ಬಡವರ ನೆರವಿಗೆ ಬಂದ ಅಮೀರ್ ಖಾನ್, ಹಿಟ್ಟಿನ ಪ್ಯಾಕ್‌ ಜೊತೆ 15 ಸಾವಿರ ರೂ!

By Suvarna NewsFirst Published Apr 28, 2020, 4:23 PM IST
Highlights

ಬಡವರ ನೆರವಿಗೆ ಧಾವಿಸಿದ ಬಾಲಿವುಡ್ ಸ್ಟಾರ್ ಅಮೀರ್ ಖಾನ್| ಪ್ರತಿಯೊಬ್ಬನಿಗೆು ಒಂದು ಕೆ. ಜಿ ಹಿಟ್ಟು, ಜೊತೆಗೆ ಹದಿನೈದು ಸಾವಿರ ರೂ. ನಗದು| ತಡರಾತ್ರಿ ಬಂದ ಟ್ರಕ್, ಹಿಟ್ಟು ಪಡ್ಕೊಂಡವ್ರಿಗೆ ಸಿಕ್ತು ಹಣ!

ನವದೆಹಲಿ(ಏ.28): ಇಡೀ ವಿಶ್ವವೇ ಕೊರೋನಾ ಸಂಕಟವನ್ನೆದುರಿಸುತ್ತಿದೆ. ಈ ಸಂಕ್ರಮಣ ತಡೆಯಲು ಸರ್ಕಾರ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಹೀಗಿರುವಾಗ ಲಾಕ್‌ಡೌನ್‌ ಪರಿಣಾಮ ಬಡ ವರ್ಗದ ಮೇಲೆ ಬಿದ್ದಿದೆ. ಹೀಗಿರುವಾಗ ಬಡ ವರ್ಗದ ಜನರ ಸಹಾಯಕ್ಕೆ ಸಿನಿ ತಾರೆಯರು, ಉದ್ಯಮಿಗಳು ಹಾಗೂ ಜನ ಸಾಮಾನ್ಯರು ಧಾವಿಸಿದ್ದಾರೆ. ಸದ್ಯ ಈ ಪಟ್ಟಿಗೆ ಬಾಲಿವುಡ್ ನಟ ಅಮೀರ್ ಖಾನ್ ಹೆಸರು ಕೂಡಾ ಸೇರ್ಪಡೆಗೊಂಡಿದೆ. ಅವರು ಇತ್ತೀಚೆಗಷ್ಟೇ ಬಡವರಿಗೆ ಒಂದು ಕೆ. ಜಿ ಹಿಟ್ಟಿನ ಪ್ಯಾಕೆಟ್ ಹಾಗೂ ತಲಾ ಹದಿನೈದು ಸಾವಿರ ರೂಪಾಯಿ ಹಣ ಹಂಚಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅಮೀರ್ ಖಾನ್ ಉಳಿದ ಸಿನಿ ತಾರೆಯರಂತೆ ಅಗತ್ಯವಿರುವವರ ಸಹಾಯಕ್ಕಾಗಿ ಹಣ ಹಾಗೂ ಆಹಾರ ತಲುಪಿಸುವ ನಿರ್ಧಾರ ತೆಗೆದುಕೊಂಡಿದ್ದರು. ತಮ್ಮ ಮಾತಿನ ಸನ್ವಯ ಅಮೀರ್ ಖಾನ್ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ ಸಹಾಯ ಮಾಡಿದ್ದರು. ಇದಾದ ಬಳಿಕ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ನಟ ಅಮೀರ್ ಖಾನ್ ಯಾರಿಗೂ ತಿಳಿಯದಂತೆ ಬಡವರಿಗೆ ಹಿಟ್ಟಿನೊಂದಿಗೆ ಆರ್ಥಿಕವಾಗಿಯೂ ಸಹಾಯ ಮಾಡಿದ್ದಾರೆಂಬ ಸುದ್ದಿ ಹರಿದಾಡಲಾರಂಭಿಸಿದೆ. ಹೀಗಿದ್ದರೂ ಈ ಕುರಿತು ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶಾರುಖ್‌ನನ್ನು ಅಮಿರ್‌ಗೆ ಹೋಲಿಸಿ ಕಾಲೆಳೆದ ಕನ್ನಡದ ನಟಿ; ಅಣುಕಿಸಲು ಕಾರಣವೇನು?

