ಬ್ಯಾಡ್ ಕಾಮೆಂಟ್ಸ್‌ ಬಗ್ಗೆ ಪ್ರಿಯಾಂಕಾ ಚೋಪ್ರಾ ಖಡಕ್ ಮಾತು ಕೇಳಿ ಸೋಷಿಯಲ್ ಮೀಡಿಯಾ ಬೆಪ್ ತಕ್ಕಡಿ!

By Shriram Bhat  |  First Published Apr 13, 2024, 1:12 PM IST

ಬಾಲಿವುಡ್‌ನಲ್ಲಿ ದಶಕಗಳಿಗೂ ಹೆಚ್ಚು ಕಾಲ ಮಿಂಚಿ-ಮೆರೆದು ತಮ್ಮದೇ ಆದ ಖ್ಯಾತಿ ಗಳಿಸಿಕೊಂಡು ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿ ಅಲ್ಲೇ ಸೆಟ್ಲ್ ಆಗಿರುವ ಪ್ರಿಯಾಂಕಾ ಚೋಪ್ರಾ ...


ಬಾಲಿವುಡ್‌ನಲ್ಲಿ ಮೆರೆದು ಹಾಲಿವುಡ್ ತಲುಪಿರುವ ನಟಿ ಪ್ರಿಯಾಂಕಾ ಚೋಪ್ರಾ ಕೆಲವೊಂದು ಮಾತುಗಳನ್ನು ಸಂದೇಶದ ರೂಪದಲ್ಲಿ ಸಮಾಜದ ಮುಂದೆ ಹೇಳುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೋವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಸೂಪರ್ ಮಾತೊಂದನ್ನು ಹೇಳಿದ್ದಾರೆ. ವೇದಿಕೆಯ ಮೇಲಿದ್ದ ಪ್ರಿಯಾಂಕಾ ಕೆಳಗೆ ಆಸೀನರಾಗಿದ್ದ ಸಭಿಕರ ಜತೆ 'ನಿಮ್ಮಲ್ಲಿ ಯಾರೆಲ್ಲಾ ಸೋಷಿಯಲ್ ಮೀಡಿಯಾ ಯೂಸ್ ಮಾಡ್ತೀರಾ, ಕೈ ಎತ್ತಿ' ಎಂದಿದ್ದಾರೆ. ಆಲ್‌ಮೋಸ್ಟ್‌ ಅಲ್ ಎಲ್ಲರೂ ಕೈ ಎತ್ತಲು, ನಟಿ ತಮ್ಮ ಮಾತನ್ನು ಮುಂದುವರೆಸಿದ್ದಾರೆ. 

ಹಾಗಿದ್ದರೆ ನಟಿ ಪ್ರಿಯಾಂಕಾ ಚೋಪ್ರಾ ಏನು ಹೇಳಿದ್ದಾರೆ? 'ನೀವೆಲ್ಲರೂ ಸೋಷಿಯಲ್ ಮೀಡಿಯಾ ಉಪಯೋಗಿಸುತ್ತೀರಾ ಎಂದರೆ, ನಿಮಗೆ ಒಂದಲ್ಲ ಒಂದು ಬಾರಿ ಅನುಭವ ಆಗಿರುತ್ತೆ. ಅದೇನೆಂದರೆ, ನೀವು ಮಾಡಿರುವ ಯಾವುದೋ ಪೋಸ್ಟ್, ಯಾವುದೋ ಫೋಟೋ ಅಥವಾ ಯಾವುದೋ ವೀಡಿಯೋಗೆ ಕೆಲವರು ಲೈಕ್ ಮಾಡಿದ್ದರೆ ಕೆಲವರು ಡಿಸ್‌ಲೈಕ್ ಮಾಡಿರುತ್ತಾರೆ. ಕೆಲವರು ತೀರಾ ಕೆಟ್ಟದಾಗಿ ಕಾಮೆಂಟ್ ಮಾಡಿರುತ್ತಾರೆ. ಇನ್ನೂ ಕೆಲವರಂತೂ ಬಹಳ ಕೆಟ್ಟದಾಗಿ ಟೀಕೆ ಮಾಡಿರುತ್ತಾರೆ. ಅವೆಲ್ಲವೂ ನಮ್ಮ ಕಂಟ್ರೋಲ್‌ನಲ್ಲಿ ಇರುವುದಿಲ್ಲ. 

Tap to resize

Latest Videos

ರಾಕಿ ಅಂದ್ರೆ ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್; ಬೇರೆಯದೇ ಆ್ಯಂಗಲ್‌ನಲ್ಲಿ ಅರ್ಥ ಹೇಳ್ಬಿಟ್ರು ಯಶ್!

ನೀವೇ ಏನೇ ಮಾಡಿ ಅಥವಾ ಏನೇ ಹೇಳಿ, ಎಲ್ಲರೂ ಅದನ್ನು ಮೆಚ್ಚಬೇಕಿಲ್ಲ. ಮೆಚ್ಚದವರು, ಟೀಕೆ ಮಾಡುವವರು ಇದ್ದೇ ಇರುತ್ತಾರೆ. ಕೆಲವರು ನೀವು ಏನೇ ಮಾಡಿದರೆ ಅನ್‌ಹ್ಯಾಪಿ ಆಗುತ್ತಲೇ ಇರುತ್ತಾರೆ. ಅವರಿಗೆ ಯಾರೇನು ಮಾಡಿದರೂ ಖುಷಿ ಸಿಗುವುದಿಲ್ಲ, ಅವರು ಯಾರಲ್ಲೂ ಯಾವುದರಲ್ಲೂ ಖುಷಿ ಕಾಣುವುದೇ ಇಲ್ಲ. ಅವರನ್ನು ಮೆಚ್ಚಿಸಲು ಸಾಮಾನ್ಯರಿಂದ ಸಾಧ್ಯವೇ ಇಲ್ಲ. ಅಂಥವರನ್ನು ಮೆಚ್ಚಿಸುವ ಅಗತ್ಯವೂ ಇಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡರೆ ಸಾಕು' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

ರಾಕಿ ಅಂದ್ರೆ ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್; ಬೇರೆಯದೇ ಆ್ಯಂಗಲ್‌ನಲ್ಲಿ ಅರ್ಥ ಹೇಳ್ಬಿಟ್ರು ಯಶ್!

ಬಾಲಿವುಡ್‌ನಲ್ಲಿ ದಶಕಗಳಿಗೂ ಹೆಚ್ಚು ಕಾಲ ಮಿಂಚಿ-ಮೆರೆದು ತಮ್ಮದೇ ಆದ ಖ್ಯಾತಿ ಗಳಿಸಿಕೊಂಡು ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿ ಅಲ್ಲೇ ಸೆಟ್ಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳು ಹಾಗೂ ವೆಬ್‌ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲೂ ಕೂಡ ತಮ್ಮ ನಟನೆ, ನಡತೆ ಹಾಗೂ ಮಾತುಕತೆಗಳಿಂದ ಹಲವು ಸ್ನೆಹಿತರು, ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

ಗೌರಿ ಖಾನ್ ಜತೆ ಬೆಂಗಳೂರಿಗೆ ಬಂದಿದ್ದ ಶಾರುಖ್ ಖಾನ್ ಹಳೆಯ ಫೋಟೋ 'ಚಮತ್ಕಾರ' ಮಾಡ್ತಿದೆ ನೋಡ್ರೀ!

click me!