ಸಲಿಂಗಕಾಮ: ಸದ್ಗುರುಗೆ ಉರ್ಫಿ ಜಾವೇದ್ ಹೇಳಿದ್ದೇನು, ಕೇಳಿದ್ದೇನು?

By Suvarna News  |  First Published Jan 14, 2023, 1:14 PM IST

ಸದಾ ಬಟ್ಟೆಗಳ ವಿಚಿತ್ರ ಫ್ಯಾಷನ್ ಮೂಲಕ ಟ್ರೋಲ್​ ಆಗುತ್ತಿರುವ ನಟಿ ಉರ್ಫಿ ಜಾವೇದ್​ ಇದೀಗ ಸದ್ಗುರು ಜಗ್ಗಿ ವಾಸುದೇವ ಅವರಿಗೆ ಸಲಿಂಗ ಕಾಮದ ಬಗ್ಗೆ ಪ್ರಶ್ನಿ ಮಾಡಿದ್ದಾರೆ. ಏನಂತೆ ಉಫ್ರಿ ಉವಾಚ?


'ನಟಿ ಉ' ಎಂದರೆ ಸಾಕು 'ಉರ್ಫಿ ಜಾವೇದ್'​ ಎನ್ನುವಷ್ಟರ ಮಟ್ಟಿಗೆ ಫೇಮಸ್​ ಆಗ್ತಿರೋ ನಟಿಯೋ, ಮಾಡೆಲ್ ಎನ್ನಬಹುದೋ ಒಟ್ಟಿನಲ್ಲಿ ಫೇಮಸ್. ಅತ್ಯಂತ ಕಡಿಮೆ ಉಡುಗೆ ತೊಟ್ಟು, ಕೆಲವೊಂದು ವೇಳೆ ಉಡುಗೆಯೇ ಇಲ್ಲದೆಯೇ ವಿಧ ವಿಧ ರೂಪದಲ್ಲಿ ಕಾಣಿಸುತ್ತಿರುವ ಈ ನಟಿ ಕೆಲ ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆಗಿದ್ದಾರೆ. ದಿನಕ್ಕೊಂದು ವೇಷದಲ್ಲಿ ತಮ್ಮ ಫೋಟೋ ಶೇರ್​ ಮಾಡಿಕೊಳ್ಳುತ್ತಾ ಟ್ರೋಲ್​ ಆಗುತ್ತಿರುವ ಉರ್ಫಿ ಜಾವೇದ್​ (Urfi Javed) ತಮ್ಮನ್ನು ಟ್ರೋಲ್​ ಮಾಡುವ ನೆಟ್ಟಿಗರ ವಿರುದ್ಧ ಗರಂ ಆಗುವುದು ಸರ್ವೇ ಸಾಮಾನ್ಯ. ಆದರೆ ಈಗ ಉರ್ಫಿ ಸದ್ಗುರು ಜಗ್ಗಿ ವಾಸುದೇವ ಅವರಿಗೇ ಪ್ರಶ್ನಿಸಿದ್ದಾಳೆ!

ಸದ್ಗುರುಗೂ (Sadguru), ಈ ಉರ್ಫಿಗೂ ಎತ್ತಣತ್ತ ಸಂಬಂಧ ಎನ್ನುವಿರಾ? ಅಲ್ಲೇ ಇರುವುದು ಕುತೂಹಲ. ಸಮಾಜಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸದ್ಗುರು ಸದಾ ಮಾತನಾಡುತ್ತಾರೆ. ಅವರು ಇತ್ತೀಚೆಗೆ ಲೈಂಗಿಕ ಅಲ್ಪಸಂಖ್ಯಾತರು (ಲೆಸ್ಬಿಯನ್​, ಗೇ, ಬೈಸೆಕ್ಸುವಲ್​, ಟ್ರಾನ್ಸ್​ಜೆಂಡರ್​  LGBTQ) ಕುರಿತು ಮಾತನಾಡಿದ್ದರು. ಈ ಮಾತೇ ಉರ್ಫಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ಸದ್ಗುರು ಹೇಳುತ್ತಿರುವುದು ಸರಿಯಲ್ಲ, ಅವರ ಮನಸ್ಸು ತೀರಾ ಚಿಕ್ಕದು. ಅವರನ್ನು ಎಲ್ಲರೂ ಅನ್​ಫಾಲೋ (Unfollow) ಮಾಡಿ, ಎಂದು ಮೂಗು ತೂರಿಸಿದ್ದಾಳೆ.