ವೈರಲ್ ಆದ ವಿಡಿಯೋದಲ್ಲೇನಿದೆ?

ಟಿಕ್‌ಟಾಕ್‌ನಲ್ಲಿ ವಿಡಿಯೋ ಒಂದು ವೈರಲ್ ಅಗುತ್ತಿದ್ದು, ಇದರಲ್ಲಿ ಅವರ ಅಭಿಮಾನಿಯೊಬ್ಬ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಏಪ್ರಿಲ್ 23 ರಂದು ರಾತ್ರಿ ನಟ ಅಮೀರ್ ಖಾನ್ ದೆಹಲಿಯ ಸ್ಲಂ ಏರಿಯಾವೊಂದಕ್ಕೆ ತಲಾ ಒಂದು ಕೆ.ಜಿ ಹಟ್ಟಿರುವ ಪ್ಯಾಕೆಟ್‌ಗಳಿಂದ ಟ್ರಕ್‌ ಒಂದನ್ನು ಕಳುಹಿಸಿದ್ದರು. ಟ್ರಕ್ ಒಂದೆಡೆ ನಿಲ್ಲಿಸಿದ ಚಾಲಕ ಹಾಗೂ ಸಿಬ್ಬಂದಿ ಹಿಟ್ಟು ತೆಗೆದುಕೊಳ್ಳಲು ಬನ್ನಿ ಆದರೆ ಒಬ್ಬ ವ್ಯಕ್ತಿಗೆ ಒಂದೇ ಪ್ಯಾಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದರು. ಈ ವೇಳೆ ಅನೇಕ ಮಂದಿ ಒಂದು ಕೆ. ಜಿ. ಹಿಟ್ಟಿಗಾಗಿ ಯಾಕೆ ಹೋಗಬೇಕೆಂದು ಸುಮ್ಮನಾಗಿದ್ದರು. ಆದರೆ ಯಾರಿಗೆ ಆ ಒಂದು ಕೆ. ಜಿ. ಹಿಟ್ಟು ಬಹಳ ಅಗತ್ಯವಿತ್ತೋ ಅವರೆಲ್ಲಾ ತೆರಳಿ ಪಡೆದಿದ್ದರು.

ಆದರೆ ಪ್ಯಾಕೆಟ್ ಪಡೆದು ಮನೆಗೆ ತೆರಳಿ ಅದನ್ನು ತೆರೆದ ಮಂದಿ ಅಚ್ಚರಿಗೊಳಗಾಗಿದ್ದಾರೆ. ಪ್ರತಿ ಪ್ಯಾಕೆಟ್‌ನಲ್ಲೂ ಹಿಟ್ಟಿನೊಂದಿಗೆ ಹದಿನೈದು ಸಾವಿರ ರೂ. ನಗದು ಕೂಡಾ ಇಡಲಾಗಿತ್ತು. ಬಡವರಿಗಷ್ಟೇ ಇದು ತಲುಪಲಿ ಎಂಬ ಉದ್ದೇಶದಿಂದ ಅಮೀರ್ ಖಾನ್ ಹೀಗೆ ಮಾಡಿದ್ದರು. ಯಾರು ಬಹಳ ಹಸಿವಿನಿಂದಿದ್ದರೋ ಅವರಷ್ಟೇ ಒಂದು ಕೆಜಿಯಾದರೂ ಪರ್ವಾಗಿಲ್ಲ ಎಂದು ಹಿಟ್ಟು ಪಡೆದಿದ್ದರು. ಇಂತಹ ಐಡಿಯಾದಿಂದ ಅಗತ್ಯವಿರುವವರಿಗಷ್ಟೇ ಈ ಹಣ ತಲುಪಿದೆ ಎಂದು ಹೇಲಲಾಗಿದೆ.

click me!