
ಉರ್ಫಿ ಜಾವೇದ್ ಎಂದಾಕ್ಷಣ ಕಣ್ಣಿಗೆ ಬರುವುದು ಚಿತ್ರ-ವಿಚಿತ್ರ ಅವತಾರದ ನಟಿಯೇ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡುವ ನಟಿ ಈಕೆ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿ ಈಕೆಗೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿಯ ವಿಚಿತ್ರ ವೇಷ ಮಾತ್ರ ಮುಂದುವರೆದೇ ಇದೆ. ಕೆಲ ದಿನಗಳ ಹಿಂದಷ್ಟೇ ನನ್ನದು ಫ್ಲ್ಯಾಟ್ ಚೆಸ್ಟ್ ಎಂದು ಹೇಳುವ ಡಿಜಿಟಲ್ ಬೋರ್ಡ್ ಹಾಕಿಕೊಂಡು ಸುತ್ತಾಡಿದ್ದ ಉರ್ಫಿ ಕೊನೆಗೆ ಎದೆ ಮೇಲೆ ಉಡ ಬಿಟ್ಕೊಂಡು ಸದ್ದು ಮಾಡಿದ್ದರು. ಉಡ ಅವರ ಮೈಮೇಲೆ ಹರಿದಾಡುವಂತೆ ಕಾಣುವ ವಿಡಿಯೋ ಶೇರ್ ಮಾಡಿದ್ದರು.
ಅದೇ ಅರೆಬರೆ ಉರ್ಫಿ ಜಾವೇದ್ ಸಿನಿಮಾಕ್ಕೆ ಕಾಲಿಟ್ಟ ದಿನಗಳಲ್ಲಿ ಹೇಗೆ ಇದ್ದರು ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ. ಇದು ಅವರ ಆಡಿಷನ್ ವಿಡಿಯೋ ಆಗಿದೆ. ಆಕ್ಷನ್ ಎಂದು ಹೇಳುತ್ತಿದ್ದಂತೆಯೇ, ಅವರು ನಟನೆಯನ್ನು ಶುರು ಮಾಡಿದ್ದಾರೆ. ಅವರ ನಟ, ನಡವಳಿಕೆ, ಬಾಡಿ ಲ್ಯಾಂಗ್ವೇಜ್ ಎಲ್ಲಕ್ಕಿಂತಲೂ ಮುಖ್ಯವಾಗಿ ಅವರ ಬಟ್ಟೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನಟಿ ಇಷ್ಟು ಕ್ಯೂಟ್ ಆಗಿ ಇದ್ದರೂ, ಫುಲ್ ಡ್ರೆಸ್‌ನಲ್ಲಿ ಇಷ್ಟೊಂದು ಸುಂದರಿಯಾಗಿ ಕಾಣಿಸಿಕೊಳ್ಳುತ್ತಿದ್ದರೂ ಮತ್ಯಾಕೆ ಕೆಟ್ಟ ವೇಷ ಮಾಡಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಆದರೆ ನಟಿ, ಹಿಂದೊಮ್ಮೆ ತಮಗೆ ಹಣವೇ ಮುಖ್ಯ, ಹಣಕ್ಕಾಗಿ ತಾನು ಏನು ಬೇಕಾದರೂ ಮಾಡಲು ರೆಡಿ ಇದ್ದೇನೆ ಎಂದಿದ್ದರು. ಬಹುಶಃ ಇವರು ಈ ರೀತಿಯ ಬಟ್ಟೆ ತೊಟ್ಟು ಹಣ ಮಾಡುವುದು ಸಾಧ್ಯವಿಲ್ಲ ಎನ್ನುವ ಅರಿವಾಗಿಯೇ ವಿಚಿತ್ರ ವೇಷಗಳ ಮೊರೆ ಹೋಗಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ.
ತಪ್ಪಿಸಿಕೊಂಡು ಹೋಗ್ತಿದ್ದವನ ಪೊಲೀಸರಿಗೆ ಒಪ್ಪಿಸಿತ್ತು ಸತ್ತವಳ ಆತ್ಮ: ರೋಚಕ ಘಟನೆ ವಿವರಿಸಿದ ಡಿವೈಎಸ್‌ಪಿ ರಾಜೇಶ್!
