ಫಸ್ಟ್ ಕಿಸ್ ಶೂಟ್ ಬಳಿಕ ಡೆಟಲ್ ಹಾಕಿ ಬಾಯ್ ತೊಳೆದೆ: ನಟಿ ನೀನಾ ಗುಪ್ತಾ

By Anusha Kb  |  First Published Jun 27, 2023, 9:38 PM IST

ನಟಿ ನೀನಾ ಗುಪ್ತಾ ಅವರು ತಮ್ಮ ಮೊದಲ ಆನ್-ಸ್ಕ್ರೀನ್ ಚುಂಬನದ ಚಿತ್ರೀಕರಣಕ್ಕೆ ಮೊದಲು ಮತ್ತು ನಂತರ ಎಷ್ಟು ಒತ್ತಡ ಹಾಗೂ ಚಿಂತೆಗೊಳಗಾಗಿದ್ದರು ಎಂಬುದನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ.


ಮುಂಬೈ: ನಟಿ ನೀನಾ ಗುಪ್ತಾ ಅವರು ತಮ್ಮ ಮೊದಲ ಆನ್-ಸ್ಕ್ರೀನ್ ಚುಂಬನದ ಚಿತ್ರೀಕರಣಕ್ಕೆ ಮೊದಲು ಮತ್ತು ನಂತರ ಎಷ್ಟು ಒತ್ತಡ ಹಾಗೂ ಚಿಂತೆಗೊಳಗಾಗಿದ್ದರು ಎಂಬುದನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಮುಂಬರುವ ಲಸ್ಟ್ ಸ್ಟೋರೀಸ್ 2 ನಲ್ಲಿ ನಟಿಸಲು ಸಿದ್ಧರಾಗಿರುವ ನೀನಾ ಅವರು ಸಂದರ್ಶನವೊಂದರಲ್ಲಿ ತಮ್ಮ ಮೊದಲ ಆನ್‌ಸ್ಕ್ರೀನ್ ಕಿಸ್ಸಿಂಗ್ ಚಿತ್ರೀಕರಣದ ಕ್ಷಣವನ್ನು ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಶೂಟಿಂಗ್ ಮೊದಲು ಹಾಗೂ ನಂತರ ಬಹಳ ಚಿಂತೆಗೀಡಾಗಿದ್ದ ಅವರು ನಂತರ ಡೆಟಾಲ್‌ನಿಂದ ಹಲವು ಬಾರಿ ಬಾಯಿ ತೊಳೆದೇ ಎಂದು ಹೇಳಿಕೊಂಡಿದ್ದಾರೆ. 1990ರ ದಶಕದ ಆರಂಭದಲ್ಲಿ 'ದಿಲ್ಲಗಿ' ಎಂಬ ಶೋಗೆ ತಾನು ಮೊದಲ ಬಾರಿ ಆನ್‌ಸ್ಕ್ರೀನ್ ಕಿಸ್ಸಿಂಗ್ ದೃಶ್ಯದಲ್ಲಿ ಭಾಗವಹಿಸಬೇಕಾಗಿ ಬಂತು ಎಂದು ನೀನಾ ಅವರು ಹೇಳಿಕೊಂಡಿದ್ದಾರೆ. 

1990ರ ಆ ಸಮಯದಲ್ಲಿ ಟಿವಿ ಪರದೆಯ ಮೇಲೆ ನಟನಟಿಯರ ನಡುವೆ ದೈಹಿಕವಾಗಿ ಆತ್ಮೀಯತೆಯನ್ನು ತೋರಿಸುವುದು ಅಸಾಮಾನ್ಯವಾಗಿತ್ತು. ಆದರೂ ವಾಹಿನಿ ಭಾರತೀಯ ಟಿವಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ಯಾಮರಾ ಮುಂದೆ ಚುಂಬನದ ದೃಶ್ಯ ಎಂದು ಹೇಳಿಕೊಂಡು ಸಂಚಿಕೆಯನ್ನು ಪ್ರಚಾರ ಮಾಡಿತ್ತು. ಆದರೆ ಇದರಿಂದ ಅವರಿಗೆ ಹಿನ್ನಡೆಯಾಯ್ತು. ಚಾನೆಲ್, 'ಒಬ್ಬ ನಟನಾಗಿ ನೀವು ಎಲ್ಲಾ ರೀತಿಯ ದೃಶ್ಯಗಳನ್ನು ಮಾಡಬೇಕು, ಕೆಲವೊಮ್ಮೆ ನೀವು ಕೆಸರಿನಲ್ಲಿ ಹೆಜ್ಜೆ ಹಾಕಬೇಕು, ಕೆಲವೊಮ್ಮೆ ನೀವು ಹಲವಾರು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಬೇಕು' ಎಂದು ಹೇಳುವ ಮೂಲಕ ಈ ದೃಶ್ಯಕ್ಕೆ ಒತ್ತಾಯಿಸಿದ್ದರು ಎಂದು ನಟಿ ನೀನಾ ಅವರು ಅವರು ಬಾಲಿವುಡ್‌ ಇನ್‌ಸೈಡರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