Tap to resize

Latest Videos

ಅಕ್ಕನಿಗೆ ಪೈಪೋಟಿ ನೀಡಲು ಸಿದ್ಧರಾದ ಉರ್ಫಿ ಸಹೋದರಿಯರು ಇವರೇ ನೋಡಿ...

ಅಷ್ಟಕ್ಕೂ ಸದ್ಗುರು ಅವರು LGBTQ ಬಗ್ಗೆ ನಡೆಯುತ್ತಿರುವ ಅಭಿಯಾನ ಕುರಿತು ಮಾತನಾಡಿದ್ದರು. ’ಜಗತ್ತಿನ ಬಹುತೇಕ ಕಡೆಗಳಲ್ಲಿ LGBTQ ಅಭಿಯಾನ (LGBTQ Campaign) ನಡೆಯುತ್ತಿದೆ. ಜನರಿಗೆ ಹಲವಾರು ಆಯ್ಕೆಗಳಿವೆ. ಹೀಗಿರುವಾಗ ಅಭಿಯಾನದ ಅಗತ್ಯವೇನು ಎಂದು ಸದ್ಗುರು ಪ್ರಶ್ನಿಸಿದ್ದಾರೆ. ಲೈಂಗಿಕತೆಯು (sexuality) ಪ್ರಕ್ರಿಯೆ. ಪ್ರಕೃತಿಯು ಒಂದು ಉದ್ದೇಶದಿಂದಲೇ ವಿರೋಧಾಭಾಸಗಳನ್ನ ಸೃಷ್ಟಿಸಿದೆ.  ಆ ಸಮುದಾಯಕ್ಕೆ ಸೇರುವ ಜನರ ಪ್ರಮಾಣ ತೀರಾ ಚಿಕ್ಕದು. ಆದರೆ, ಪ್ರಪಂಚದಲ್ಲಿ ನಡೆಯುತ್ತಿರುವ ಅಭಿಯಾನದಿಂದಾಗಿ, ಆ ಸಮುದಾಯಕ್ಕೆ ಸೇರುತ್ತಿರುವ ಜನರ ಸಂಖ್ಯೆ ದೊಡ್ಡದಾಗುತ್ತಿದೆ. ಲೈಂಗಿಕತೆಯು ಜೈವಿಕ ಪ್ರಕ್ರಿಯೆ ಎಂದು ಸದ್ಗುರು ಹೇಳಿದ್ದರು. ಸಂವಾದವೊಂದಲ್ಲಿ ಮಾತನಾಡುತ್ತಿದ್ದ ವೇಳೆ ಅವರು LGBTQ ಅಭಿಯಾನದ ಬಗ್ಗೆ ಮಾತನಾಡಿದ್ದರು.

