಿದ್ದಾರೆ. ಇದೇ ಖಾದಲ್ ಚಿತ್ರವನ್ನು ಕನ್ನಡದಲ್ಲಿ 'ಚೆಲುವಿನ ಚಿತ್ತಾರ' ಎಂದು ರಿಮೇಕ್ ಮಾಡಲಾಗಿತ್ತು. ಅಗಲಿರುವ ವಿ ಬಾಬು ಆತ್ಮಕ್ಕೆ ಶಾಂತಿ ಸಿಗಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.