ಬಾಲಿವುಡ್ ಸೆಲೆಬ್ರಿಟಿಗಳು ಪ್ರೇಕ್ಷರಕ ಗಮನ ಸೆಳೆಯಲು ಹೇಗೆಲ್ಲಾ ನಾಟಕದ ಮಾತುಗಳನ್ನಾಡುತ್ತಾರೆ ಎಂಬ ಬಗ್ಗೆ ನಟಿ ಉರ್ಫಿ ಜಾವೇದ್ ಹೇಳಿದ್ದೇನು?
ಚಿತ್ರ ನಟ-ನಟಿಯರು ಸದಾ ಜನರ ಗಮನ ಸೆಳೆಯಲು ಬಯಸುತ್ತಿರುತ್ತಾರೆ. ಇದಕ್ಕಾಗಿ ಹಲವು ಬಾರಿ ತಮ್ಮ ಜೀವನದ ಬಗ್ಗೆ ದುಃಖಕರ ವಿಷಯಗಳನ್ನು ಹೇಳಿಕೊಂಡು ಜನರಿಂದ ಅಯ್ಯೋ ಎಂದು ಹೇಳಿಸಿಕೊಂಡು ದೊಡ್ಡ ವ್ಯಕ್ತಿಗಳಾಗಲು ಬಯಸುತ್ತಾರೆ. ತಾವು ಪಟ್ಟ ಕಷ್ಟದ ದಿನಗಳ ಬಗ್ಗೆ ಹೇಳುತ್ತಾರೆ. ಆದರೆ ಹಲವು ಸೆಲೆಬ್ರಿಟಿಗಳು ಇವೆಲ್ಲವನ್ನೂ ನಾಟಕ ಮಾಡಿ ಜನರ ಗಮನ ಸೆಳೆಯಲು ಮಾಡುತ್ತಾರೆ ಎಂಬ ದೊಡ್ಡ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ನಟಿ ಉರ್ಫಿ ಜಾವೇದ್. ಸದಾ ಬಟ್ಟೆಗಳಿಂದಲೇ ಸೆನ್ಸೇಷನಲ್ ಆಗಿರುವ ಉರ್ಫಿ ಜಾವೇದ್ ಆಗಾಗ್ಗೆ ಹೀಗೆ ಬಂದು ಬಾಲಿವುಡ್ನ ಕೆಟ್ಟ ಗುಣಗಳ ಬಗ್ಗೆ ಹೇಳುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ನಟ-ನಟಿಯರು ಮಾಡುವ ನಾಟಕದ ಕುರಿತು ಹೇಳಿದ್ದಾರೆ.
ಅವರು ಹೇಳಿದ್ದೇನೆಂದರೆ, 'ತಾನು ಅತ್ಯಂತ ಬಡ ಕುಟುಂಬದಿಂದ ಬಂದಿದ್ದು, ಮಿಡ್ಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಏನೂ ಅನುಕೂಲ ಇಲ್ಲದೇ ಬೆಳೆದದ್ದು ಎಂದೆಲ್ಲಾ ಇಂದು ಸೆಲೆಬ್ರಿಟಿಗಳು ಹೇಳುವುದು ಮಾಮೂಲಾಗಿದೆ. ಇಂಥ ಹೇಳಿಕೆ ಕೆಲವರ ಬಾಯಲ್ಲಿ ಬಂದಾಗ ಇರಿಟೇಟ್ ಆಗುತ್ತದೆ. ಜನರ ಗಮನವನ್ನು ಸೆಳೆಯಲು ಈ ರೀತಿ ಸುಳ್ಳು ಹೇಳುತ್ತಾರೆ. ಅದೆಲ್ಲಾ ಷೋ ಆಫ್ ಯಾಕೆ ಮಾಡಬೇಕೋ ಗೊತ್ತಾಗುವುದಿಲ್ಲ. ಎಲ್ಲರಿಗೂ ಗೊತ್ತಿರುತ್ತದೆ ಅವರು ಶ್ರೀಮಂತರು ಎಂದು. ಆದರೂ ನಾಟಕ ಮಾಡುವುದನ್ನು ಕಂಡಾಗಲೆಲ್ಲಾ ಮೈಯುರಿಯುತ್ತದೆ' ಎಂದಿದ್ದಾರೆ. ಬಹಳಷ್ಟು ವೇದಿಕೆಗಳಲ್ಲಿ ಹೋದಾಗ ಚಿತ್ರನಟ-ನಟಿಯರು ತಾವು ಈ ರೀತಿ ಬೆಳೆದದ್ದು, ಆ ರೀತಿ ಬೆಳೆದದ್ದು ಎನ್ನುವ ಮೂಲಕ ಅಭಿಮಾನಿಗಳ ಕಣ್ಣಲ್ಲಿ ದೊಡ್ಡದಾಗಿ ಕಾಣಿಸಲು ನಾಟಕ ಮಾಡುವುದನ್ನು ತನ್ನಿಂದ ನೋಡಲು ಆಗುವುದಿಲ್ಲ ಎಂದಿದ್ದಾರೆ ಉರ್ಫಿ ಜಾವೇದ್.
