Shiva Shankar passes away: ಹಿರಿಯ ಕೊರಿಯೋಗ್ರಫರ್ ಕೊರೋನಾದಿಂದ ಸಾವು

By Suvarna NewsFirst Published Nov 29, 2021, 8:40 AM IST
Highlights
  • Shiva Shankar passes away: ಬಾಲಿವುಡ್‌ನ ಖ್ಯಾತ ಕೊರಿಯೋಗ್ರಫರ್ ಇನ್ನಿಲ್ಲ
  • ಕೊರೋನಾದಿಂದ ಹಿರಿಯ ನೃತ್ಯ ನಿರ್ದೇಶಕ ಸಾವು

ಬಾಲಿವುಡ್‌ನ(Bollywood) ಹಿರಿಯ ಕೊರಿಯೋಗ್ರಫರ್(Choreographer) ಶಿವ ಶಂಕರ್ ಮಾಸ್ಟರ್ (Shiva Shankar Master) ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಕಾರ್ಪರೇಟ್ ಆಸ್ಪತ್ರೆ ಗಚಿಬೌಲಿಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ ಶಿವ ಶಂಕರ್ ಅವರು ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಸುಗನ್ಯ ಹಾಗೂ ವಿಜಯ್ ಅಜಯ್ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನಟನ ಶ್ವಾಸಕೋಶದ ಶೇ.90ರಷ್ಟು ಭಾಗದಲ್ಲಿ ವೈರಸ್ ದಾಳಿ ಮಾಡಿತ್ತು ಎನ್ನಲಾಗಿದೆ. ಕೃತಕ ವೆಂಟಿಲೇಟರ್ ಬೆಂಬಲದಲ್ಲಿ ನಟ ಬದುಕುಳಿದಿದ್ದರು. ಕೊರೋನಾದಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಗಚಿಬೌಲಿಯ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರ ಪತ್ನಿ ಸುಗನ್ಯ ಹಾಗೂ ಹಿರಿಯ ಸಹೋದರಿ ವಿಜಯ್ ಶಿವಶಂಕರ್ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸುಗನ್ಯ ಮನೆಯಲ್ಲೇ ಹೋಂ ಐಸೋಲೇಷನ್‌ನಲ್ಲಿದ್ದರೆ ಪುತ್ರ ವಿಜಯ್ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಏಸ್ ಕೊರಿಯೋಗ್ರಫರ್ ಶಿವ ಶಂಕರ್ ಅವರ ಪುತ್ರ ಅಜಯ್ ಶಿವಶಂಕರ್ ಅವರು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ತಂದೆಯ ಚಿಕಿತ್ಸೆಗೆ ಆರ್ಥಿಕ ನೆರವು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಟ ಚಿರಂಜೀವಿ, ಸೋನು ಸೂದ್, ಧನುಷ್ ಅವರು ಹಿರಿಯ ನೃತ್ಯ ನಿರ್ದೇಶಕನಿಗೆ ಆರ್ಥಿಕ ನೆರವು ಒದಗಿಸಿದ್ದರು.

Heartbroken to hear about the demise of Shiv Shankar masterji. Tried our best to save him but God had different plans. Will always miss you masterji.
May almighty give strength to the family to bear this loss.
Cinema will always miss u sir 💔 pic.twitter.com/YIIIEtcpvK

— sonu sood (@SonuSood)

Sonu Sood Help:ಶ್ವಾಸಕೋಶ ಹಾನಿಯಿಂದ ಶಿವ ಶಂಕರ್ ಆರೋಗ್ಯ ಗಂಭೀರ

Sad to know that reknowned choreographer Shiva Shankar Master garu has passed away. Working with him for Magadheera was a memorable experience. May his soul rest in peace. Condolences to his family.

— rajamouli ss (@ssrajamouli)

