#Boycott ವಿಚಾರದಲ್ಲಿ ಅರ್ಜುನ್ ಕಪೂರ್ ಬೆದರಿಕೆ ಹಾಕ್ತಿದ್ದಾರೆ; BJP ಸಚಿವ ಗಂಭೀರ ಆರೋಪ

By Shruiti G Krishna  |  First Published Aug 18, 2022, 12:27 PM IST

ಬಾಯ್ಕಟ್ ವಿಚಾರದಲ್ಲಿ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಸಚಿವ, ಮಧ್ಯ ಪ್ರದೇಶದ ಗೃಹ ಸಚಿವ ಡಾ ನರೋತ್ತಮ್ ಮಿಶ್ರಾ ಆರೋಪ ಮಾಡಿದ್ದಾರೆ. 


ಬಾಲಿವುಡ್‌ಗೆ ಬಾಯ್ಕಟ್ ಭಯ ಹೆಚ್ಚಾಗುತ್ತಿದೆ. ಖಾನ್‌ಗಳ ಸಿನಿಮಾಗಳಿಗೆ ಮಾತ್ರವಲ್ಲದೇ ಬಹುತೇಕ ಚಿತ್ರಗಳು ಬಾಯ್ಕಟ್ ಸಮಸ್ಯೆ ಎದುರಿಸುತ್ತಿವೆ. ಬಾಯ್ಕಟ್ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಬಾಲಿವುಡ್ ಮಂದಿ ಮೌನ ಮುರಿಯುತ್ತಿದ್ದಾರೆ. ಇತ್ತೀಚಿಗೆ ಅನೇಕ ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕಿ ಏಕ್ತ ಕಪೂರ್, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೆ ಅರ್ಜುನ್ ಕಪೂರ್ ಹೇಳಿದ್ದ ಮಾತು ಈಗ ಟ್ರೋಲ್‌ಗೆ ಗುರಿಯಾಗಿದೆ. ಅಲ್ಲದೆ ಬಿಜೆಪಿ ಸಚಿವರೊಬ್ಬರು ಅರ್ಜುನ್ ಕಪೂರ್ ವಿರುದ್ಧ ಕಿಡಿ ಕಾರಿದ್ದಾರೆ. ಬಾಯ್ಕಟ್ ವಿಚಾರದಲ್ಲಿ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಸಚಿವ, ಮಧ್ಯ ಪ್ರದೇಶದ ಗೃಹ ಸಚಿವ ಡಾ ನರೋತ್ತಮ್ ಮಿಶ್ರಾ ಆರೋಪ ಮಾಡಿದ್ದಾರೆ. 

ಇತ್ತೀಚಿಗೆ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಮಾತ್ರವಲ್ಲ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್, ಇನ್ನು ರಿಲೀಸ್ ಆಗಬೇಕಿರುವ ಬ್ರಹ್ಮಾಸ್ತ್ರ ಶಾರುಖ್ ಖಾನ್ ಅವರ ಪಠಾಣ್, ಹೃತಿಕ್ ರೋಷನ್ ಅವರ ವಿಕ್ರಂ ವೇದ ಸಿನಿಮಾಗಳಿಗೂ ಬಾಯ್ಕಟ್ ಭೂತ ಕಾಡುತ್ತಿದೆ. ಬಾಯ್ಕಟ್ ಸಮಸ್ಯೆ ಜೋರಾಗುತ್ತಿದ್ದಂತೆ ಬಾಲಿವುಡ್ ಮಂದಿ ಮೌನ ಮುರಿಯುತ್ತಿದ್ದಾರೆ. ಬಾಯ್ಕಟ್ ಟ್ರೆಂಡ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.  ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿ, ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಬಹಿಷ್ಕಾರದ ಟ್ರೆಂಡ್ ಬಗ್ಗೆ ಮಾತನಾಡಿರುವ ಅರ್ಜುನ್, 'ನಾವು ಯಾವಾಗಲೂ ಕೆಲಸ ಮಾತನಾಡಲಿ ಎನ್ನುವುದನ್ನು ನಂಬಿದ್ದೇವೆ. ಇಷ್ಟು ದಿನ ನಾವು ಮೌನವಾಗಿರುವುದೇ ದೊಡ್ಡ ತಪ್ಪಾಗಿದೆ. ಇದೆಲ್ಲ ಪರವಾಗಿಲ್ಲ. ನಾವು ಇಷ್ಟು ದಿನ ಸಹಿಸಿಕೊಂಡಿದ್ದಕ್ಕೆ ಜನರು ಈಗ ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದ್ಯಾವುದು ಮ್ಯಾಟರ್ ಆಗಲ್ಲ' ಎಂದು ಹೇಳಿದ್ದರು. 

