Mothers day spl: ಅಮ್ಮಂದಿರ ದಿನಕ್ಕೆ ರಾಮ್ ಚರಣ್ ಪತ್ನಿ ಉಪಾಸನಾ ಬೇಬಿ ಬಂಪ್ ಷೋ!

Published : May 14, 2023, 01:28 PM IST
Mothers day spl: ಅಮ್ಮಂದಿರ ದಿನಕ್ಕೆ ರಾಮ್ ಚರಣ್ ಪತ್ನಿ ಉಪಾಸನಾ ಬೇಬಿ ಬಂಪ್ ಷೋ!

ಸಾರಾಂಶ

ಮದುವೆಯಾಗಿ 11 ವರ್ಷಗಳ ಬಳಿಕ ತಾಯಿಯಾಗುತ್ತಿರುವ ರಾಮ್ ಚರಣ್ ಪತ್ನಿ ಉಪಾಸನಾ ತಾಯಂದಿರ ದಿನದಂದು ಬೇಬಿ ಬಂಪ್​ ಷೋ ಮಾಡಿದ್ದಾರೆ.   

‘ದಕ್ಷಿಣ ಭಾರತದ ಚಿತ್ರರಂಗದ ಸೂಪರ್ ಸ್ಟಾರ್ ರಾಮ್ ಚರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ವರ್ಷಗಳ ನಂತರ ತಂದೆಯಾಗಲಿದ್ದಾರೆ.  ರಾಮ್ ಚರಣ್ (Ram Charan) ಪತ್ನಿ ಉಪಾಸನಾ ಸದ್ಯದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ತುಂಬು ಗರ್ಭಿಣಿ ಉಪಾಸನಾ ಅವರಿಗೆ ಇತ್ತೀಚಿಗಷ್ಟೆ ಅದ್ದೂರಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಉಪಾಸನಾ ಸೀಮಂತ ಸಂಭ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಹೈದರಾಬಾದ್ ನಲ್ಲಿ ನಡೆದ ಸೀಮಂತ ಸಂಭ್ರಮದಲ್ಲಿ ಚಿರಂಜೀವಿ ಇಡೀ ಕುಟುಂಬ ಜೊತೆಗೆ ಆಪ್ತರು ಹಾಗು ಸಿನಿ ಗಣ್ಯರು ಹಾಜರಾಗಿದ್ದರು. ಇದೀಗ ತಾಯಂದಿರ ದಿನವಾರ ಮೇ 14ರಂದು ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್​ ಷೋ ಮಾಡಿದ್ದಾರೆ. ಉಪಾಸನಾ ಅವರು ಮೊದಲಬಾರಿಗೆ ಬೇಬಿ ಬಂಪ್ ಫೋಟೋಶೂಟ್​ ಮಾಡಿಸಿಕೊಂಡಿದ್ದು, ತಾವು ಅಮ್ಮನಾಗುತ್ತಿರುವ ಬಗ್ಗೆ ಅಮ್ಮಂದಿರ ದಿನದಂದು ಖುಷಿ ಹಂಚಿಕೊಂಡಿದ್ದಾರೆ.
 
ಬ್ಲ್ಯಾಕ್ ಟೀ ಶರ್ಟ್ ಹಾಗೂ ಪ್ಯಾಂಟ್​ ಧರಿಸಿ ಫೋಟೋದಲ್ಲಿ ಕಾಣಿಸಿದ್ದಾರೆ. ಎಲ್ಲಾ ಕಾರಣಗಳಿಂದಲೂ ನಾನು ತಾಯಿಯಾಗುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ನಾನು ಸಮಾಜದ ನಿರೀಕ್ಷೆಗಳನ್ನು ನೋಡಿ ತಾಯಿಯಾಗಿಲ್ಲ. ನನ್ನ ವೈವಾಹಿಕ ಜೀವನವನ್ನು ಮತ್ತಷ್ಟು ಸದೃಢಪಡಿಸಲು ನಾನು ತಾಯಿಯಾಗಿಲ್ಲ. ನನ್ನ ಮಗ/ಮಗಳು ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ನಾನು ಭಾವನಾತ್ಮಕವಾಗಿ ಸಿದ್ಧವಾಗಿರುವಾಗ ತಾಯಿಯಾಗಿದ್ದೇನೆ ಎಂದು ಉಪಾಸನಾ ಹೇಳಿದ್ದಾರೆ. ಈ ಫೋಟೋಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಬಾಡಿಶೇಮಿಂಗ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರಾಮ್ ಚರಣ್ ಪತ್ನಿ; ಟ್ರೋಲ್‌ಗಳ ಬಗ್ಗೆ ಹೇಳಿದ್ದೇನು?
 