Tap to resize

Latest Videos

ನೀನಾ ಗುಪ್ತಾ ಮಗಳು ಮಸಾಬಾ ಮದುವೆಯಲ್ಲಿ ಪಾಲ್ಗೊಂಡ ತಂದೆ ವಿವಿಯನ್ ರಿಚರ್ಡ್ಸ್

ಆ ಚುಂಬನ ದೃಶ್ಯವನ್ನು ಮತ್ತೆ ನೆನಪು ಮಾಡಿಕೊಂಡ ನೀನಾ, ಹಲವು ವರ್ಷಗಳ ಹಿಂದೆ ನಾನು ದಿಲೀಪ್ ಧವನ್ (Dileep Dhawan) ಜೊತೆ ಧಾರವಾಹಿಯಲ್ಲಿ ನಟಿಸಿದ್ದೆ. ಅದು ಭಾರತೀಯ ಟಿವಿ ಇತಿಹಾಸದಲ್ಲೇ ಮೊದಲ ಲಿಪ್ ಟು ಲಿಪ್‌ (Lip to lip) ಕಿಸ್ಸಿಂಗ್ ದೃಶ್ಯವಿದ್ದ ಧಾರವಾಹಿ ಆಗಿತ್ತು. ಆ ದೃಶ್ಯದಲ್ಲಿ ನಟಿಸಿದ್ದ ನಾನು ಅಂದು ಇಡೀ ರಾತ್ರಿ ನಿದ್ರಿಸಲಿಲ್ಲ, ಏಕೆಂದರೆ ಸಹ ನಟ ನನಗೆ ಸ್ನೇಹಿತನಂತೆಯೂ ಇರಲಿಲ್ಲ, ನಾವು ಕೇವಲ ಪರಿಚಿತರಷ್ಟೇ ಆಗಿದ್ದೆವು. ಅವನು ನೋಡಲು ಚೆನ್ನಾಗಿಯೇ ಇದ್ದ ಆದರೂ ಇಂತಹ ಸಂದರ್ಭಗಳಲ್ಲಿ ಅದ್ಯಾವುದು ವಿಷಯವಾಗುವುದಿಲ್ಲ, ಏಕೆಂದರೆ ನಾನು ದೈಹಿಕವಾಗಿಯೂ ಮಾನಸಿಕವಾಗಿಯೂ ಅದಕ್ಕೆ ಸಿದ್ಧಳಾಗಿರಲಿಲ್ಲ, ನಾನು ತುಂಬಾ ಒತ್ತಡಕ್ಕೊಳಗಾಗಿದ್ದೆ. ಆದರೂ ನಾನು ಆ ಪಾತ್ರಕ್ಕಾಗಿ ನನ್ನನ್ನು ನಾನು ಒಪ್ಪಿಸಿಕೊಂಡೆ ಎಂದು ನೀನಾ ಹೇಳಿದ್ದಾರೆ. 

50ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಮದುವೆಯಾದಾಗ ಹೇಗಿತ್ತು ಮಗಳ ರಿಯಾಕ್ಷನ್‌?

ಅಲ್ಲದೇ ಆ ಸಂದರ್ಭದಿಂದ ಮಾನಸಿಕವಾಗಿ ಹೊರಬರಲು ಬಹಳ ಕಷ್ಟಪಟ್ಟಿದ್ದಾಗಿ ನೀನಾ ಹೇಳಿಕೊಂಡಿದ್ದಾರೆ.  ತಾನೊಬ್ಬಳೂ ನಟಿ, ಹೀಗಾಗಿ ಇದೊಂದು ಸೀನ್ ಅಷ್ಟೇ ಇದರಿಂದ ಕೂಡಲೇ ಹೊರಬರಬೇಕು ಎಂದು ತನ್ನನ್ನು ತಾವೇ ಮಾನಸಿಕವಾಗಿ ಸಿದ್ಧಗೊಳಿಸಿದೆ. ಕೆಲವರಿಗೆ ಕ್ಯಾಮರಾ ಮುಂದೆ ಹಾಸ್ಯ ಮಾಡಲಾಗದು, ಮತ್ತೆ ಕೆಲವರಿಗೆ ಅಳಲಾಗದು ಅದರಂತೆ ಇದು ಕೂಡ ಎಂಬುದನ್ನು ನಾನು ತಲೆಗೆ ತುಂಬಿಸಿಕೊಂಡೆ,  ಮತ್ತು ಆ ದೃಶ್ಯದಲ್ಲಿ ಮಾಡಿದೆ. ಆ ದೃಶ್ಯದ ಶೂಟ್ ಮುಗಿದ ಕೂಡಲೇ ನಾನು ಡೆಟಾಲ್‌ನಿಂದ ನನ್ನ ಬಾಯಿಯನ್ನು ತೊಳೆದುಕೊಂಡೆ. ನನಗೆ ಗೊತ್ತಿಲ್ಲದ ವ್ಯಕ್ತಿಯನ್ನು ಚುಂಬಿಸುವುದು ನನಗೆ ತುಂಬಾ ಕಷ್ಟಕರವಾಗಿತ್ತು ಎಂದು ನೀನಾ ಹೇಳಿಕೊಂಡಿದ್ದಾರೆ. 