ಅಷ್ಟಕ್ಕೂ ಹಿಂದಿನ ವಿಡಿಯೋಗಳಲ್ಲಿ ನಟಿ, ಹಣದ ಮಹತ್ವ ತಿಳಿಸುತ್ತಾ, ನಾನು ಏನೇ ಮಾಡಿದರೂ ಅದು ನನ್ನ ಸಲುವಾಗಿ. ನಾನು ಯಾರನ್ನೂ ಮೆಚ್ಚಿಸಬೇಕಿಲ್ಲ. ಯಾವುದೇ ಹೆಣ್ಣುಮಕ್ಕಳನ್ನು ಮೆಚ್ಚಿಸುವ ಉದ್ದೇಶವೂ ನನಗೆ ಇಲ್ಲ, ಯಾವುದೇ ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶವೂ ಇಲ್ಲ. ನಾನು ಇದನ್ನು ಫೇಮಸ್ ಆಗಲು ಮತ್ತು ಶ್ರೀಮಂತೆ ಆಗುವುದಕ್ಕಾಗಿ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ನೋಡಿ ಯಾರೂ ಮೆಚ್ಚಿಕೊಳ್ಳಬೇಕಾದದ್ದೂ ಇಲ್ಲ ಎಂದಿದ್ದರು.
ಹೆಚ್ಚು ಹಣ ಬಂದ ತಕ್ಷಣ ಏನು ಮಾಡುವಿರಿ ಎನ್ನುವ ಪ್ರಶ್ನೆಗೆ ಉರ್ಫಿ, ನಾನು ರಾಯ್ಸ್ರಾಯ್ ಕಾರು ಖರೀದಿ ಮಆಡುತ್ತೇನೆ. ಇದು ನನ್ನ ಆಸೆ ಎಂದಿದ್ದರು. ಇದೇ ವೇಳೆ, ನಾನು ಹಣವನ್ನು ತುಂಬಾ ಇಷ್ಟಪಡುತ್ತೇನೆ. ಹಣ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಹಣಕ್ಕಿಂತ ಮುಖ್ಯವಾದದ್ದು ಏನೂ ಇಲ್ಲ. ಹಣ ಇದ್ದರೆ ಸುಖ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಅದು ಸುಳ್ಳು. ಹಣ ಇದ್ದರೆ ಸುಖವನ್ನೂ ಪಡೆದುಕೊಳ್ಳಬಹುದು. ಜೀವನದಲ್ಲಿ ಏನುಬೇಕಾದರೂ ಮಾಡಬಹುದು. ಹಣವೇ ಮುಖ್ಯ. ಹಣವೇ ಜೀವನ. ಹಣದಿಂದ ಎಲ್ಲವೂ ಸಾಧ್ಯ ಎಂದಿದ್ದರು. ನಟಿ. ಹಣ ಇದ್ದರೆ ಮಾತ್ರ ಜನರು ನಿಮ್ಮ ಜೊತೆ ಇರುತ್ತಾರೆ. ನಿಮ್ಮ ಸುತ್ತಲಿನ ಜನರನ್ನು ಖುಷಿಯಾಗಿ ಇಡಲು ಸಾಧ್ಯವಾಗುವುದು ಹಣದಿಂದ ಮಾತ್ರ. ಹಣ ಇಲ್ಲದಿದ್ದರೆ ಈ ಜೀವನದಲ್ಲಿ ಏನೂ ಇಲ್ಲ ಎನ್ನುವುದು ಉರ್ಫಿಯ ಮಾತು.
ಭಾಗ್ಯಲಕ್ಷ್ಮಿ ಕುಸುಮತ್ತೆ ರಿಯಲ್ ಪುತ್ರಂಗೆ ಹಾವೆಂದ್ರೆ ಜೀವ: ಕುಕ್ಕೆಗೆ ಹೋದ್ರೂ ಬಗೆ ಹರಿದಿಲ್ಲ ಸಮಸ್ಯೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.