
ಯಶ್ ರಾಜ್ ಫಿಲ್ಮ್ಸ್ ಬೆಂಬಲಿತ ಪಠಾನ್ ಸಿನಿಮಾದಲ್ಲಿ ಶಾರುಖ್ ಖಾನ್ ದೊಡ್ಡ ಬಿಗ್ ಸ್ಕ್ರೀನ್‌ಗೆ ಮಾಸ್ ಎಂಟ್ರಿ ಕೊಡಲಿದ್ದಾರೆ.ನಟ ರಹಸ್ಯ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾನೆಂದು ಹೇಳಲಾಗಿದೆ.
ಈ ಸಿನಿಮಾ ಬಗ್ಗೆ ಎಲ್ಲ ವಿಚಾರವನ್ನೂ ಗೌಪ್ಯವಾಗಿಡಲಾಗಿದೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಸಲ್ಮಾನ್ ಖಾನ್ ಅವರು ಪಠಾನ್ ಸಿನಿಮಾದಲ್ಲಿ ಅತಿಥಿ ಚಿತ್ರದ ಚಿತ್ರೀಕರಣ ನಡೆಸಲಿದ್ದಾರೆ ಎಂದು ಮೊದಲೇ ಸುಳಿವು ನೀಡಿದ್ದರು.
ಪಠಾನ್ ಸಿನಿಮಾದ ಶಾರೂಖ್ ಆಕ್ಷನ್ ಲುಕ್ ವೈರಲ್
ಮುಂಬರುವ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗ, ಅದರಲ್ಲಿ ನಟಿಸಿದ್ದಕ್ಕಾಗಿ ನಟ ಹೆಚ್ಚಿನ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಯಶ್ ರಾಜ್ ಫಿಲ್ಮ್ ಪಠಾನ್ ಪಾತ್ರಕ್ಕಾಗಿ 100 ಕೋಟಿ ರೂ ಕೇಳಿದ್ದಾರಂತೆ.
ಇದು ದೃಢೀಕರಿಸಲ್ಪಟ್ಟಿಲ್ಲವಾದರೂ, ಹೀರೋ (2018) ನಂತರದ ಸಿನಿಮಾಗೆ ಇಷ್ಟೊಂದು ಮೊತ್ತ ಕೇಳಿರಲು ಸಾಧ್ಯವಿಲ್ಲ ಎಂದೂ ಹೇಳಲಾಗುತ್ತಿದೆ. ಜೊತೆಗೆ ಪಠಾನ್ 2022ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದುಇದೊಂದು ಬ್ಲಾಕ್ಬಸ್ಟರ್ ಓಪನಿಂಗ್ ಆಗಿರಬಹುದೆಂದು ನಿರೀಕ್ಷಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.