ಸಿನಿಮಾ ಪ್ರಮೋಷನ್‌ಗೆ ಚಕ್ಕರ್; ಬಾಯ್‌ಫ್ರೆಂಡ್ ಜೊತೆ ಶ್ರುತಿ ಹಾಸನ್ ಮಸ್ತಿ, ಫೋಟೋ ವೈರಲ್

By Shruthi Krishna  |  First Published Jan 14, 2023, 12:54 PM IST

ಕಾಲಿವುಡ್ ನಟಿ ಶ್ರುತಿ ಹಾಸನ್ ಸಿನಿಮಾ ಪ್ರಮೋಷನ್ ಗೆ ಗೈರಾಗಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ. ಅಭಿಮಾನಿಗಳು ಶ್ರುತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. 


ಸೌತ್ ಸ್ಟಾರ್ ಶ್ರುತಿ ಹಾಸನ್ ಸದ್ಯ ಬಾಯ್ ಫ್ರೆಂಡ್ ಜೊತೆ ಮಸ್ತ್ ಮಜಾ ಮಾಡುತ್ತಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವುದಾಗಿ ಹೇಳಿದ್ದ ಶ್ರುತಿ ಸದ್ಯ ಬಾಯ್ ಫ್ರೆಂಡ್ ಜೊತೆ ಔಟಿಂಗ್ ಹೋಗಿದ್ದಾರೆ. ಮಸ್ತ್ ಮಜಾ ಮಾಡುತ್ತಿರುವ ಒಂದಿಷ್ಟು ಫೋಟೋಗಳನ್ನು ಶ್ರುತಿ ಶೇರ್ ಮಾಡಿದ್ದಾರೆ. ಅಂದಹಾಗೆ ಶ್ರುತಿ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಚಿರಂಜೀವಿ ಜೊತೆ ನಟಿಸಿದ್ದ ವಾಲ್ತೇರ್ ವೀರಯ್ಯ ಮತ್ತು ಬಾಲಯ್ಯ ಜೊತೆ ನಟಿಸಿದ್ದ ವೀರ ಸಿಂಹ ರೆಡ್ಡಿ ಸಿನಿಮಾಗಳ ಪ್ರಮೋಷನ್‌ಗೆ ಚಕ್ಕರ್ ಹಾಕಿರುವ ಶ್ರುತಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ. 

ಶ್ರುತಿ ಹಾಸನ್ ಎಲ್ಲೂ ಪ್ರಮೋಷನ್‌ನಲ್ಲಿ ಕಾಣಿಸಿಕೊಂಡಿಲ್ಲ. ಶ್ರುತಿ ಗೈರಾಗಿದ್ದು ನೋಡಿ ನೆಟ್ಟಿಗರು ಆಕೆಗೆ ಮಾನಸಿಕ ಸಮಸ್ಯೆ ಹಾಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಅನೇಕ ಮಾಧ್ಯಮಗಳು ಸಹ ವರದಿ ಮಾಡಿದ್ದವು. ಈ ಬಗ್ಗೆ ಶ್ರುತಿ ಗರಂ ಆಗಿದ್ದರು. ಸ್ಕ್ರೀನ್ ಶಾಟ್‌ಗಳನ್ನು ಶೇರ್ ಮಾಡಿ ಸರಿಯಾಗಿ ತಿರುಗೇಟು ನೀಡಿದ್ದರು. ತನಗೆ ಜ್ವರ ಇತ್ತು ಅಷ್ಟೆ ತನ್ನ ಜ್ವರ ಈಗ ಮಾನಸಿಕ ಸಮಸ್ಯೆ ಆಗಿ ಬದಲಾಗಿದೆ ಎಂದು ಹೇಳಿದ್ದರು. 'ನಾನು ಯಾವಾಗಲೂ ಮಾನಸಿಕ ಆರೋಗ್ಯದ ವಕೀಲನಾಗಿ ಇರುತ್ತೇನೆ. ನಾನು ಯಾವಾಗಲೂ ಎಲ್ಲಾ ರೀತಿ ನನ್ನ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಉತ್ತೇಜಿಸಿಕೊಳ್ಳುತ್ತೇನೆ. ನನಗೆ ಜ್ವರವಿತ್ತು. ನೀವು ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ' ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. 

'ಮಾನಸಿಕ ಸಮಸ್ಯೆ' ಎಂದವರ ವಿರುದ್ಧ ನಟಿ ಶುತ್ರಿ ಹಾಸನ್ ಗರಂ

Tap to resize

Latest Videos

ಜ್ವರದಿಂದ ಬಳಲುತ್ತಿದ್ದ ಶ್ರುತಿ ಇದೀಗ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ. ನೆಟ್ಟಿಗರು ಮತ್ತೆ ಶ್ರುತಿ ವಿರುದ್ಧ ಗರಂ ಆಗಿದ್ದಾರೆ. ಸಿನಿಮಾ ಪ್ರಮೋಷನ್ ಬಿಟ್ಟು ಬಾಯ್ ಫ್ರೆಂಡ್ ಜೊತೆ ಸುತ್ತಾಡಲು ಆಗುತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುವುದು ಇರಲಿ ಸಿನಿಮಾದ ಬಗ್ಗೆ ಯಾವುದೇ ಪೋಸ್ಟರ್‌ಗಳನ್ನು ಸಹ ಹಂಚಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ಶ್ರುತಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. 

ಬಾಯ್‌ಫ್ರೆಂಡ್‌ನಿಂದ ಬದಲಾದ ಕಮಲ್ ಪುತ್ರಿ; ರೊಮ್ಯಾಂಟಿಕ್‌ ಕ್ಲಿಕ್‌ಗೆ ಬರೋ ಕಾಮೆಂಟ್‌ ತಪ್ಪದೆ ಓದ್ತೀನಿ ಎಂದ ಶ್ರುತಿ

ಶ್ರುತಿ ಹಾಸನ್ ತನ್ನ ಮುಂದಿನ ಸಿನಿಮಾ ಐ ಗ್ರೀಸ್ ಚಿತ್ರೀಕರಣದಲ್ಲೂ ಸರಿಯಾಗಿ ಭಾಗಿಯಾಗುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಸಿನಿಮಾ ಜೊತೆಗೆ ಶ್ರುತಿ ಬಹುನಿರೀಕ್ಷೆಯ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಲಾರ್ ನಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. 

click me!