ಎಲ್ಲರ ಮನೆ ದೋಸೆನೂ ತೂತೇ; ಕತ್ರಿನಾ - ವಿಕ್ಕಿ ಕೌಶಲ್‌ ಇಬ್ರೂ ಕಿತ್ತಾಡ್ತಾರಂತೆ ಪ್ರತಿದಿನ

By Shruiti G Krishna  |  First Published Aug 18, 2022, 3:12 PM IST

ಕಾಫಿ ವಿತ್ ಕರಣ್ ಶೋನಲ್ಲಿ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಬಗ್ಗೆ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ಈ ವೇಳೆ ಕರಣ್, ವಿಕ್ಕಿ ಕೌಶಲ್ ಬಳಿ ಕತ್ರಿನಾ ಮತ್ತು ನೀವು ಹೆಚ್ಚು ಜಗಳವಾಡುವುದು ಯಾವ ವಿಚಾರಕ್ಕೆ ಎಂದು ಕೇಳಿದರು. 


ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋ ಪ್ರಾರಂಭವಾಗಿದ್ದು ಅನೇಕ ದಿನಗಳೇ ಆಗಿದೆ. ಕಾಫಿ ವಿತ್ ಕರಣ್ ಸೀಸನ್ 7 ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಶೋನಲ್ಲಿ ಭಾಗಿಯಾಗಿದ್ದರು. ಈ ವಾರ ಬಾಲಿವುಡ್‌ನ ಖ್ಯಾತ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿಕ್ಕಿ ಕೌಶಲ್ ಹಾಜರಾಗಿದ್ದಾರೆ. ಈ ಶೋನಲ್ಲಿ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಎಂದಿನಂತೆ ಸಿದ್ಧಾರ್ಥ್ ಮತ್ತು ವಿಕ್ಕಿ ಕೌಶಲ್ ಕಾಲೆಳೆದಿದ್ದಾರೆ. ವಿಕ್ಕಿ ಬಳಿ, ಕರಣ್ ನಿಮ್ಮ ಲವ್ ಸ್ಟೋರಿಯ ಸಂಪೂರ್ಣ ಕ್ರೆಡಿಟ್ ನನಗೆ ಸೇರಬೇಕು ಎಂದು ಹೇಳಿದರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕಳೆದ ವರ್ಷ ಅದ್ದೂರಿಯಾಗಿ ಮದುವೆಯಾಗಿದ್ದರು. 

ಕಾಫಿ ವಿತ್ ಕರಣ್ ಶೋನಲ್ಲಿ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಬಗ್ಗೆ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ಈ ವೇಳೆ ಕರಣ್ ವಿಕ್ಕಿ ಕೌಶಲ್ ಬಳಿ ಕತ್ರಿನಾ ಮತ್ತು ನೀವು ಹೆಚ್ಚು ಜಗಳವಾಡುವುದು  ಯಾವುದಕ್ಕೆ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ವಿಕ್ಕಿ ಕೌಶಲ್, 'ನಮ್ಮ ಮನೆಯಲ್ಲಿ ಹೆಚ್ಚು ಜಾಗವಿಲ್ಲ, ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ' ಆ ಕಾರಣಕ್ಕೆ ಜಗಳವಾಗುತ್ತದೆ ಎಂದು ವಿಕ್ಕಿ ಹೇಳಿದರು. ಇದಕ್ಕೆ ಕರಣ್ ಜೋಹರ್, 'ನಾನು ನಿಮ್ಮನೆ ನೋಡಿದ್ದೇನೆ ಆದರೆ ನನಗೆ ಹಾಗೆ ಅನಿಸಿಲ್ಲ' ಎಂದು ಹೇಳಿದರು. ಅದಕ್ಕೆ ವಿಕ್ಕಿ ಕೌಶಲ್, 'ಕತ್ರಿನಾ ಈಗಾಗಲೇ ಒಂದುವರೆ ರೂಮ್ ಬಳಸುತ್ತಿದ್ದಾರೆ. ನನಗೆ ಒಂದು ಕಬೋರ್ಡ್ ಇದೆ ಅಷ್ಟೆ. ಸದ್ಯದಲ್ಲೇ ಅದೂ ಕೂಡ ಡ್ರಾಯರ್ ಆಗಬಹುದು' ಎಂದು ಹೇಳಿದರು.   

Tap to resize

Latest Videos

ಇನ್ನು ಕತ್ರಿನಾ ನಟನೆಯ ಯಾವ ಸಿನಿಮಾವನ್ನು ದ್ವೇಷಿಸುತ್ತೀರಾ ಎಂದು ಕರಣ್ ಜೋಹರ್, ವಿಕ್ಕಿ ಕೌಶಲ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ವಿಕ್ಕಿ, ಆಧಿತ್ಯ ರಾಯ್ ಜೊತೆ ನಟಿಸಿದ್ದ ಫಿತೂರ್ ಸಿನಿಮಾ ಇಷ್ಟವಿಲ್ಲ ಎಂದು ಹೇಳಿದರು.  

ಆಲಿಯಾ, ನಾನು ಕುಡಿದು ವಿಕ್ಕಿ ಕೌಶಲ್‌ಗೆ ಫೋನ್ ಮಾಡಿದ್ವಿ; ಇಂಟ್ರಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ ಕರಣ್ ಜೋಹರ್

ಇನ್ನು ಇದೇ ವೇಳೆ ಹಳೆಯ ಸೀಸನ್ ಬಗ್ಗೆಯೂ ಚರ್ಚೆಯಾಗಿದೆ. 2018ರಲ್ಲಿ ಪ್ರಸಾರವಾಗುತ್ತಿದ್ದ ಕಾಫಿ ವಿತ್ ಕರಣ್ ಸೀಸನ್ 6ನಲ್ಲಿ ಭಾಗಿಯಾಗಿದ್ದ ಕತ್ರಿನಾ, ವಿಕ್ಕಿ ಕೌಶಲ್ ಬಗ್ಗೆ ಮಾತನಾಡಿದ್ದರು. ತೆರೆಮೇಲೆ ವಿಕ್ಕಿ ಕೌಶಲ್ ಜೊತೆ ನಾನು ನಟಿಸಿದ್ರೆ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದರು. ಆ ಮಾತನ್ನು ವಿಕ್ಕಿ ಕೌಶಲ್ ನೆನಪಿಸಿಕೊಂಡಿದ್ದಾರೆ. 'ಕಳೆದ ಸೀಸನ್‌ನಲ್ಲಿ ಈ ಕಾರ್ಯಕ್ರಮದಲ್ಲಿ ಏನಾಯಿತು, ಅದು ನಿಜಕ್ಕೂ ನನ್ನ ಕ್ಷಣವಾಗಿತ್ತು. ಯಾಕೆಂದರೆ ಅವರು ನನ್ನ ಬಗ್ಗೆ ತಿಳಿದಿದ್ದಾರೆಯೇ ಎಂಬ ಅಚ್ಚರಿಯಾಗಿತ್ತು. ನಾವು ಯಾವತ್ತು ಭೇಟಿಯಾಗಿರಲಿಲ್ಲ' ಎಂದು ಹೇಳಿದರು.

ಕತ್ರಿನಾ-ವಿಕ್ಕಿಗೆ ಜೀವ ಬೆದರಿಕೆ: ಕಿರಾತಕನನ್ನು ಎರಡೇ ಗಂಟೆಯಲ್ಲಿ ಅರೆಸ್ಟ್‌ ಮಾಡಿದ ಪೊಲೀಸರು!

 ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸದ್ಯ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಸಂತೋಷದ ಜೀವನ ನಡಿಸುತ್ತಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

click me!