
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ.
ಕೆಲ ತಿಂಗಳ ಹಿಂದೆ ಈಕೆಯ ಎಂಗೇಜ್ಮೆಂಟ್ ಆದಂಥ ವಿಡಿಯೋ ವೈರಲ್ ಆಗಿತ್ತು. ಈಕೆ ಒಬ್ಬ ನಿಗೂಢ ವ್ಯಕ್ತಿಯ ಜೊತೆ ನಿಶ್ಚಿತಾರ್ಥ ಮಾಡಿರುವಂಥ ಫೋಟೋಗಳು ಅವು. ಈ ಜೋಡಿ ಪವಿತ್ರ ಹೋಮ ಕುಂಡದ ಮುಂದೆ ಕುಳಿತು ಅರ್ಚಕರು ಹೇಳಿದಂತೆ ಮಾಡುತ್ತಿದ್ದುದನ್ನು ವಿಡಿಯೋದಲ್ಲಿ ನೋಡಬಹುದಾಗಿತ್ತು. ಇದರ ಬೆನ್ನಲ್ಲೇ ನಟಿ ತಮಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ ಎನ್ನುವ ಸಂದರ್ಶನ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈಕೆ ಇಂಡಿಯಾ ಟುಡೇಗೆ ನೀಡಿದ್ದ ಸಂದರ್ಶನದಲ್ಲಿ ತಾವು ಯಾವುದೇ ಮುಸಲ್ಮಾನರನ್ನು ಮದುವೆಯಾಗುವುದಿಲ್ಲ, ಇಸ್ಲಾಂನಲ್ಲಿ ನಂಬಿಕೆ ಇಲ್ಲ. ತಾವು ಏನಿದ್ದರೂ ಹಿಂದೂ ಹುಡುಗನನ್ನೇ ಮದುವೆಯಾಗುವುದು ಎಂದಿದ್ದರು. ತಮಗೆ ಭಗವದ್ಗೀತೆಯೇ ಶ್ರೇಷ್ಠ, ಅದನ್ನೇ ಓದುತ್ತಿದ್ದೇನೆ ಎಂದೂ ಹೇಳಿದ್ದರು.
ರಾಮಲಲ್ಲಾ ಪ್ರತಿಷ್ಠಾಪನೆಗೆ ಪ್ರಥಮ್ ಧಮಾಕಾ: ರಜೆ, ಡಬಲ್ ಸಂಬಳ ಜೊತೆ ವಿಮಾನದಲ್ಲಿ ಅಯೋಧ್ಯೆ ದರ್ಶನ!
ಉರ್ಫಿಯ ಈ ಮಾತು ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ, ನಟಿ ಮನೆಯಲ್ಲಿ ಹೋಮ-ಹವನ ನಡೆಸಿದ್ದಾರೆ. ರಾಮನ ಜಪ ಮಾಡಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅತ್ತ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯುತ್ತಿರುವಂತೆಯೇ ಇತ್ತ ಮನೆಯಲ್ಲಿ ಅರ್ಚಕರನ್ನು ಕರೆಸಿ ಮನೆಯಲ್ಲಿ ರಾಮ ಜಪ ಮಾಡಿದ್ದಾರೆ.
ಅರ್ಧಂಬರ್ಧ ಡ್ರೆಸ್ನಲ್ಲಿಯೇ ಇರುವ ಉರ್ಫಿ ಹೋಮದ ಸಮಯದಲ್ಲಿ ಸೀರೆ ಉಟ್ಟಿದ್ದಾರೆ. ಹಿನ್ನೆಲೆಯಲ್ಲಿ 'ರಾಮ್ ಆಯೇಂಗೆ ತೊ ಅಂಗನಾ ಸಜೌಂಗಿ' ಹಾಡನ್ನು ಹಾಕಿದ್ದಾರೆ. ಈ ವಿಡಿಯೋ ಜತೆಗೆ "ಅಭಿನಂದನೆಗಳು, ಎಲ್ಲರೂ ಈ ದಿನವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಹಿಂದೂಗಳೇ ಸಂಸ್ಕೃತಿಯನ್ನು ಮರೆಯುತ್ತಿರುವ, ರಾಮನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿರುವ ಈ ಹೊತ್ತಿನಲ್ಲಿ, ನೀವು ಮಾಡಿರುವ ಈ ಕಾರ್ಯ ಶ್ಲಾಘನಾರ್ಹ ಎಂದು ಕಮೆಂಟ್ಗಳ ಸುರಿಮಳೇಯೇ ಆಗುತ್ತಿದೆ. ಕೋಟಿ ಹಣ ಪಡೆದು ಬೆತ್ತಲಾಗುವ ಚಿತ್ರತಾರೆಯರ ಮುಂದೆ ನಿಮ್ಮ ಡ್ರೆಸ್ ಯಾವ ಲೆಕ್ಕವೂ ಇಲ್ಲ, ಇಂಥ ಸತ್ಕಾರ್ಯ ಮಾಡುತ್ತಾ ಇರಿ ಎಂದು ಹಲವರು ನಟಿಯ ಬೆನ್ನಿಗೆ ನಿಂತಿದ್ದಾರೆ.
ನೃತ್ಯ, ಸಂಗೀತ, ಜಪದ ಮೂಲಕ ಸ್ಯಾಂಡಲ್ವುಡ್ನಲ್ಲಿ ರಾಮನ ಸ್ಮರಣೆ... ಯಾರು ಹೇಗೆಲ್ಲಾ ಆಚರಿಸಿದ್ರು ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.