ಇದಕ್ಕೆ ಉರ್ಫಿ, ಸದ್ಗುರು ಮಾತನಾಡಿರುವುದು LGBTQ ಸಮುದಾಯದ ವಿರುದ್ಧವಾಗಿದೆ. ಇವರ ಈ ಮಾತಿಗೆ ಪ್ರೋತ್ಸಾಹ ನೀಡಬಾರದು ಎಂದು ಉರ್ಫಿ ಕಿಡಿ ಕಾರಿದ್ದಾರೆ. ಆಕೆಯ ಪ್ರಕಾರ, LGBTQ ಸಮುದಾಯದವರು ನಡೆಸುತ್ತಿರುವ ಅಭಿಯಾನದಲ್ಲಿ ತೊಡಗಿರುವವರು ತಮ್ಮ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮತ್ತು ಜೋರಾಗಿ ಮಾತನಾಡಲು ಸಮರ್ಥರಾಗಿದ್ದಾರೆ. LGBTQ ಸಮುದಾಯದ ಶೇಕಡಾವಾರು ಪ್ರಮಾಣವು ಚಿಕ್ಕದಲ್ಲ ಎನ್ನುವುದು. ಅದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಉರ್ಫಿ, 'LGBTQ ಸಮುದಾಯದ ಶೇಕಡಾವಾರು ಪ್ರಮಾಣ ಚಿಕ್ಕದಲ್ಲ. ಆದರೆ, ನಿಮ್ಮ ಮೆದುಳು (Brain) ಚಿಕ್ಕದು’ ಎಂದಿದ್ದಾರೆ. ಅವರನ್ನು ಫಾಲೋ ಮಾಡುವವರು ಯಾರಾದರೂ ಇದ್ದರೆ, ದಯವಿಟ್ಟು ನನ್ನನ್ನ ಫಾಲೋ ಮಾಡಬೇಡಿ. ನನ್ನ ಫಾಲೋವರ್ಸ್​ ಅವರನ್ನು ಅನ್​ಫಾಲೋ ಮಾಡಿ ಎಂದು ಕೆಂಡಾಮಂಡಲವಾಗಿ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಎಲ್ಲಾ ಹೆಣ್ಣು ಮಕ್ಳು ಉರ್ಫಿ ನೋಡಿ ಕಲಿಯಬೇಕು; ರ್ಯಾಪರ್ ಹನಿ ಸಿಂಗ್ ಹೇಳಿಕೆ ವೈರಲ್

'LGBTQ ಸಮುದಾಯಕ್ಕೆ ನಮ್ಮ ಬೆಂಬಲದ ಅಗತ್ಯವಿದೆ. ಶತಮಾನಗಳಿಂದ ಜನರು ತಮ್ಮ ಲೈಂಗಿಕತೆಯನ್ನು ಮರೆಮಾಚಲು ಒತ್ತಾಯಿಸುತ್ತಲೇ ಬಂದಿದ್ದಾರೆ. ಅಂಥವರಿಗೆ ಇಂಬು ಕೊಡಲು ಎಂಬಂತೆ ಇದೆ ಸದ್ಗುರು ಅವರ ಮಾತು. ಆದ್ದರಿಂದ ಸದ್ಗುರು ಅಂಥ ಜಾಗದಲ್ಲಿ ಇದ್ದು ಈ ರೀತಿ ಮಾತನಾಡುವವರನ್ನು ಯಾರೂ ಪ್ರೋತ್ಸಾಹಿಸಬೇಡಿ' ಎಂದಿದ್ದಾರೆ ಉರ್ಫಿ. ಉರ್ಫಿ ಮಾತನ್ನು ಕೆಲವರು ಬೆಂಬಲಿಸಿ ಕಮೆಂಟ್​ (Comment) ಮಾಡುತ್ತಿದ್ದರೆ, ಸದ್ಗುರು ಅವರು ಹೇಳಿರುವ ಮಾತಿನಲ್ಲಿ ಯಾವುದೇ ತಪ್ಪು ಇಲ್ಲ ಎಂದು ಇನ್ನು ಕೆಲವರು ಅವರನ್ನು ಬೆಂಬಲಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಚರ್ಚೆಯೀಗ ಭಾರಿ ವೈರಲ್​ ಆಗುತ್ತಿದೆ..

ಅಷ್ಟಕ್ಕೂ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸದ್ಗುರು ಹೇಳಿದ್ದೇನು? 

 

click me!