ರೊಮ್ಯಾಂಟಿಕ್ ಪ್ಲೇಸಲ್ಲೂ ಜಯಾ ಬಚ್ಚನ್ ಮೂಡ್ ಆಫ್, ಎಲ್ಲಿ ಹೋದರೂ ಜಯಾದ್ದು ಬರೀ ಇದೇ ಆಯ್ತೆಂದ ನೆಟ್ಟಿಗರು!

By Roopa Hegde  |  First Published Jul 17, 2024, 2:36 PM IST

ಅಮಿತಾಬ್ ಬಚ್ಚನ್ ಪ್ರೀತಿಯಲ್ಲಿ ಒಂದು ಕೈ ಮುಂದಿದ್ದಾರೆ. ಯಾವುದೇ ಸಮಯದಲ್ಲೂ ಜಯಾ ಬಚ್ಚನ್ ಬಿಟ್ಟು ಕೊಡದ ಅಮಿತಾಬ್ ನೋಡಿದ್ರೆ ಅಭಿಮಾನಿಗಳು ಹೊಟ್ಟೆ ಉರಿದುಕೊಳ್ತಾರೆ. ಮಳೆಯಲ್ಲಿ ಪತ್ನಿಗೆ ಬಚ್ಚನ್ ಛತ್ರಿ ಹಿಡಿದ್ರೂ ಜಯಾ ಮಾತ್ರ ಮುಖ ಊದಿಸಿಕೊಂಡಿದ್ದಾರೆ.
 


ಮಳೆಯಲ್ಲಿ ಜೊತೆಯಾಗಿ ನಡೆಯೋದು ಸುಂದರ ಅನುಭವ… ಅದೂ ಬಾಲಿವುಡ್ ನ ಸೂಪರ್ ಸ್ಟಾರ್ ಜೋಡಿಯನ್ನು ಒಂದೇ ಛತ್ರಿಯಡಿ ನೋಡಲು ಅಭಿಮಾನಿಗಳು ಇಷ್ಟಪಡ್ತಾರೆ. ಪ್ರೀತಿ, ರೋಮ್ಯಾನ್ಸ್, ಕೇರ್ ಗೆ ವಯಸ್ಸಿನ ಮಿತಿ ಇಲ್ಲ. 81ರ ಹರೆಯದಲ್ಲೂ ಬಾಲಿವುಡ್ ಬಿಗ್ ಬಿ ಪ್ರೀತಿ ತೋರಿಸೋದ್ರಲ್ಲಿ ಹಿಂದೆ ಬಿದ್ದಿಲ್ಲ. ಆದ್ರೆ ಪತ್ನಿ ಜಯಾ ಬಚ್ಚನ್ ಮುಖ ಮಾತ್ರ ಯಾವಾಗ್ಲೂ ಊದಿರುತ್ತೆ. 

ಸಾಮಾಜಿಕ ಜಾಲತಾಣದಲ್ಲಿ ಈಗ ಅಮಿತಾಬ್ ಬಚ್ಚನ್ (Amitabh Bachchan) ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋ ನೋಡಿದ ಜನರು ಬಿಗ್ ಬಿಯನ್ನು ಮೆಚ್ಚಿಕೊಂಡಿದ್ದಾರೆ. ಆದ್ರೆ ಜಯಾ (Jaya) ಬಚ್ಚನ್ ಮೇಲೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಮುಂಬೈ ಮಳೆಯಲ್ಲಿ ಅಮಿತಾಬ್ ಬಚ್ಚನ್, ಪತ್ನಿಗೆ ಛತ್ರಿ (Umbrella) ಹಿಡಿದಿದ್ದಾರೆ.

Tap to resize

Latest Videos

ಆರ್ಯವರ್ಧನ್​ ಗುರೂಜಿ, ಪ್ರಥಮ್​... ಅಬ್ಬಾ ಇಷ್ಟು ಮಂದಿ ಡಾನ್ಸ್​ ಮಾಡ್ತಾರಾ? ಸ್ಪರ್ಧಿಗಳ ನೋಡಿ ಜಡ್ಜಸ್ ಸುಸ್ತು!

ಅಮಿತಾಬ್ ಬಚ್ಚನ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ಅವರ ಪತ್ನಿ ಜಯಾ ಬಚ್ಚನ್ ಇದ್ದು, ಪತ್ನಿಗೆ ಛತ್ರಿ ಹಿಡಿದಿರುವ ಫೋಟೋ ಹಾಕಿದ ಬಚ್ಚನ್, T 5074 - ಪ್ರತಿದಿನ ಮಳೆ ಬೀಳುತ್ತಿದೆ..ಕೆಲಸದ ಸ್ಥಳದಲ್ಲಿಯೂ ಸಹ ಎಂದು ಈ ಫೋಟೋಕ್ಕೆ ಅಮಿತಾಬ್ ಬಚ್ಚನ್ ಶೀರ್ಷಿಕೆ ಹಾಕಿದ್ದಾರೆ. ಈ ಫೋಟೋದಲ್ಲಿ ಜಯಾ ಬಚ್ಚನ್ ಲಡ್ಡು ಹಿಡಿದು ಕೆಳಗೆ ನೋಡ್ತಿದ್ದಾರೆ. ಅವರ ಮುಖ ಊದಿಕೊಂಡಿದ್ದು, ಮೂಡ್ ಆಫ್ ಆದಂತಿದೆ. 

