ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದ್ವೆಯಾಗಿ ವರ್ಷಗಳೇ ಕಳೆದವೆ. ಇದೀಗ ದಾಂಪತ್ಯ ಜೀವನದ ಕುರಿತು ವಿಕ್ಕಿ ಹೇಳಿದ್ದೇನು?
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನೆರವೇರಿದೆ. 2020ರ ಡಿ.9ರಂದು ಈ ಜೋಡಿ ಹಸೆಮಣೆ ಏರಿದೆ. ಮದುವೆ ಬಳಿಕ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಸಿನಿಮಾದಲ್ಲೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ಜೋಡಿಯಾಗಿ ನಟಿಸಿಲ್ಲ. ಒಂದೆರಡು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಳಿಕ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಅವರ ಪ್ರೀತಿಗೆ ಈಗ ಮದುವೆಯ ಮುದ್ರೆ ಬಿದ್ದಿದೆ. ನಟ ವಿಕ್ಕಿ ಕೌಶಲ್ ಸಾರಾ ಅಲಿ ಖಾನ್ ಜೊತೆ ನಟಿಸಿರುವ, ಇತ್ತೀಚಿಗೆ ಬಿಡುಗಡೆಯಾದ 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಗುಂಗಿನಲ್ಲಿದ್ದಾರೆ. ಕತ್ರಿನಾ ಕೈಫ್ (Katrina Kaif) ಅವರೊಂದಿಗಿನ ವೈವಾಹಿಕ ಜೀವನಕ್ಕಾಗಿ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಮದುವೆಯ ನಂತರದ ಜೀವನದ ಬಗ್ಗೆ ನಟ ಹಲವಾರು ಬಾರಿ ಇದಾಗಲೇ ಮಾತನಾಡಿದ್ದಾರೆ. ತಮ್ಮ ಜೀವನದ ಕುರಿತು ಕೆಲವೊಂದು ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಅವರೊಂದಿಗಿನ ವಿವಾಹವು ತನಗೆ ಕಲಿಸಿದ ಒಂದು ವಿಷಯವನ್ನು ಬಹಿರಂಗಪಡಿಸಿದರು.
ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ಕತ್ರಿನಾ ಕೈಫ್ ಅವರೊಂದಿಗೆ ನ್ಯೂಯಾರ್ಕ್‌ನಲ್ಲಿ (Newyork) ವಿಹಾರಕ್ಕೆ ಬಂದಿರುವ ವಿಕ್ಕಿ ಕೌಶಲ್, ಮದುವೆಯಿಂದ ತಮ್ಮ ದೊಡ್ಡ ಕಲಿಕೆಯನ್ನು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, ಯಾವುದೇ ದಾಂಪತ್ಯವು (Married Life) ಸುಗಮವಾಗಿ ನಡೆಯಲು ತಾಳ್ಮೆ (Patience) ಬಹಳ ಮುಖ್ಯ ಮತ್ತು ಎಲ್ಲವನ್ನೂ ಒಪ್ಪಿಕೊಳ್ಳುವುದು ಇಬ್ಬರಿಗೂ ಸುಲಭವಲ್ಲ. ಮದುವೆಯಾಗಿರುವ ಈ ವರ್ಷಗಳಲ್ಲಿ ವಿಕ್ಕಿ ಕೌಶಕ್, ಮದುವೆಯಾದ ಮೇಲೆ ತಿಳಿವಳಿಕೆ ಮತ್ತು ಪ್ರಬುದ್ಧತೆ ಇರುತ್ತದೆ ಎಂಬುದನ್ನು ಅರಿತಿದ್ದಾರೆ. ಸಂಗಾತಿಯೊಂದಿಗೆ ಒಟ್ಟಾಗಿ ವಿಕಸನಗೊಳ್ಳಲು ತಾಳ್ಮೆ ಮುಖ್ಯ ಎಂದು ವಿಕ್ಕಿ ಕಲಿತಿರುವುದಾಗಿ ತಿಳಿಸಿದ್ದಾರೆ. 'ನಾನು ಯಾವುದೇ ಕ್ಷಣದಲ್ಲಿ ಗಂಡನ ಅತ್ಯುತ್ತಮ ಆವೃತ್ತಿಯಾಗಲು ಪ್ರಯತ್ನಿಸುತ್ತೇನೆ. ನಾನು ನನ್ನ ಹೆಂಡತಿಯನ್ನು (wife) ಪ್ರೀತಿಸುತ್ತೇನೆ, ಕುಟುಂಬವನ್ನು ಪ್ರೀತಿಸುತ್ತೇನೆ, ಜೀವನವನ್ನು ಪ್ರೀತಿಸುತ್ತೇನೆ. ಆದರೆ ನಾನು ಇತರ ಮನುಷ್ಯನಂತೆ ನನ್ನಲ್ಲೂ ಹಲವು ದೋಷಗಳಿವೆ,' ಎಂದಿದ್ದಾರೆ.
