Maanadu:ವೇದಿಕೆ ಮೇಲೆ ಗಳ-ಗಳನೆ ಅತ್ತ ನಟ ಸಿಂಬು!

By Suvarna News  |  First Published Nov 28, 2021, 4:41 PM IST

ಸಿನಿಮಾ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದ್ದಕ್ಕೆ ವೇದಿಕೆಯ ಮೇಲೆ ಭಾವುಕರಾದ ನಟ ಸಿಂಬು...


ತಮಿಳು (Kollywood) ಚಿತ್ರರಂಗದ ಸಿಂಪಲ್ ನಟ ಸಿಂಬು (Simbu) ನಟನೆಯ 'ಮಾನಾಡು' (Maanadu) ಸಿನಿಮಾ ಬಿಡುಗಡೆಯಾಗಿ, ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿ ರಸಿಕರು ಮತ್ತು ನೆಟ್ಟಿಗರ ಪ್ರತಿಕ್ರಿಯೆ ನೋಡಿ ಇಡೀ ತಂಡ ಸಂತಸದಲ್ಲಿದೆ. ಈ ಸಂಭ್ರಮವನ್ನು ಇನ್ನೂ ಅದ್ಧೂರಿ ಮಾಡಬೇಕು ಎಂದು ತಂಡ ಕೇಕ್ ಕಟ್ ಮಾಡುವ ಮೂಲಕ ಸಕ್ಸಸ್ ಸೆಲೆಬ್ರೇಟ್ ಮಾಡಿದ್ದಾರೆ. ಈ ವೇಳೆ ನಟ ಸಿಂಬು ಭಾವುಕರಾಗದಿದ್ದಾರೆ. 

ಮಾನಾಡು ಸಿನಿಮಾ ದೀಪಾವಳಿ ಹಬ್ಬದ (Diwali) ದಿನ ಬಿಡುಗಡೆಯಾಗಬೇಕಿತ್ತು. ಆದರೆ ಒಂದೊಂದೇ ತೊಂದರೆಗಳು ಎದುರಾಗುತ್ತಿದ್ದ ಕಾರಣ ಇದೇ ತಿಂಗಳು 25 ಬಿಡುಗಡೆ ಮಾಡಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್ (Box Office collection) ನೋಡಿ ಶಾಕ್ ಆದ ಸಿಂಬು, ಪ್ರೆಸ್‌ಮೀಟ್ ನಡೆಸುವ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ನನ್ನನ್ನು ನೋಡಿಕೊಳ್ಳಬೇಕು. ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವೆಯ ನೀವೇ ನನ್ನನ್ನು ಬೆಳಸಬೇಕು ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಂಬು ಅಳುತ್ತಿರುವ ವಿಡಿಯೋ ವೈರಲ್ ಅಗುತ್ತಿದೆ. 

Tap to resize

Latest Videos

ಪಾಲಿಟಿಕಲ್ ಫಿಕ್ಷನ್ (Political si-fiction) ಸಿನಿಮಾ ಇದಾಗಿದ್ದು, ತಮಿಳುನಾಡಿನಲ್ಲಿ (Tamil Nadu) ಮೊದಲ ದಿನ 7 ಕೋಟಿ ಕಲೆಕ್ಷನ್ ಮಾಡಿದೆ ಹಾಗೂ ಎರಡನೇ ದಿನ 5 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದೇ ಮೊದಲ ಬಾರಿ ಸಿಂಬು ಅವರ ಸಿನಿಮಾ ಎರಡೇ ದಿನಗಳಲ್ಲಿ ಕೋಟಿಯಲ್ಲಿ ಗಳಿಸುತ್ತಿರುವುದು. ಚಿತ್ರದಲ್ಲಿ ಸಿಂಬು ಮುಸ್ಲಿಂ ಯುವಕ (Muslim Boy) ಅಬ್ದುಲ್ ಖಾಲಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಎಸ್‌ಜಿ ಸೂರ್ಯ ಪೊಲೀಸ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. 

ಮಾನಾಡು ಚಿತ್ರದಲ್ಲಿ ಮುಸ್ಲಿಂ ಯುವಕ ಅಬ್ದುಲ್ ಎಂಬಾತ ಮುಖ್ಯಮಂತ್ರಿಗಳ (Chief Minister) ಹತ್ಯೆಗೆ ಕಾರಣವಾದ ಮತ್ತೊಬ್ಬ  ಮುಸ್ಲಿಂ ವ್ಯಕ್ತಿಯೊಬ್ಬನನ್ನು ಬಂಧಿಸದಂತೆ ತಡೆಯಲು ಮುಂದಾಗುತ್ತಾನೆ. ಹೀಗಾಗಿ ಈ ಚಿತ್ರವನ್ನು ನಿಷೇಧಿಸಬೇಕು ಎಂಬ ಬಿಜೆಪಿ ಅಲ್ಪಸಂಖ್ಯಾತರ ತಂಡದ ಕಾರ್ಯದರ್ಶಿ ವೆಲ್ಲೂರು ಇಬ್ರಾಹಿಂ ಅವರು ಮಾಧ್ಯಮಗಳ ಮೂಲಕ ಆಗ್ರಹಿಸಿದ್ದರು. ಮಾನಾಡು ಚಿತ್ರದಲ್ಲಿ ಪೊಲೀಸರನ್ನು ಟೆರರಿಸ್ಟ್ ರೀತಿ ತೋರಿಸಲಾಗಿದೆ. ಕೊಯಮತ್ತೂರು ಬಾಂಬ್ ಸ್ಫೋಟ ಬಗ್ಗೆ ತಪ್ಪು ಮಾಹಿತಿ ತೋರಿಸಲಾಗಿದೆ. ಹಿಂದೂ- ಮುಸ್ಲಿಂ ಏಕತೆ ಮುರಿಯಲು ಈ ರೀತಿ ಸಿನಿಮಾ ಮಾಡಿದ್ದಾರೆ. ಧರ್ಮ ಹಿಡಿದುಕೊಂಡು ಸಿನಿಮಾ ಮೂಲಕ ದುಡ್ಡು ಮಾಡುವ ಪ್ಲಾನ್ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ನನ್ನ ಮನವಿಯನ್ನು ಪರಿಗಣಿಸಿ ತಪ್ಪು ಸಂದೇಶ ಸಾರುತ್ತಿರುವ ದೃಶ್ಯವನ್ನು ಕಟ್ ಮಾಡಿಸಬೇಕು,' ಎಂದು ಇಬ್ರಾಹಿಂ ಮಾತನಾಡಿದ್ದರು. 

