ಬಾಲಿವುಡ್ ಬ್ಯೂಟಿ ಜೊತೆ ವಿಜಯ್ ದೇವರಕೊಂಡ ಹೊಸ ಸ್ಟಂಟ್. ಹೆಲ್ಮೆಟ್ ಇಲ್ಲದೆ ರೋಡಲ್ಲಿ ಹೀಗೆಲ್ಲಾ ಮಾಡೋದು ಸರಿನಾ?
ಟಾಲಿವುಡ್ ಲವರ್ ಬಾಯ್ ವಿಜಯ್ ದೇವರಕೊಂಡ ಈಗ 'ವರ್ಲ್ಡ್ ಫೇಮಸ್ ಲವರ್' ಆಗಿ ಮಿಂಚುತ್ತಿದ್ದಾರೆ. ಚಿತ್ರ ಫ್ಲಾಪ್ ಆಯ್ತೋ ಇಲ್ವೋ ಗೊತ್ತಿಲ್ಲ ಆದರೆ ವಿಜಯ್‌ಗೆ ಕಿಸ್ಸಿಂಗ್ ಬಾಯ್ ಎಂದು ಬ್ರ್ಯಾಂಡ್ ನೇಮ್ ಬಂದಿರುವುದಂತು ಸತ್ಯ.
ಬಾಲಿವುಡ್‌ನಲ್ಲಿ ವಿಜಯ್‌ಗೆ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ. ಕರಣ್ ಜೊಹಾರ್ ನಿರ್ಮಾಣದಲ್ಲಿ ಅನನ್ಯಾ ಪಾಂಡೆಗೆ ಜೋಡಿಯಾಗಿ ಮಿಂಚಲಿರುವ ವಿಜಯ್ ಹೊಸ ಸಾಹಸಕ್ಕೆ ಸೈ ಎಂದಿದ್ದಾರೆ.
undefined
'World famous Lover' ಆಗಲು ಹೋಗಿ, ಪಬ್ಲಿಕ್ಕಲ್ಲಿ ಲುಂಗಿ ಉದುರಿಸಿಕೊಂಡ ವಿಜಯ್?
ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಮೇಲೆ ಅನನ್ಯಾ ಪಾಂಡೆ ಹಿಂತಿರುಗಿ ಕೂತರೆ ವಿಜಯ್ ರೈಡ್ ಮಾಡುತ್ತಿದ್ದಾರೆ. ಇಬ್ಬರೂಈ ದೃಶ್ಯದಲ್ಲಿ ಹೆಲ್ಮೆಟ್ ಧರಿಸಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 'ಫೈಟರ್' ಚಿತ್ರದಲ್ಲಿ ಈ ಜೋಡಿಯನ್ನು ಅದ್ಭುತವಾಗಿ ತೋರಿಸುವ ಸವಾಲು ಪೂರಿ ಜಗನ್ನಾಥ್ ಅವರದ್ದು.
ಪ್ರಭಾಸ್,ಅಲ್ಲು ಅರ್ಜುನ್; ಒಬ್ಬರನ್ನೊಬ್ಬರು ಮೀರಿಸುವ ಸಂಭಾವನೆ ಪಟ್ಟಿ ಇಲ್ಲಿದೆ!
ಪ್ರೀತಿ, ಪ್ರೇಮ ಔರ್ ದೋಖಾ ಚಿತ್ರಗಳಲ್ಲಿ ಮಾತ್ರ ವಿಜಯ್ ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದರೂ ವಿಜಯ್ ತಲೆ ಕೆಡಿಸಿಕೊಳ್ಳದೇ ತನ್ನ ಆಯ್ಕೆ ಪ್ರಕಾರವೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಮಾರ್ಚ್ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