ಅಬ್ಬಬ್ಬಾ ! ಬಾಹುಬಲಿ-2ಗೆ ಮೂರು ವರ್ಷ; ಫ್ಯಾನ್ಸ್ ಗೆ ಹಬ್ಬವೋ ಹಬ್ಬ

Suvarna News   | Asianet News
Published : Apr 28, 2020, 01:46 PM IST
ಅಬ್ಬಬ್ಬಾ ! ಬಾಹುಬಲಿ-2ಗೆ ಮೂರು ವರ್ಷ; ಫ್ಯಾನ್ಸ್ ಗೆ ಹಬ್ಬವೋ ಹಬ್ಬ

ಸಾರಾಂಶ

ಸುಮಾರು ಐದು ವರ್ಷಗಳ ಕಾಲ ಒಂದೇ ಚಿತ್ರಕ್ಕೆ ಕೆಲಸ ಮಾಡಿ, ಸೈ ಎನಿಸಿಕೊಂಡ ನಟ ಪ್ರಭಾಸ್. ಅವರ ಬಾಹುಬಲಿ2 ರಿಲೀಸ್ ಆಗ ಮೂರು ವರ್ಷ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಗಲೇ ಟ್ರೆಂಡ್ ಆಗಲು ಶುರುವಾಗಿದೆ. ಹೇಗಿದೆ ಇದರ ಹವಾ?

ಪ್ರಭಾಸ್ , ಕೇವಲ ಟಾಲಿವುಡ್‌ಗಷ್ಟೇ ಸೀಮಿತವಾಗಿದ್ದ ಈ ಹೆಸರು ಇಂದು ಪ್ಯಾನ್ ಇಂಡಿಯಾದ ಬ್ರಾಂಡ್ ಆಗಿದೆ . ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟನಾಗಿ ಈ ಮಿಸ್ಟರ್ ಪರ್ಫೆಕ್ಟ್ ಮಿಂಚುತ್ತಿದ್ದಾರೆ . ಒಂದು ಪಾತ್ರಕ್ಕಾಗಿ ಊಹೆಗೂ ಮೀರಿದಂತೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ರೀತಿ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರಭಾಸ್ ಅಭಿನಯದ ಬಾಹುಬಲಿ 2 ಚಿತ್ರ ಮೂರು ವರ್ಷಗಳ ಸಂಭ್ರಮದಲ್ಲಿದ್ದು  ಅಭಿಮಾನಿಗಳು  #3YrsForMightyBaahubali2 ಹ್ಯಾಶ್ ಟ್ಯಾಗ್ ಮೂಲಕ ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ . 

ನೆಲ ಒರೆಸಿ ಜೂ. ಎನ್‌ಟಿಆರ್‌ಗೆ ಚಾಲೆಂಜ್ ಹಾಕಿದ ರಾಜಮೌಳಿ ...

2002 ರಲ್ಲಿ ನಟನಾಗಿ ತನ್ನ ವೃತ್ತಿ ಜೀವನ ಆರಂಭಿಸಿದ ಪ್ರಭಾಸ್ ಇಂದು ಆಲ್ ಇಂಡಿಯಾ ಸ್ಟಾರ್ ಆಗಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.  ಮಿರ್ಚಿ, ಮಿಸ್ಟರ್ ಪರ್ಫೆಕ್ಟ್ ಹೀಗೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಇವರು ತೆಲುಗು ಚಿತ್ರರಂಗದ  ಸ್ಟಾರ್ ಕಮರ್ಷಿಯಲ್ ನಿರ್ದೇಶಕ ರಾಜಮೌಳಿ ಅವರ ಜೊತೆಗೂಡಿ ಮಾಡಿದ ಬಾಹುಬಲಿ ವಿಶ್ವ ಮಟ್ಟದಲ್ಲಿ ಸದ್ದು  ಮಾಡಿತ್ತು. ಆನಂತರ ಮುಂದುವರಿದ ಭಾಗವಾಗಿ ತೆರೆಕಂಡ ಬಾಹುಬಲಿ 2 ಸಿನಿಮಾ ಬಾಕ್ಸ್ ಆಫೀಸ್  ಧೂಳಿಪಟ ಮಾಡಿತ್ತು. ಅಲ್ಲದೇ ಬಾಹುಬಲಿ ನೋಡಿದ ಪ್ರೇಕ್ಷಕರನ್ನು ಬಹುವಾಗಿ ಕಾಡಿದ್ದ ಪ್ರಶ್ನೆ'ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ?'

