ಚಿತ್ರವಿಚಿತ್ರ ಬಟ್ಟೆಗಳಿಂದ, ಅರೆಬರೆ ದೇಹ ಪ್ರದರ್ಶನ ಮಾಡೋದಕ್ಕೇ ಫೇಮಸ್ ಆಗಿರೋ ಉರ್ಫಿ ಈ ಬಾರಿ ನಗ್ನ ಬಾರ್ಬಿ ಗೊಂಬೆಗಳಲ್ಲೇ ಮಾನ ಮುಚ್ಚಿಕೊಂಡಿದ್ದಾಳೆ. ಸಾಲದೆಂಬಂತೆ ಇದಕ್ಕೊಂದು ಹಾಸ್ಯಪ್ರಜ್ಞೆಯ ಕ್ಯಾಪ್ಶನ್ ಕೂಡಾ ನೀಡಿದ್ದಾಳೆ.
ಉರ್ಫಿ ಜಾವೇದ್ ಸೋಷ್ಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಆಕೆಯ ವಿಲಕ್ಷಣ ಡ್ರೆಸಿಂಗ್ ಸೆನ್ಸೇ ಆಕೆಗೆ ಫಾಲೋವರ್‌ಗಳನ್ನು ತಂದುಕೊಟ್ಟಿದೆ. ಹಾಕುವ ಬಹುತೇಕ ಬಟ್ಟೆಗಳಿಗೆ ಟ್ರೋಲ್ ಆದರೂ, ನಗಿಸಿಕೊಂಡರೂ, ಉಗಿಸಿಕೊಂಡರೂ ಕ್ಯಾರೇ ಎನ್ನದೆ ಮರುದಿನವೇ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗುತ್ತಾಳೆ ಉರ್ಫಿ.
ಆಕೆಗೆ ಮೈಗೆ ಹಾಕಲು ಬಟ್ಟೆಯೇ ಬೇಕೆಂದಿಲ್ಲ. ಪಿನ್, ಹೇರ್‌ಪಿನ್, ಕ್ಯಾಸೆಟ್, ಸಿಮ್ ಕಾರ್ಡ್, ಕರ್ಚೀಫ್- ಹೀಗೆ ಇರೋ ಬರೋ ವಸ್ತುಗಳನ್ನೆಲ್ಲ ಬಳಸಿ ವಿಚಿತ್ರ ಬಟ್ಟೆ ಹಾಕಿಕೊಂಡು ಬಾಯಿ ತುಂಬಾ ಮಾತಾಡುತ್ತಾ ಪಾಪಾರಾಜಿಗಳಿಗೆ ಪೋಸ್ ಕೊಡುತ್ತಾಳೆ.
ಈ ಬಾರಿ ಉರ್ಫಿಯ ಮಾನ ಮುಚ್ಚಲು ತಲೆ ಕೆಳಗಾಗಿ ಜೆಡೆ ಕುಣಿಸುತ್ತಾ ನಿಂತಿದ್ದು ಬಾರ್ಬಿ ಗೊಂಬೆಗಳು. ಆದರೆ, ಅಷ್ಟೇ ಸಾಲದೆಂಬಂತೆ ಟ್ವಿಸ್ಟ್ ಹೆಚ್ಚಿಸಿದ್ದು ಅವುಗಳ ನಗ್ನ ದೇಹಗಳು.
ಬಾರ್ಬಿ ಗೊಂಬೆಗಳು ಅವುಗಳ ದೊಡ್ಡ ಅನಾರ್ಕಲಿ ಡ್ರೆಸ್‌ಗೆನೇ ಹೆಸರು ಮಾಡಿವೆ. ಆದರೆ, ಅವುಗಳನ್ನೆಲ್ಲ ವಿವಸ್ತ್ರಗೊಳಿಸಿ ತಲೆ ಕೆಳಗಾಗಿ ಸೊಂಟ ಮುಚ್ಚಿಕೊಂಡಿದ್ದಾಳೆ ಉರ್ಫಿ.
ಇದಕ್ಕೊಂದು ಹಾಸ್ಯಪ್ರಜ್ಞೆಯ ಕ್ಯಾಪ್ಶನ್ ನೀಡಿದ್ದಾಳೆ- 'ನಾನು ಧರಿಸಿದ್ದು ಹೆಚ್ಚಾಯ್ತು, ಅದಕ್ಕೇ ಗೊಂಬೆಗಳ ಬಟ್ಟೆ ಬಿಚ್ಚಬೇಕಾಯ್ತು' ಎಂದು!
ಉರ್ಫಿಯ ಈ ಅವತಾರ ನೋಡಿದ ನೆಟ್ಟಿಗರು ಕಾಮೆಂಟ್‌ಗಳ ಮಳೆಯನ್ನೇ ಸುರಿಸುತ್ತಿದ್ದಾರೆ. 'ತಾನೂ ಬಟ್ಟೆ ಹಾಕ್ಕೊಳಲ್ಲ, ಗೊಂಬೆಗಳಿಗೂ ಬಟ್ಟೆಯೊಂದಿಗಿರಲು ಬಿಡೋಲ್ಲ' ಎಂದು ಒಬ್ಬ ಇನ್ಸ್ಟಾ ಬಳಕೆದಾರರು ಹೇಳಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ, 'ಉರ್ಫಿಯ ಬಳಿ ಇಲ್ಲದಿರುವುದು ಗೊಂಬೆಗಳ ಬಳಿಯೂ ಇರಬಾರದೆಂಬ ಹಂಚಿಕೆ ಅವಳದು' ಎಂದಿದ್ದಾರೆ. ಇನ್ನೊಬ್ಬ ನೆಟ್ಟಿಗರು, 'ತಂದೊಂತೂ ಬಟ್ಟೆ ತೆಗೀತಾಳೆ, ಗೊಂಬೆಗಳ ಬಟ್ಟೆಯನ್ನಾದ್ರೂ ಬಿಡಬಹುದಿತ್ತು' ಎಂದಿದ್ದಾರೆ.