ಡಿಸೆಂಬರ್ 7, 1948 ರಂದು ಚೆನ್ನೈನಲ್ಲಿ ಜನಿಸಿದ ಶಿವ ಶಂಕರ್ 'ಮಾಸ್ಟರ್' ಅವರು ಚಿತ್ರರಂಗದಲ್ಲಿ ಅತ್ಯಂತ ಖ್ಯಾತ ಕೊರಿಯೋಗ್ರಫರ್ ಆಗಿ ಎಲ್ಲರಿಗೂ ಪರಿಚಿತರು. 10 ಭಾಷೆಗಳನ್ನು ಒಳಗೊಂಡ ಸುಮಾರು 800 ಸಿನಿಮಾಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಶಾಸ್ತ್ರೀಯ ನೃತ್ಯದಲ್ಲಿ ಶಿವಶಂಕರ್ ಅವರಿಗಿದ್ದ ಬಲವಾದ ಅಡಿಪಾಯವೇ ಅವರು ಎಲ್ಲಾ ಪ್ರಕಾರದ ನೃತ್ಯಗಳಿಗೆ ಕೊರಿಯೋಗ್ರಾಫ್ ಮಾಡಲು ಸಹಾಯ ಮಾಡಿತು. ರಾಜಮೌಳಿಯವರ ಮಘಧೀರದಲ್ಲಿರುವ ‘ಧೀರ ಧೀರ...’ನೃತ್ಯ ಸಂಯೋಜನೆಯು ಅವರಿಗೆ 2011 ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.

ಬಹುಮುಖ ಕಲಾವಿದ, ಹಿರಿಯ ನೃತ್ಯ ನಿರ್ದೇಶಕ ಸಲೀಂ ಅವರ ಬಳಿ ತರಬೇತಿ ಪಡೆದ ಶಿವಶಂಕರ್, ಕೆಲವು ನಿರ್ದೇಶಕರ ಕೋರಿಕೆಯ ಮೇರೆಗೆ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದಾರೆ. ಟಿವಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಮನೆಮಾತಾಗಿದ್ದರು. ಕೆಲವು ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಶಿವಶಂಕರ್ ಚೆನ್ನೈನಿಂದ ಹೈದರಾಬಾದ್‌ಗೆ ತೆರಳಿದ್ದರು.

ತೆಲುಗು ಚಿತ್ರರಂಗದ ಗಣ್ಯರು ಟ್ವಿಟರ್‌ನಲ್ಲಿ ನಿಧನರಾದ ನೃತ್ಯ ನಿರ್ದೇಶಕರಿಗೆ ಸಂತಾಪ ಸೂಚಿಸಿದ್ದಾರೆ. ಹಿರಿಯ ನೃತ್ಯ ನಿರ್ದೇಶಕರ ಅಕಾಲಿಕ ನಿಧನಕ್ಕೆ ಚಿರಂಜೀವಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಟ್ವಿಟ್ಟರ್ ಶ್ರದ್ಧಾಂಜಲಿಯಲ್ಲಿ ಹೀಗೆ ಹೇಳಿದ್ದಾರೆ: 'ಖ್ಯಾತ ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್ ಅವರು ನಿಧನರಾಗಿದ್ದಾರೆಂದು ತಿಳಿದು ದುಃಖವಾಗಿದೆ. ಮಗಧೀರ ಚಿತ್ರಕ್ಕೆ ಅವರೊಂದಿಗೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಅವರ ಆತ್ಮಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಸಂತಾಪಗಳು ಎಂದು ಬರೆದಿದ್ದಾರೆ.

ಶಿವಶಂಕರ ಮಾಸ್ತರ್‌ಜಿ ಅವರ ನಿಧನದ ಸುದ್ದಿ ಕೇಳಿ ಹೃದಯವಿದ್ರಾವಕವಾಯಿತು. ಅವರನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ ದೇವರಿಗೆ ಬೇರೆ ಪ್ಲಾನ್ ಇತ್ತು. ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಮಾಸ್ಟರ್ಜಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ. ಸಿನಿಮಾ ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತದೆ ಸರ್ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ. ಅವರ ನಿಧನಕ್ಕೆ ನಟರಾದ ಪವನ್ ಕಲ್ಯಾಣ್ ಮತ್ತು ರಾಮ್ ಚರಣ್ ಕೂಡಾ ಸಂತಾಪ ಸೂಚಿಸಿದ್ದಾರೆ.

ತಮಿಳಿನಲ್ಲಿ ನಿರ್ದೇಶಕ ಬಾಲಾ ಅವರ ಪರದೇಸಿ, ಇಂಡ್ರು ನೇಟ್ರು ನಾಲೈ ಮತ್ತು ವಿಘ್ನೇಶ್ ಶಿವನ್ ನಿರ್ದೇಶಿಸಿದ ಸೂರ್ಯ-ನಟಿಸಿದ ತಾನಾ ಸೇರ್ದ ಕೂಟಂಗಳಲ್ಲಿ ಇವರು ನಟಿಸಿದ್ದಾರೆ.

click me!