ಅದಿತಿ ರಾವ್ ಹೈದರಿ ಮಾಜಿ ಪತಿಯ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ, ಡಿಸೈನರ್ ಮಸಾಬಾ ಗುಪ್ತಾ

ಇತ್ತ ಚಾನೆಲ್‌ನವರು ಈ ಕಿಸ್ಸಿಂಗ್ ದೃಶ್ಯ ಚಿನ್ನವನ್ನು ಬಾಚಲಿದೆ ಎಂದು ಭಾವಿಸಿ ಅದನ್ನೇ ಎಪಿಸೋಡ್‌ನ ಪ್ರಚಾರಕ್ಕೆ ಬಳಸಿಕೊಂಡಿತ್ತು. ಆದರೆ ಅದೇ ಅವರಿಗೆ ಹಿನ್ನಡೆಯಾಯ್ತು. ಆ ಸಮಯದಲ್ಲಿ, ಹೆಚ್ಚು ಟಿವಿ ಚಾನೆಲ್‌ಗಳು ಇರಲಿಲ್ಲ, ಮತ್ತು ಇಡೀ ಕುಟುಂಬದ ಎಲ್ಲರೂ ಜೊತೆಯಾಗಿ  ಒಟ್ಟಿಗೆ ಟಿವಿ ನೋಡುವ ಪರಿಪಾಠವಿತ್ತು. ಇದರಿಂದ ಈ ಚುಂಬನದ ದೃಶ್ಯದ ಬಗ್ಗೆ ಜನ ವಿಚಲಿತರಾಗಿದ್ದರು. ಹೀಗಾಗಿ ಆ ದೃಶ್ಯವನ್ನು ಚಾನೆಲ್‌ನವರು ಸೀರಿಯಲ್‌ನಿಂದ ತೆಗೆದರು ಎಂದು ನೀನಾ ಹೇಳಿದರು. ಇದರ ಜೊತೆ ಉತ್ಸವ್‌ ಧಾರವಾಹಿಯಲ್ಲಿ ಪ್ರೀತಿ ಪ್ರೇಮದ ದೃಶ್ಯದಲ್ಲೂ ನಟಿಸಿದ್ದೇನೆ. ಅದೂ ಕೂಡ ಬಲು ಕಷ್ಟಕರವಾಗಿತ್ತು ಎಂದು ನೀನಾ ಹೇಳಿಕೊಂಡಿದ್ದಾಳೆ. 

ಪ್ರಸ್ತುತ ನೀನಾ ಅವರು ಲಸ್ಟ್ ಸ್ಟೋರೀಸ್ 2 ನಲ್ಲಿ ನಟಿಸುತ್ತಿದ್ದು, ಇದು ನೆಟ್‌ಫ್ಲಿಕ್ಸ್‌ನ 2018 ರ  ಹಿಟ್‌ನ 2ನೇ ಅವತರಣಿಕೆಯಾಗಿದೆ. ಇದರ ಹಿಂದೆ  ವಿಭಿನ್ನ ಚಲನಚಿತ್ರ ನಿರ್ಮಾಣ ತಂಡವಿದ್ದು, ಈ ಬಾರಿಯ ನಾಲ್ಕು ಕಿರುಚಿತ್ರಗಳನ್ನು ಸುಜೋಯ್ ಘೋಷ್ (Sujoy Ghosh), ಅಮಿತ್ ರವೀಂದ್ರನಾಥ್ ಶರ್ಮಾ, ಆರ್ ಬಾಲ್ಕಿ ಮತ್ತು ಕೊಂಕಣ ಸೇನ್ ಶರ್ಮಾ ನಿರ್ದೇಶಿಸಿದ್ದಾರೆ.

click me!