ಸಿಂಬು ವೃತ್ತಿ ಜೀವನದಲ್ಲಿ ಇಂತಹ ಅದ್ಭುತ ಸಿನಿಮಾ ಮಾಡಿರಲಿಲ್ಲ ಖಂಡಿತ  100 ದಿನಗಳು ಉಳಿಯುತ್ತದೆ ಎಂದು ನೆಟ್ಟಿಗರು ಟ್ವಿಟರ್‌ನಲ್ಲಿ ವಿಮರ್ಶೆ ಹಂಚಿಕೊಂಡಿದ್ದಾರೆ. ವೆಂಕಟ್ ಪ್ರಭು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸುರೇಶ್ ಬಂಡವಾಳ ಹಾಕಿದ್ದಾರೆ ಹಾಗೇ ಕಲ್ಯಾಣಿ ಮತ್ತು ಪ್ರಿಯದರ್ಶಿಣಿ ನಟಿಸಿದ್ದಾರೆ.

ಇದ್ದಕ್ಕಿದ್ದಂತೆ 15 ಕೆಜಿ ತೂಕ ಇಳಿಸಿಕೊಂಡ ನಟ ಸಿಂಬು; ಅಭಿಮಾನಿಗಳಿಗೆ ಬಿಗ್ ಶಾಕ್!

ಚಿತ್ರವನ್ನು ಸುರಿಶ್ ಕಾಮಾಚಿ ನಿರ್ಮಿಸಿದ್ದು, ಚಿತ್ರದ ಯಶಸ್ಸನ್ನು ಸಂಭ್ರಮಿಸಲು ತಂಡದೊಂದಿದೆ ಪಾರ್ಟ ಏರ್ಪಡಿಸಿದ್ದರು. ಚಾಕೋಲೇಟ್ ಕೇಕ್ ಕಟ್ ಮೂಲಕ ಚಿತ್ರದ ರಿಲೀಸ್ ಮತ್ತು ಈ ಚಿತ್ರಕ್ಕೆ ಸಿಕ್ಕಿರುವ ಯಶಸ್ಸನ್ನು ಚಿತ್ರ ತಂಡ ಸಂಭ್ರಮಿಸಿತು. ಚಿತ್ರದ ನಿರ್ಮಾಪಕರೇ ಈ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಕೆಲವು ಗಣ್ಯರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶೇರ್ ಮಾಡಿಕೊಂಡಿರುವ ಫೋಟೋಗಳಲ್ಲಿ ಸುರೇಶ್ ಸಿಂಬುವಿಗ ಕೇಕ್ ತಿನ್ನಿಸುತ್ತಿದ್ದಾರೆ.  ಈಗಾಗಲೇ ಈ ಚಿತ್ರ ಗುರುವಾರ 5 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ಶುಕ್ರವಾರ 5 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಸಂಬು ಅಲಿಯಾಸ್ ಸಿಲಂಬರಸನ್‌ ಸದ್ಯ 'ವೆಂದು ತಾನಿಂಧತ್ತು ಕಾದು' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದ ವೇಳೆ ಕ್ಯಾರಾವ್ಯಾನ್‌ನಲ್ಲಿ ಸೆರೆ ಹಿಡಿದ ಫೋಟೋವನ್ನು ಹಂಚಿಕೊಂಡು, ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ.ವೃತ್ತಿ ಜೀವನದಲ್ಲಿ ಸಿಂಬು ಇದೇ ಮೊದಲ ಬಾರಿ ಇಂಥ ನಿರ್ಧಾರ ಕೈಗೊಂಡಿರುವುದು. ಬರೋಬ್ಬರಿ 15ಕೆಜಿ ತೂಕ ಇಳಿಸಿಕೊಂಡು ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದ್ದು, ಗೌತಮ್‌ ಮೆನನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಆರಂಭದಲ್ಲಿ ಸಿಂಬು ಇದ್ದ ಸೈಜ್ ಹಾಗೂ ಈಗ ಇರುವ ಸೈಜ್ ಫೋಟೋ ಹಂಚಿಕೊಂಡು ಫಸ್ಟ್‌ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

click me!