Katrina-Vicky Kaushal: ಡಿವೋರ್ಸ್ಗೆ ರೆಡಿಯಾಯ್ತಾ ಕತ್ರಿನಾ-ವಿಕ್ಕಿ ಕ್ಯೂಟ್ ಜೋಡಿ?
ಇತ್ತೀಚೆಗೆ ವಿಕ್ಕಿ ತಮ್ಮ ದಾಂಪತ್ಯದಲ್ಲಿ ಸಂತೋಷವಾಗಿಲ್ಲ ಎಂದು ಹೇಳುವ ಅಸಹ್ಯ ಟ್ವೀಟ್ ವೈರಲ್ ಆಗಿತ್ತು. ಇಬ್ಬರೂ ವಿಚ್ಛೇದನದವರೆಗೆ ಹೋಗಿದ್ದಾರೆ ಎನ್ನಲಾಗಿತ್ತು. ನಟ ನಿಮಿರುವಿಕೆಯ ಅಪಸಾಮಾನ್ಯತೆಯಿಂದ ಬಳಲುತ್ತಿದ್ದಾರೆ ಮತ್ತು ಅವರ ಫೋನ್ ಅನ್ನು ಸಹ ಮುರಿದಿದ್ದಾರೆ ಎಂದು ಅದು ವರದಿ ಮಾಡಿದೆ. ಆದರೆ, ವರದಿಗಳೆಲ್ಲವೂ ಸುಳ್ಳಾಗಿದ್ದು, ಟ್ವೀಟ್ ಸುಳ್ಳು ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ. ಆದರೆ ಬಾಲಿವುಡ್‌ನ ಐಟಿ ಜೋಡಿ ಎಂದು ಟ್ಯಾಗ್ ಹೊಂದಿರುವ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸಂತೋಷದಿಂದ ಮತ್ತು ಒಟ್ಟಿಗೆ ಇದ್ದಾರೆ. ಅವರು ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಿಹಾರ ಮಾಡುತ್ತಿದ್ದಾರೆ.
ಇನ್ನು ಕೆಲಸದ ಕುರಿತು ಹೇಳುವುದಾದರೆ, ಮೇಘನಾ ಗುಲ್ಜಾರ್ (Meghana Guljar) ನಿರ್ದೇಶನದ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಳ್ಳಲಿದ್ದಾರೆ. ದಿವಂಗತ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಅವರ ಜೀವನಾಧಾರಿತ ಚಿತ್ರ. ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮತ್ತೊಂದೆಡೆ, ಟೈಗರ್ ಸರಣಿಯ ಮೂರನೇ ಅಧ್ಯಾಯದಲ್ಲಿ ಸಲ್ಮಾನ್ ಖಾನ್ ಜೊತೆಗೆ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಟೈಗರ್ 3 ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
Sara Ali Khan: ಬಾಯ್ಫ್ರೆಂಡ್ ಶುಭ್ಮನ್ ಗಿಲ್ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