ಇಷ್ಟುದಿನ ಮೌನವಾಗಿರುವುದೇ ದೊಡ್ಡ ತಪ್ಪಾಗಿದೆ; ಬಾಯ್ಕಟ್ ಟ್ರೆಂಡ್‌ಗೆ ಅರ್ಜುನ್ ಕಪೂರ್ ರಿಯಾಕ್ಷನ್

Tap to resize

Latest Videos

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಧ್ಯ ಪ್ರದೇಶ ಗೃಹಸಚಿವ ಡಾ.ನರೋತ್ತಮ್,  ' ಅರ್ಜುನ್ ಕಪೂರ್ ಪ್ರೇಕ್ಷಕರನ್ನು ಬೆದರಿಸುವ ಬದಲು ನಟನೆಯತ್ತ ಗಮನ ಹರಿಸಬೇಕು' ಎಂದು ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಿಶ್ರಾ, 'ನಟ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುವುದು ಒಳ್ಳೆಯದಲ್ಲ. ಪ್ರೇಕ್ಷಕರಿಗೆ ಬೆದರಿಕೆ ಹಾಕುವ ಬದಲು ನಿಮ್ಮ ನಟನೆಯತ್ತ ಗಮನ ಹರಿಸಿ. ತಮ್ಮ ಚಲನಚಿತ್ರಗಳಲ್ಲಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ತುಕ್ಡೆ ತುಕ್ಡೆ ಗ್ಯಾಂಗ್ ಬೆಂಬಲಿಗರು ಸಾರ್ವಜನಿಕರಿಗೆ ಬಹಿಷ್ಕಾರದ ಬೆದರಿಕೆಯನ್ನು ಏಕೆ ಹಾಕುತ್ತಾರೆ?' ಎಂದು ಹೇಳಿದ್ದಾರೆ.

फिल्म अभिनेता का जनता को धमकाना ठीक बात नहीं है। जनता को धमकाने की जगह अपने अभिनय पर ध्यान देना चाहिए।

अपनी फिल्मों में हिंदू धर्म को टारगेट करने वाले टुकड़े-टुकड़े गैंग के हिमायती कलाकार बॉयकॉट पर क्यों जनता को धमकाते हैं? pic.twitter.com/STpxY94GVc

— Dr Narottam Mishra (@drnarottammisra)

ನೆಟ್ಟಿಗರು ಸಹ ಅರ್ಜುನ್ ಕಪೂರ್ ಅವರನ್ನು ಹಿಗ್ಗಾಮುಟ್ಟಾ ಟ್ರೋಲ್ ಮಾಡುತ್ತಿದ್ದಾರೆ. ತರಹೇವಾರಿ ಟ್ರೋಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರೇಕ್ಷಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಅರ್ಜುನ್ ಕಪೂರ್ ಸಿನಿಮಾವನ್ನು ಬಾಯ್ಕಟ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವರು ಅರ್ಜುನ್ ಕಪೂರ್ ವೃತ್ತಿಜೀವನಕ್ಕೆ ಬಾಯ್ಕಟ್ ಪರಿಣಾಮ ಬೀರಲ್ಲ ಏಕೆಂದರೆ ಅವರಿಗೆ ವೃತ್ತಿ ಜೀವನವೇ ಇಲ್ಲ ಎಂದು ಕಾಲೆಳೆಯುತ್ತಿದ್ದಾರೆ.

Arjun Kapoor wants Bollywood to unite against boycotts is such selfless gesture.

Boycott doesn't make any impact to his career anyway because he has no career whatsoever.

— Snehal 🇮🇳 (@Saffron_Sn)


'ಲಾಲ್ ಸಿಂಗ್ ಚಡ್ಡಾ' ನಂತರ 'ಬ್ರಹ್ಮಾಸ್ತ್ರ'; ಈ ಕಾರಣಗಳಿಂದ ಚಿತ್ರಕ್ಕೆ ಬಹಿಷ್ಕಾರ!

ಅರ್ಜುನ್ ಕಪೂರ್ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಸದ್ಯ ಅರ್ಜುನ್ ಕಪೂರ್ ಲೇಡಿ ಕಿಲ್ಲರ್, ಕುಟ್ಟಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ಅರ್ಜುನ್ ಕಪೂರ್ ಮಲೈಕಾ ಅರೋರಾ ಜೊತೆಗಿನ ಪ್ರೀತಿ, ಡೇಟಿಂಗ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. 
  

click me!