ಈ ಪ್ರಶ್ನೆಗೆ ಬಾಹುಬಲಿ2 ರಲ್ಲಿ ಉತ್ತರ ನೀಡಿದ್ದರು ನಿರ್ದೇಶಕ ರಾಜಮೌಳಿ .

ಪ್ರಭಾಸ್ ಅಭಿಮಾನಿಗಳು ಬಾಹುಬಲಿ 2 ರ ಮೂರು ವರ್ಷದ ಸಂಭ್ರಮಾಚರಣೆಯನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತಾಣದಲ್ಲಿ ಶುರುಮಾಡಿದ್ದು, ಟ್ವಿಟ್ಟರ್ ನಲ್ಲಿ #3YrsForMightyBaahubali2  ಟ್ರೆಂಡಿಂಗ್ ಆಗಿದೆ. ಫ್ಯಾನ್ಸ್ ಪ್ರಭಾಸ್ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ . 

'ಬಾಹುಬಲಿ'ಯನ್ನೂ ಮೀರಿಸಿತ್ತು ಅಲ್ಲು ಅರ್ಜುನ್‌ನ 'ಅಲ್ಲ ವೈಕುಂಠಪುರಮುಲೋ' ಕಲೆಕ್ಷನ್!

ಇತ್ತೀಚಿಗೆ ಪ್ರಭಾಸ್ ಅವರು ತಮ್ಮ ಮದುವೆ ವಿಷಯವಾಗಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ . ಮೆಗಾ ಫ್ಯಾಮಿಲಿಗೆ ಅಳಿಯನಾಗುತ್ತಿದ್ದಾರೆ ಎಂಬ ಗಾಸಿಪ್ ಟಾಲಿವುಡ್ನಲ್ಲಿ ಭಾರೀ ಸಂಚಲವನ್ನುಂಟುಮಾಡಿದೆ . ಈ ವಿಷಯ ನಿಜವಾಗಲಿ ಎಂದು ಅವರ ಅದೆಷ್ಟೋ ಅಭಿಮಾನಿಗಳ ಹಾರೈಕೆ ಕೂಡ . ಇದೆಲ್ಲದರ ನಡುವೆ ಬಾಹುಬಲಿ 2  ಸಿನಿಮಾಕ್ಕೆ ಮೂರು ವರ್ಷವಾಗಿರುವುದು ಪ್ರಭಾಸ್ ಮತ್ತು ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ನೀಡಿದೆ.

ಬಾಹುಬಲಿಯಾಗಿ ಬಂದ ಟ್ರಂಪ್.. ವೈರಲ್ ಐಟಮ್ ಗುರು!

ಅತ್ತ ಬಾಹುಬಲಿ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ ಅನುಷ್ಕಾ ಶರ್ಮಾ ಜೊತೆಯಂತೂ ಸದಾ ಮದುವೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಆದರೆ, ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಅಂತ ಅಂಥದ್ದೊಂದು ಹರಿದಾಡಿದಾಗಲೆಲ್ಲ, ಈ ಜೋಡಿ ಸಾರಿ ಸಾರಿ ಹೇಳುತ್ತದೆ. 

ಪ್ರಭಾಸ್ ಅವರ ಲೇಟೆಸ್ಟ್ ಸಿನಿಮಾ ಸಾಹೋ ಬಾಕ್ಸ್ ಆಫೀಸ್‌ನಲ್ಲಿ ಸದ್ದುಮಾಡಿತ್ತಾದರೂ ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಸದ್ಯ ಪ್ರಭಾಸ್ ಅವರು ತಮ್ಮ 20 ನೇ ಪ್ಯಾನ್ ಇಂಡಿಯಾ ಚಿತ್ರದ ತಯಾರಿಯಲ್ಲಿದ್ದು ಇದನ್ನು ನಾಗ್ ಅಶ್ವಿನ್ ಎಂಬುವವರು ನಿರ್ದೇಶಿಸುತ್ತಿದ್ದಾರೆ .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!