ಇದೀಗ ಮದುವೆಯಾಗಿ 10 ವರ್ಷಗಳ ನಂತರ ಮಗುವ ಪಡೆಯುತ್ತಿರುವ ಬಗ್ಗೆ ಮತ್ತು ಸಾಮಾಜ ಹೇಗೆ ಒತ್ತಡ ಹೇರಿತು ಎಂದು ಮೊದಲ ಬಾರಿಗೆ ಉಪಾಸನಾ (Upasana) ಮಾತನಾಡಿದ್ದರು. ಮದುವೆಯಾಗಿ 10 ವರ್ಷಗಳಾದರೂ ಮಕ್ಕಳಾಗದಿದ್ದ ಬಗ್ಗೆ ಪದೇ ಪದೇ ಕೇಳಲಾಗುತ್ತಿದ್ದ ಪ್ರಶ್ನೆಗೆ ಈಚೆಗೆ ಉತ್ತರಿಸಿದ್ದ ಉಪಾಸನಾ ಅವರು,  ಕುಟುಂಬ ಮತ್ತು ಸಮಾಜದಿಂದ ಸಾಕಷ್ಟು ಒತ್ತವಿತ್ತು. ಆದರೆ ರಾಮ್ ಚರಣ್ ಮತ್ತು ನಾನು ಯಾವುದೇ ಪರಿಣಾಮ ಬೀರಲು ಬಿಡಲಿಲ್ಲ ಎಂದಿದ್ದರು. ಅಮ್ಮನಾಗುತ್ತಿರುವ ಬಗ್ಗೆ ಹೇಳಿದ್ದ ಅವರು, 'ನಾನು ತುಂಬಾ ಉತ್ಸುಕಳಾಗಿದ್ದೇನೆ. ತುಂಬಾ ಹೆಮ್ಮೆಪಡುತ್ತೇನೆ.  ಸಮಾಜ ಬಯಸಿದಾಗ ಅಲ್ಲ ನಾವು ಬಯಸಿದಾಗ ಮಗು ಪಡೆಯುತ್ತಿದ್ದೇವೆ. ಮದುವೆಯಾಗಿ ಹತ್ತು ವರ್ಷಗಳ ನಂತರ ಈಗ ಮಗುವನ್ನು ಪಡೆಯುತ್ತಿದ್ದೇವೆ. ಇದು ಉತ್ತಮ ಸಮಯವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಾನು ಅಭಿವೃದ್ದಿ ಹೊಂದಿದ್ದೇವೆ, ಇಬ್ಬರೂ ಆರ್ಥಿಕವಾಗಿ ಸದೃಢರಾಗಿದ್ದೇವೆ. ಮಕ್ಕಳನ್ನೂ (Children) ನಾವೆ ನೋಡಿಕೊಳ್ಳಬಹುದು. ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ನಾವು ದಂಪತಿ ಸಮಾಜ ಅಥವಾ ಕುಟುಂಬದಿಂದ ಅಥವಾ ಹೊರಗಿನಿಂದ ಯಾವುದೇ ಒತ್ತಡ ಬರಲು ಬಿಡಲಿಲ್ಲ. ಇದು ನಮ್ಮ ನಮ್ಮ ಸಂಬಂಧದ ಬಗ್ಗೆ ಮತ್ತು ನಾವು ಹೇಗೆ ಮಗುವನ್ನು ಬೆಳೆಸಲಿದ್ದೇವೆ ಎನ್ನುವ ಬಗ್ಗೆ ಸಾಕಷ್ಟು ಹೇಳುತ್ತೆ'  ಎಂದು ಹೇಳಿದ್ದರು. 

ಸಿಕ್ಕಾಪಟ್ಟೆ ಟ್ರೋಲ್‌ಗಳಿಂದ ಮಾನಸಿಕ ಆರೋಗ್ಯದ ಮೇಲೆ ಬೀರುತ್ತಿತ್ತು ಎಂದು ಉಪಾಸನಾ ಹೇಳಿದ್ದರು. ಟ್ರೋಲ್‌ಗಳನ್ನು ಎದುರಿಸಲು ಸಿಕ್ಕಾಪಟ್ಟೆ ಕಷ್ಟವಾಯಿತು ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ನೆಗೆಟಿವ್ ಕಾಮೆಂಟ್‌ಗಳನ್ನು ನಿರ್ಲಕ್ಷಿಸುವುದನ್ನು ಕಲಿತಿದ್ದೇನೆ ಎಂದು ಅವರು ತಿಳಿಸಿದ್ದರು.  ಇತರರು ಏನು ಹೇಳುತ್ತಾರೆಂದು ಚಿಂತಿಸುವುದಕ್ಕಿಂತ ತನ್ನ ಕೆಲಸ ಮತ್ತು ಆರೋಗ್ಯದ ಮೇಲೆ ಹೆಚ್ಚು ಗಮನ ಕೊಡುವುದು ಮುಖ್ಯ ಎಂದು ಉಪಾಸನಾ ಹೇಳಿದ್ದರು.  ಇತ್ತೀಚೆಗಷ್ಟೇ ಉಪಾಸನಾ ಅವರ ಬೇಬಿ ಶೋವರ್​  ಪಾರ್ಟಿ (Baby shower) ನಡೆಯಿತು. ಈ ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು. ಎನ್‌ಟಿಆರ್ ಪತ್ನಿ ಕೂಡಾ ಸಿನಿಮಾ ಸೆಲೆಬ್ರಿಟಿಗಳೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಮಿತಾಭ್​ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ

  ಆರ್​ಆರ್​ಆರ್ ನಂತರ, ಎನ್​ಟಿಆರ್ ಮತ್ತು ರಾಮ್ ಚರಣ್ ಮಾತ್ರವಲ್ಲದೆ ಲಕ್ಷ್ಮಿ ಪ್ರಣತಿ ಉಪಾಸನಾ ಉತ್ತಮ ಸ್ನೇಹಿತರಾದರು. ಈ ಹಿನ್ನಲೆಯಲ್ಲಿ ಗರ್ಭಿಣಿಯಾದ ತಮ್ಮ ಆತ್ಮೀಯ ಗೆಳತಿ ಉಪಾಸನಾ ಅವರಿಗೆ ಲಕ್ಷ್ಮಿ ಪ್ರಣತಿ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!