ಅರೆರೆ... ಉರ್ಫಿಗೆ ಇದೇನಾಗೋಯ್ತು? ಎರಡು ದಿನಕ್ಕೊಮ್ಮೆ ಹೀಗೆ ಆಗ್ತಿದೆ: ಸಮಸ್ಯೆ ಹೇಳಿಕೊಂಡ ನಟಿ!
'ಇನ್ನೂ ಕೆಲವರಿದ್ದಾರೆ, ನಾವು ತುಂಬಾ ಮಿಡ್ಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದದ್ದು, ಫಸ್ಟ್ ಕ್ಲಾಸ್ ವಿಮಾನದಲ್ಲಿ ಹೋಗಲಿಲ್ಲ, ಎಕಾನಾಮಿಕ್ ಕ್ಲಾಸ್ನಲ್ಲಿ ಪ್ರಯಾಣ ಮಾಡ್ತಿದ್ವಿ ಹಾಗೆ ಹೀಗೆ ಹೇಳ್ತಾರೆ. ನಾವಂತೂ ವಿಮಾನನೇ ನೋಡಿರಲಿಲ್ಲ. ಇವರು ವಿಮಾನದಲ್ಲಿ ಪ್ರಯಾಣ ಮಾಡಿ ಹೇಳುವ ರೀತಿಯೇ ವಿಚಿತ್ರ ಎನಿಸುತ್ತದೆ ಎಂದಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಇದ್ದಾರೆ, ನಾನು ತುಂಬಾ ಕಂಜೂಸ್, ದುಡ್ಡು ಖರ್ಚು ಮಾಡುವುದಿಲ್ಲ ಎಂದೆಲ್ಲಾ ರೀಲ್ ಬಿಡುತ್ತಾರೆ. ದುಡಿಯುವುದೇ ಹೌದಾದರೆ ನನ್ನ ಬಳಿ ದುಡ್ಡು ಇದೆ ಎಂದು ಹೇಳಿಕೊಳ್ಳಲು ಏನು ಕಷ್ಟ ನಿಮಗೆ? ದುಡ್ಡು ಇದ್ದ ಮೇಲೆ ಖರ್ಚು ಮಾಡಿ, ಖರ್ಚು ಮಾಡುವುದು ಮಾಡಿಕೊಂಡು ಜನರ ಎದುರು ಸ್ಕೋಪ್ ತೆಗೆದುಕೊಳ್ಳುವುದು ಏಕೆ' ಎಂದು ಉರ್ಫಿ ಜಾವೇದ್ ಪ್ರಶ್ನಿಸಿದ್ದಾರೆ.
ಇನ್ನು ಉರ್ಫಿ ಜಾವೇದ್ ಕುರಿತು ಹೇಳುವುದೇ ಬೇಡ. ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್ ಚೈನೀಸ್ ಫುಡ್ ಇರುವ ಬಟ್ಟೆ ತೊಟ್ಟಿದ್ದರು. ಇವರು ಧರಿಸಿರುವ ಬಟ್ಟೆಯ ತುಂಬಾ ಚೈನೀಸ್ ಫುಡ್ಗಳು ತುಂಬಿ ಹೋಗಿತ್ತು. ಚಿಕ್ಕ ಬಕೆಟ್ನಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ಇರಿಸಲಾಗಿದ್ದು, ಚೈನೀಸ್ ದೇಸಿ ಫುಡ್ಗಳ ಕುರಿತು ನಟಿ ಮಾತನಾಡಿದ್ದರು. ಅದಕ್ಕೂ ಮುನ್ನ, ಉರ್ಫಿ ಬಟ್ಟೆಯಲ್ಲಿ ಬ್ರಹ್ಮಾಂಡ ತೋರಿಸಿದ್ದರು. ಬಳಿ ಎದೆ ಭಾಗದಲ್ಲಿ ಎರಡು ಫ್ಯಾನ್ ಸಿಕ್ಕಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಟ್ಟೆಯಲ್ಲಿನ ಬ್ರಹ್ಮಾಂಡದಲ್ಲಿ ಹಲವು ವಿಷಯಗಳನ್ನು ಅವರು ತೋರಿಸಿದ್ದರೆ, ಎದೆ ಮೇಲೆ ಹಾಕಿಕೊಂಡಿದ್ದ ಫ್ಯಾನ್ಸ್ ತಿರುಗುತ್ತಿತ್ತು. ಅದೂ ಸಾಲದು ಎಂಬಂತೆ ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು. ಇದರ ವಿಡಿಯೋ ಸಕತ್ ವೈರಲ್ ಆಗಿದ್ದು, ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು. ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದಂತೂ ನೋಡಿ ಉರ್ಫಿ ಜಾವೇದ್ ಫ್ಯಾನ್ಸ್ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎಂದಿದ್ದರು.
ಡಕಾಯತ್ ಚಿತ್ರದಲ್ಲಿ ಸನ್ನಿ ಡಿಯೋಲ್ಗೆ ಕಿಸ್ ಮಾಡಿದಾಗ ಏನಾಯ್ತೆಂದು ತಿಳಿಸಿದ ನಟಿ ಮೀನಾಕ್ಷಿ ಶೇಷಾದ್ರಿ