'JGM'ಗಾಗಿ ಮತ್ತೆ ಒಂದಾದ ವಿಜಯ್ - ಪುರಿ ಜಗನ್ನಾಥ್; ಸೈನಿಕ ಪಾತ್ರದಲ್ಲಿ ದೇವರಕೊಂಡ ಮಿಂಚಿಂಗ್

By Shruiti G Krishna  |  First Published Mar 29, 2022, 7:04 PM IST

ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ 2ನೇ ಸೆಟ್ಟೇರಿದೆ. ಹೊಸ ಚಿತ್ರಕ್ಕೆ ಜೆಜಿಎಂ(JGM) ಟೈಟಲ್ ಇಟ್ಟಿದ್ದಾರೆ. ಇದರ ಪೂರ್ಣ ಹೆಸರು ಜನ ಗಣ ಮನ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 


ಟಾಲಿವುಡ್ ಸೆನ್ಸೇಶನ್ ಸ್ಟಾರ್ ವಿಜಯ್ ದೇವರಕೊಂಡ(Vijay Devarakonda) ಇತ್ತೀಚಿಗಷ್ಟೆ ಲೈಗರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್(Puri Jagannadh) ಅಕ್ಷನ್ ಕಟ್ ಹೇಳಿದ್ದರು. ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಲೈಗರ್ ಸಿನಿಮಾ ಹೇಗಿದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೂ ಮೊದಲೇ ಈ ಜೋಡಿ ಮತ್ತೊಂದು ಅಚ್ಚರಿಕರ ಸುದ್ದಿಯೊಂದಿಗೆ ಅಭಿಮಾನಿಗಳ ಮುಂದೆ ಬಂದಿದೆ.

ಹೌದು, ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ 2ನೇ ಸೆಟ್ಟೇರಿದ್ದು, ಸೈಲೆಂಟ್ ಆಗಿ ಚಿತ್ರೀಕರಣ ಸಹ ಪ್ರಾರಂಭ ಮಾಡಿದ್ದಾರೆ. ಹೊಸ ಚಿತ್ರಕ್ಕೆ ಜೆಜಿಎಂ(JGM) ಟೈಟಲ್ ಇಟ್ಟಿದ್ದಾರೆ. ಇದರ ಪೂರ್ಣ ಹೆಸರು ಜನ ಗಣ ಮನ. ಟೈಟಲ್ ಅನೌನ್ಸ್ ಮಾಡಿದ್ದಲ್ಲದೆ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡಿದ್ದಾರೆ. ಅಂದಹಾಗೆ ಹೊಸ ಸಿನಿಮಾ ಮುಂದಿನ ವರ್ಷ ಆಗಸ್ಟ್ 3ರಂದು ತೆರೆಗೆ ಬರುತ್ತಿದೆ.

Tap to resize

Latest Videos

ಜೆಜಿಎಂ(JGM) ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ವಿಜಯ್ ಸೈನಿಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು ಚಿತ್ರದ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದಾರೆ. ಈಗಾಗಲೇ ಚಿತ್ರದ ಒಂದಿಷ್ಟು ಫೋಟೋಗಳನ್ನು ಸಿನಿಮಾತಂಡ ಹಂಚಿಕೊಂಡಿದ್ದು ವಿಜಯ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾವನ್ನು ಚಾರ್ಮಿ ಕೌರ್, ವಂಶಿ ಪಡಿಪಲ್ಲಿ ಮತ್ತು ಪುರಿ ಜಗನ್ನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಪಕ್ಕಾ ಆಕ್ಷನ್ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ.

Samantha: ವಿಜಯ್​ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಸಮಂತಾ!

ಪುರಿ ಜಗನ್ನಾಥ್ ಪ್ರತಿಕ್ರಿಯೆ

ಈ ಸಿನಿಮಾ ಈವೆಂಟ್ ಅನ್ನು ಸಿನಿಮಾತಂಡ ಮುಂಬೈನಲ್ಲಿ ನಡೆಸಿದ್ದು ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಬಹಿರಂಗ ಪಡಿಸಿದ್ದಾರೆ. ಜೆಜಿಎಂ ಬಗ್ಗೆ ಮಾತನಾಡಿದ ಪುರಿ ಜಗನ್ನಾಥ್, ನಮ್ಮ ಮುಂದಿನ ಸಿನಿಮಾ ಜೆಜಿಎಂ ಘೋಷಣೆ ಮಾಡಲು ತುಂಬಾ ಸಂತೋಷವಾಗುತ್ತದೆ. ಮತ್ತೆ ವಿಜಯ್ ಜೊತೆ ಕೆಲಸ ಮಾಡುತ್ತಿದ್ದೇನೆ. ಇದು ಪಕ್ಕಾ ಆಕ್ಷನ್ ಸಿನಿಮಾವಾಗಿದೆ ಎಂದಿದ್ದಾರೆ.

ವಿಜಯ್ ದೇವರಕೊಂಡ ಮಾತು

ಹೊಸ ಚಿತ್ರದ ಬಗ್ಗೆ ಮಾತನಾಡಿದ ವಿಜಯ್, ನಾನು ಈ ಸಿನಿಮಾದ ಬ್ಗಗೆ ಉತ್ಸುಕನಾಗಿದ್ದೇನೆ. ಇದು ಅತ್ಯಂತ ಗಮನಾರ್ಹ ಮತ್ತು ಸವಾಲಿನ ಸ್ಕ್ರಿಪ್ಟ್ ಆಗಿದೆ. ಈ ಸಿನಿಮಾ ಪ್ರತಿಯೊಬ್ಬ ಭಾರತೀಯನ ಮನ ಮುಟ್ಟುತ್ತದೆ. ಪುರಿ ಅವರ ಕನಸಿನ ಯೋಜನೆಯ ಭಾಗವಾಗಿರುವುದಕ್ಕೆ ತುಂಬಾ ಗೌರವಿದೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

Wedding Rumors: ರಶ್ಮಿಕಾ ಜೊತೆ ಮದುವೆಗೆ ವಿಜಯ್ ದೇವರಕೊಂಡ ರಿಯಾಕ್ಷನ್ ಇದು!

ಚಿತ್ರದ ಹೆಸರು ಪೂರ್ಣ ಇಟ್ಟಿಲ್ಲ. ಯಾಕೆಂದರೆ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಡೆಯುವ ಮಿಷನ್ ಹೆಸರು ಕೂಡ ಜೆಜಿಎಂ ಆಗಿದೆ. ಏಪ್ರಿಲ್ ನಿಂದ ಪೂರ್ಣ ಪ್ರಮಾಣದ ಚಿತ್ರೀಕರಣ ಪ್ರಾರಂಭಮಾಡಲಿದ್ದು, ವಿದೇಶಗಳಲ್ಲಿಯೂ ಶೂಟಿಂಗ್ ಮಾಡುವ ಪ್ಲಾನ್ ಮಾಡಿದೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಯಾರೆಲ್ಲಾ ಇರಲಿದ್ದಾರೆ, ವಿಜಯ್ ದೇವರಕೊಂಡಗೆ ನಾಯಕಿಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿಸಿದೆ. ಸದ್ಯದಲ್ಲೇ ಈ ಎಲ್ಲಾ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.

click me!