ತಾನು ಸ್ತನ ಕ್ಯಾನ್ಸರ್‌ನಿಂದ ಬಳಲಿ, ಚಿಕಿತ್ಸೆಯ ನಂತರ ತಾವು ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ನಟಿ ಮಹಿಮಾ ಚೌಧರಿ ಗುರುವಾರ ತಿಳಿಸಿದ್ದಾರೆ.
ಕುರುಕ್ಷೇತ್ರ, ಕಿಲಾಡಿ 420 ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮಹಿಮಾ ಚೌಧರಿ ಸ್ತನ ಕ್ಯಾನ್ಸರ್ ಗೆದ್ದಿರುವುದಾಗಿ ತಿಳಿಸಿದ್ದಾರೆ. ಕ್ಯಾಮೆರಾ ನೋಡಿ ನಗುತ್ತಿರುವ ವಿಡಿಯೋ ಹಂಚಿಕೊಂಡ ಮಹಿಮಾ, ಅನುಪಮ್ ಖೇರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಟ ಅನುಪಮ್ ಖೇರ್ ಜೊತೆಗೆ ಮಾತನಾಡಿದ 7 ನಿಮಿಷಗಳ ವಿಡಿಯೋವನ್ನು ಮಹಿಮಾ ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ತಮಗೆ ಕ್ಯಾನ್ಸರ್ ಪತ್ತೆಯಾಗಿದ್ದು ಹಾಗೂ ಅದರ ಚಿಕಿತ್ಸೆ ಪಡೆದಿದ್ದರ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಮಹಿಮಾ ಅವರಿಗೆ ನಟ ಅನುಪಮ ಖೇರ್ ಅವರು ‘ದ ಸಿಗ್ನೇಚರ್’ ಎಂಬ ವೆಬ್ ಸಿರೀಸ್‌ನಲ್ಲಿ ಅವಕಾಶ ನೀಡಿದ್ದರು. ಕ್ಯಾನ್ಸರ್‌ನಿಂದ ಕೂದಲನ್ನು ಕಳೆದುಕೊಂಡ ಸಮಯದಲ್ಲೇ ನಟನೆಗೆ ಅವಕಾಶ ಬಂದಿತ್ತು. ನಂತರ ವಿಗ್ ಧರಿಸಿ ಚಿತ್ರೀಕರಣ ಮಾಡಿರುವುದಾಗಿ ಹೇಳಿದ್ದಾರೆ.
ಮಹಿಮಾ ಕ್ಯಾನ್ಸರ್ ಗೆದ್ದ ಕಥೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಖೇರ್ ಅವರನ್ನು ‘ಹೀರೊ’ ಎಂದು ಕರೆದಿದ್ದಾರೆ.
ಅನುಪಮ್ ಪೋಸ್ಟ್:
'ನನ್ನ 525ನೇ ಸಿನಿಮಾ ದಿ ಸಿಗ್ನೇಚರ್‌ನಲ್ಲಿ ಮಹಿಮಾ ಚೌಧರಿ ನಟಿಸಬೇಕೆಂದು ನಾನು ಒಂದು ತಿಂಗಳ ಹಿಂದೆ ಅವರಿಗೆ ಕರೆ ಮಾಡಿದೆ. ನಮ್ಮ ಸಿನಿಮಾ ಚರ್ಚೆ ನಡುವೆ ಆಕೆಗೆ ಸ್ತನದ ಕ್ಯಾನ್ಸರ್ ಇರುವುದಾಗಿ ತಿಳಿಸಿದರು. ನಾನು ಗಮನಿಸಿದ ಒಂದು ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು. ಮಹಿಮಾಗೆ ಇರುವ ಶಕ್ತಿ ಮತ್ತು ನಂಬಿಕೆ ಬೇರೆ ಹೆಣ್ಣು ಮಕ್ಕಳಿಗೆ ಶಕ್ತಿ ನೀಡುತ್ತದೆ. ಈ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಳ್ಳಬಾರದು ಎಂದು ಮಹಿಮಾ ನನಗೆ ಹೇಳಿದ್ದರು. ನಾನು ಪಾಸಿಟಿವ್ ವ್ಯಕ್ತಿ ಎಂದು ಮಹಿಮಾ ಹೇಳುತ್ತಲೇ ಇರುತ್ತಾರೆ ಆದರೆ ಮಹಿಮಾ ನೀನು ರಿಯಲ್ ಹೀರೋ. ಸ್ನೇಹಿತೆ ನಿನಗೆ ನನ್ನಿಂದ ನನ್ನ ಅಭಿಮಾನಿಗಳಿಂದ ನಿನಗೆ ಪ್ರೀತಿ ಮತ್ತು ಹಾರೈಕೆ. ಆಕೆ ಎಲ್ಲಿ ಸೇರಬೇಕಿತ್ತು ಅಲ್ಲಿಗೆ ಬಂದಿದ್ದಾಳೆ, ಸಿನಿಮಾ ಸೆಟ್. ಈಗ ಆಕೆ ಹಾರುವುದಕ್ಕೂ ರೆಡಿಯಾಗಿದ್ದಾಳೆ. ನಿರ್ದೇಶಕರೇ ಮತ್ತು ನಿರ್ಮಾಪಕರೇ ಕೇಳಿ ಆಕೆ ಸಿನಿಮಾ ಮಾಡಲು ರೆಡಿ. ಆಕೆಗೆ ಅವಕಾಶ ಕೊಟ್ಟಿ ಅವರಲ್ಲಿರು ಪ್ರತಿಭೆಯನ್ನು ಹೊರ ತನ್ನಿ' ಎಂದು ಅನುಪಮ್ ಬರೆದುಕೊಂಡಿದ್ದಾರೆ.
ನಮ್ಮ ಭಾಗ ಯಾರೋ ಕಿತ್ಕೊಳ್ತಿದ್ದಾರೆ ಅನ್ಸುತ್ತೆ; 13 inch ಕೂದಲ ದಾನ ಮಾಡಿದ ನಟಿ!
ಮಹಿಮಾ ಮಾತು:
'ಸಂಪೂರ್ಣ ವಿಡಿಯೋ ನೋಡದೆ ಜನರು ತಪ್ಪು ತಿಳಿದುಕೊಂಡಿದ್ದಾರೆ ನಾನು ಚಿಕಿತ್ಸೆಗೆಂದು ಅಮೆರಿಕಾಗೆ ಹೋಗಿರುವೆ ಎಂದು ಹೇಳಿದ್ದಾರೆ ಆದರೆ ನಾನು ಮುಂಬೈನಲ್ಲಿ ಇರುವೆ. ನಾನು ಸ್ತನ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವೆ. 3-4 ತಿಂಗಳ ಅವಧಿಯಲ್ಲಿ ಎಲ್ಲವೂ ಮುಗಿಯಿತ್ತು. ನನ್ನ ಪುತ್ರಿ ನನ್ನ ಜೊತೆ ಮನೆಯಲ್ಲಿದ್ದಳು. ಕೊರೋನಾ ಸೋಂಕಿರುವ ಕಾರಣ ನಾನು ಶಾಲೆಗೆ ಹೋಗಿ ಯಾವ ರೀತಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟವಿಲ್ಲ ಎಂದು ಹೇಳಿದಳು. ಎರಡು ತಿಂಗಳಗಳ ಕಾಲ ನನಗೋಸ್ಕರ ಆನ್‌ಲೈನ್ ಕ್ಲಾಸ್ ತೆಗೆದುಕೊಂಡಳು. ಕ್ಯಾನ್ಸರ್‌ಗೆ ಚಿಕಿತ್ಸೆ ಇದೆ. ಕ್ಯಾನ್ಸರ್ ಪದ ಜನರನ್ನು ಹೆದರಿಸುತ್ತದೆ ಆದರೆ ಮೆಡಿಕಲ್ ಫೀಲ್ಡ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ನನಗೆ ಗೆಮ್ ರೀತಿ ಸಿಕ್ಕಿದ್ದು ಅನುಪಮ್ ಅವರಿಂದ ಈಗ ನನಗೆ ಅನೇಕ ಆಫರ್‌ಗಳು ಬರುತ್ತಿದೆ' ಎಂದು ಮಹಿಮಾ ಮಾತನಾಡಿದ್ದಾರೆ.