ನೆಟ್ಟಿಗರಿಗೆ ಅಮಿತಾಬ್ ಬಚ್ಚನ್ ಹೊಗಳಿದ್ದಾರೆ. ಅದೇ ಸಮಯದಲ್ಲಿ ಜಯಾ ಬಚ್ಚನ್ ಗೆ ಯಾಕೆ ನೀವು ಹೀಗೆ ಅಂತ ಪ್ರಶ್ನೆ ಕೇಳಿದ್ದಾರೆ. ಸದಾ ಕೋಪದಲ್ಲಿ ಇರ್ತೀರಲ್ಲ ಯಾಕೆ ಎಂಬ ಪ್ರಶ್ನೆಯನ್ನು ಅನೇಕ ಬಳಕೆದಾರರು ಜಯಾ ಬಚ್ಚನ್ ಗೆ ಕೇಳಿದ್ದಾರೆ. ಮೇಡಂಗೆ ಮೂಡ್ ಆಫ್ ಆಗಿದ್ದು ಯಾಕೆ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ.

ಝೀರೋದಿಂದ ಹೀರೋವರೆಗೆ ಎಲ್ಲ ಪುರುಷರ ಸ್ಥಿತಿಯೂ ಇದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಎಷ್ಟು ಕೆಲಸ ಮಾಡ್ತೀರಿ ಅಮಿತ್ ಜೀ ಅಂತ ಪ್ರಶ್ನೆ ಮಾಡಿದ್ದಾರೆ ಬಳಕೆದಾರರು. ಅದೇನೇ ಬರಲಿ ಅಮಿತಾಬ್ ಪ್ರೀತಿ ಕಡಿಮೆ ಆಗಿಲ್ಲ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

ಅಮಿತಾಬ್ ಬಚ್ಚನ್ ಗೆ ಈಗ 81 ವರ್ಷ ವಯಸ್ಸು. ಈಗ್ಲೂ ಅಮಿತಾಬ್ ಬಚ್ಚನ್, ಯುವಕರನ್ನು ನಾಚಿಸುವಂತೆ ಕೆಲಸ ಮಾಡ್ತಾರೆ. ಅಮಿತಾಬ್ ಹಾಗೂ ಜಯಾ ಬಚ್ಚನ್ ಮದುವೆಯಾಗಿ 51 ವರ್ಷ ಕಳೆದಿದೆ. ಇಬ್ಬರು 1973ರಲ್ಲಿ ಮದುವೆಯಾದ್ರು. ಇಬ್ಬರು ಬಾಲಿವುಡ್ ಮಾದರಿ ದಂಪತಿ. ಹಾಗೆ ಒಳ್ಳೆ ಸ್ನೇಹಿತರು. ಇದನ್ನು ಜಯಾ ಬಚ್ಚನ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್, ಅಲ್ಲಿಯೂ ಎಲ್ಲರ ಗಮನ ಸೆಳೆದಿದ್ದರು. ಸದಾ ಸಿಂಪಲ್ ಡ್ರೆಸ್ ಧರಿಸಿ ಬರ್ತಿದ್ದ ಜಯಾ ಮುಖದಲ್ಲಿ ಗಂಭೀರತೆಯೊಂದಿರುತ್ತಿತ್ತು. ಆದ್ರೆ ಅಂಬಾನಿ ಮನೆ ಮದುವೆಯಲ್ಲಿ ಫುಲ್ ಡಿಫರೆಂಟ್ ಆಗಿ ಬಂದಿದ್ರು ಜಯಾ. ಸೀರೆ ಜೊತೆ ಬಾರೀ ಆಭರಣ ಧರಿಸಿದ ಅವರ ಮುಖದಲ್ಲಿ ನಗುವೊಂದಿತ್ತು. ಆದ್ರೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಕುಟುಂಬ ಮದುವೆಗೆ ಬೇರೆ ಬೇರೆಯಾಗಿ ಬಂದಿದ್ದು ಇಲ್ಲಿ ಸುದ್ದಿಯಾಗಿದೆ. 

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್; 20 ವರ್ಷದ ಹಿಂದಿನ ಕೊಲೆ ಕೇಸಿನಲ್ಲಿ ಮತ್ತೊಬ್ಬ ನಿರ್ದೇಶಕ ಅರೆಸ್ಟ್

ಅತ್ತೆ ಜಯಾ ಹಾಗೂ ಸೊಸೆ ಐಶ್ವರ್ಯ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಅನೇಕ ದಿನಗಳಿಂದ ಓಡಾಡ್ತಿದೆ. ಈ ಮಧ್ಯೆ ಅಂಬಾನಿ ಮನೆ ಮದುವೆಗೆ ಇಬ್ಬರೂ ಬೇರೆ ಬೇರೆಯಾಗಿ ಬಂದಿರೋದು ಮತ್ತಷ್ಟು ಪ್ರಶ್ನೆ ಹುಟ್ಟುಹಾಕಿದೆ. ಆದ್ರೆ ಈ ಬಗ್ಗೆ ಅಮಿತಾಬ್ ಬಚ್ಚನ್ ಈವರೆಗೆ ಮೌನ ಮುರಿದಿಲ್ಲ. 

T 5074 - .... and the rain it raineth every day .. even on set at work .. pic.twitter.com/Sky5FJJbT2

— Amitabh Bachchan (@SrBachchan)
click me!