ನಾನು ಯಾವುದನ್ನೂ ಮರೆಯಲ್ಲ; ನಾಗ್ ಚೈತನ್ಯ ಜೊತೆಗಿನ ವಿಚ್ಛೇದನ ಬಗ್ಗೆ ಸಮಂತಾ ರಿಯಾಕ್ಷನ್

Published : Apr 11, 2023, 03:53 PM IST
ನಾನು ಯಾವುದನ್ನೂ ಮರೆಯಲ್ಲ; ನಾಗ್ ಚೈತನ್ಯ ಜೊತೆಗಿನ ವಿಚ್ಛೇದನ ಬಗ್ಗೆ ಸಮಂತಾ ರಿಯಾಕ್ಷನ್

ಸಾರಾಂಶ

ಹಳೆದು ಯಾವುದನ್ನೂ ನಾನು ಮರೆಯಲ್ಲ ಎಂದು ಸಮಂತಾ ಹೇಳಿದ್ದಾರೆ. ಶಾಕುಂತಲಂ ಸಿನಿಮಾದ ಪ್ರಚಾರದಲ್ಲಿರುವ ಸಮಂತಾ ಈ ಮಾತನ್ನು ಬಹಿರಂಗ ಪಡಿಸಿದ್ದಾರೆ. 

ಸೌತ್ ಸ್ಟಾರ್ ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಇದೇ ತಿಂಗಳು ರಿಲೀಸ್ ಆಗಲಿದೆ. ಶಾಕುಂತಲಂ ಪ್ರಚಾರ ನಿಮಿತ್ತಾ ಸಮಂತಾ ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಂದರ್ಶನಗಳಲ್ಲಿ ಸ್ಯಾಮ್ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಡುತ್ತಿದ್ದಾರೆ. ಜೊತೆಗೆ ಮಾಡಿ ಪತಿ ನಾಗ ಚೈತನ್ಯ ಅವರಿಂದ ದೂರ ಆದ ಬಳಿಕ ಎದುರಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ ತನ್ನ ಜೀವನದಲ್ಲಿ ಏನನ್ನು ಬದಲಾಯಿಸಿಕೊಳ್ಳಲು ಬಯಸುವುದಿಲ್ಲ ಅಲ್ಲದೇ ತೊಂದರೆಗೆ ಸಿಲುಕಿಕೊಳ್ಳಲು ಬಯಸಲ್ಲ ಎಂದು ಹೇಳಿದ್ದಾರೆ. 

ಸಂದರ್ಶನದಲ್ಲಿ ಸಮಂತಾ ಅವರಿಗೆ ಈ ಹಿಂದಿನ ತಮ್ಮ ಅನುಭವಗಳನ್ನು ಮರೆಯಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿಗ ಸಮಂತಾ, 'ನೀವು ನನ್ನನ್ನು ತೊಂದರೆಗೆ ಸಿಲುಕಿಸುತ್ತಿದ್ದೀರಿ. ನಾನು ಏನನ್ನೂ ಮರೆಯಲು ಬಯಸುವುದಿಲ್ಲ ಏಕೆಂದರೆ ಎಲ್ಲವೂ ನನಗೆ ಜೀವನದಲ್ಲಿ ಏನನ್ನಾದರೂ ಕಲಿಸಿದೆ, ಆದ್ದರಿಂದ ನಾನು ಮರೆಯಲು ಬಯಸುವುದಿಲ್ಲ, ಓ ದೇವರೇ, ನಾನು ಅದನ್ನು ಗಟ್ಟಿಯಾಗಿ ಹೇಳಬೇಕೇ?' ಎಂದು ಹೇಳಿದರು. 

ಬಳಿಕ ಮತ್ತೆ ಮಾತು ಮುಂದುವರೆಸಿದ ಸ್ಯಾಮ್, 'ನಾನು ತೊಂದರೆಗೆ ಸಿಲುಕಲು ಬಯಸಲ್ಲ. ಹಾಗಾಗಿ ಈ ಪ್ರಶ್ನೆಗೆ ನಾನು ಉತ್ತರಿಸಲು ಹೋಗುವುದಿಲ್ಲ. ನಾನು ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಬಯಸುತ್ತೇನೆ ಏಕೆಂದರೆ ಎಲ್ಲವೂ ನನಗೆ ಕಲಿಸಿದ ಪಾಠವಾಗಿದೆ' ಎಂದು ಹೇಳಿದ್ದಾರೆ. ಸಮಂತಾ ಹೇಳಿದ್ದು ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆಯೇ ಎನ್ನುವುದು ಗೊತ್ತಾಗುತ್ತಿದೆ. ಆದರೆ ಎಲ್ಲಿಯೂ ಸ್ಯಾಮ್ ಮಾಜಿ ಪತಿ ನಾಗ ಚೈತನ್ಯ ಅವರ ಬಗ್ಗೆ ನೇರವಾಗಿ ಮಾತನಾಡಿಲ್ಲ. 

ಮಗಳ ನಿರ್ಧಾರಗಳಲ್ಲಿ ಅಲ್ಲು ಅರ್ಜುನ್ ತಲೆ ಹಾಕಲ್ಲ; ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ ನಟಿ ಸಮಂತಾ

ಶಾಕುಂತಲಂ ಬಗ್ಗೆ

ಶಾಕುಂತಲಂ ಸಿನಿಮಾದಲ್ಲಿ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾ ವೀಕ್ಷಿಸಿದ್ದ ಸಮಂತಾ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ಹೊರಹಾಕಿದ್ದರು. 

ಸಮಂತಾ ಕೂಡ ಇಷ್ಟೇ ಬೋಲ್ಡ್ ಆಗ್ತಾರಾ, ಹೇಗಿರಲಿದೆ 'ಸಿಟಾಡೆಲ್‌' ಸೀರಿಸ್?

ಸಿಟಾಡೆಲ್ ವೆಬ್ ಸೀರಿಸ್‌ನಲ್ಲಿ ಸ್ಯಾಮ್

ಶಾಕುಂತಲಂ ಪ್ರಮೋಷನ್  ಜೊತೆಗೆ ಸಮಂತಾ ಸಿಟಾಡೆಲ್ ಭಾರತದ ವರ್ಷನ್ ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಇದು ಪ್ರಿಯಾಂಕಾ ಚೋಪ್ರಾ ನಟನೆಯ ಸಿಟಾಡೆಲ್ ಹಾಲಿವುಡ್ ಸೀರಿಸ್‌ನ ಭಾರತದ ರಿಮೇಕ್ ಆಗಿದೆ. ಇದರಲ್ಲಿ ಸಮಂತಾ ಮತ್ತು ಬಾಲಿವುಡ್ ನಟ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಸಮಂತಾ ಆಕ್ಷನ್ ದೃಶ್ಯಗಳಲ್ಲಿ ಮತ್ತೆ ಮಿಂಚಲಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?