ಫಸ್ಟ್ ಡೇಟ್‌ನಲ್ಲೇ ಸೆಕ್ಸ್ ಓಕೆ; ಲೈಂಗಿಕಾಸಕ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ

Published : May 14, 2023, 12:54 PM ISTUpdated : May 14, 2023, 12:55 PM IST
ಫಸ್ಟ್ ಡೇಟ್‌ನಲ್ಲೇ ಸೆಕ್ಸ್ ಓಕೆ; ಲೈಂಗಿಕಾಸಕ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ

ಸಾರಾಂಶ

ಫಸ್ಟ್ ಡೇಟ್‌ನಲ್ಲೇ ಸೆಕ್ಸ್ ಓಕೆ ಎಂದ ನಟಿ ಪ್ರಿಯಾಂಕಾ ಲೈಂಗಿಕಾಸಕ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅಮೆರಿಕಾದ ಗಾಯಕ ನಿಕ್ ಜೋನಸ್ ಮದುವೆಯಾದ ಬಳಿಕ ಪ್ರಿಯಾಂಕಾ ಚೋಪ್ರಾ ವಿದೇದಲ್ಲೇ ನೆಲೆಸಿದ್ದು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗ್ಲೋಬಲ್ ಸ್ಟಾರ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಸಿನಿಮಾ ಜೊತೆಗೆ ಮಗಳು ಮಾಲ್ತಿ ಮೇರೆ ಆರೈಕೆಯಲ್ಲೂ ನಿರತರಾಗಿದ್ದಾರೆ. ಇತ್ತೀಚೆಗಷ್ಟೆ ಸಿಟಾಡೆಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟಿ ಪ್ರಿಯಾಂಕಾ ಚಾಟ್ ಶೋ ಒಂದರಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ವಾಚ್ ವಾಟ್ ಹ್ಯಾಪನ್ಸ್ ವಿತ್ ಆಂಡಿ ಕೋಹೆನ್‌ನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರಲ್ಲೂ ಸೆಕ್ಸ್ ಸಂಬಂಧಿಸಿದ ಪ್ರಶ್ನೆಗಳಿಗೆ ಮನಬಿಚ್ಚಿ ಮಾತನಾಡಿದ್ದಾರೆ. 

ಫಸ್ಟ್ ಡೇಟ್, ಸೆಕ್ಸ್ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ. ಫಸ್ಟ್ ಡೇಟ್‌ನಲ್ಲೇ ಸೆಕ್ಸ್ ಓಕೆ ಎಂದು ಹೇಳಿದ್ದಾರೆ. ಬಳಿಕ ಮತ್ತೊಂದು ಪ್ರಶ್ನೆ ಎದುರಾಯಿತು. ಆ ಪ್ರಶ್ನೆ ಕೇಳಿ ಪ್ರಿಯಾಂಕಾ ಜೋರಾಗಿ ನಗಲು ಪ್ರಾರಂಭಿಸಿದರು. ಪ್ರಿಯಾಂಕಾಗೆ ಕೇಳಿದ ಪ್ರಶ್ನೆ ಹೀಗಿತ್ತು, ಓರಲ್ ಸೆಕ್ಸ್ ಅಥವಾ ಚೀಸ್ ಎರಡರಲ್ಲಿ ಯಾವುದು ಓಕೆ ಎಂದು ಕೇಳಿದರು. ಇದಕ್ಕೆ ಪ್ರಿಯಾಂಕಾ, 'ನನಗೆ ಓರಲ್ ಸೆಕ್ಸ್ ಜೊತೆಗೆ ಚೀಸ್ ಕೂಡ ಬೇಕು ' ಎಂದು ಹೇಳಿದ್ದಾರೆ. ಪಕ್ಕದಲ್ಲೇ ಇದ್ದ ಪ್ರಿಯಾಂಕಾ ಸಹ ನಟ ಸ್ಯಾಮ್ ಕೂಡ ಅದನ್ನೇ ಒಪ್ಪಿಕೊಂಡರು.   

ಪ್ರಿಯಾಂಕಾ ಚೋಪ್ರಾ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ವಿಡಿಯೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸದಾ ಬೋಲ್ಡ್ ಆಗಿಯೇ ಮಾತನಾಡುವ ಪ್ರಿಯಾಂಕಾ ಸೆಕ್ಸ್ ಬಗ್ಗೆಯೂ ಯಾವುದೇ ಮುಚ್ಚು ಮರೆ ಇಲ್ಲದೆ ಮಾತನಾಡಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಮೊನ್ನೆಯಷ್ಟೆ ಭಾರತಕ್ಕೆ ಆಗಮಿಸಿದ್ದಾರೆ. ಸಹೋದರಿ ಪರಿಣೀತಿ ಚೋಪ್ರಾ ಅವರ ನಿಶ್ಚಿತಾರ್ಥ ಸಮಾರಂಭಕ್ಕೆ ಆಮಿಸಿದ್ದರು. ಪರಿಣೀತಿ ಚೋಪ್ರಾ ಆಪ್ ನಾಯಕ ರಾಘವ್ ಚಡ್ಡಾ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಫೋಟೋಗಳು ವೈರಲ್ ಆಗಿವೆ. ಪ್ರಿಯಾಂಕಾ ಚೋಪ್ರಾ ಕೂಡ ಸಹೋದರಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಮಿಂಚಿದ್ದಾರೆ. ಮದುವೆಗಾಗಿ ಕಾಯುತ್ತಿದ್ದೀನಿ ಎಂದು ಹೇಳಿದ್ದಾರೆ. 

ಇತ್ತೀಚೆಗಷ್ಟೆ ಪ್ರಿಯಾಂಕಾ ಡೇಟಿಂಗ್ ವಿಚಾರವಾಗಿ ಮಾತನಾಡಿದ್ದರು. ಮದುವೆಗೂ ಮುನ್ನ ಅನೇಕರ ಜೊತೆ ಡೇಟ್ ಮಾಡಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ತಮ್ಮ ಬಾಯ್​ಫ್ರೆಂಡ್ಸ್ ಎಲ್ಲಾ ಒಳ್ಳೆಯವರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನಟಿ ಹೇಳಿದ್ದಾರೆ. ನಾನು ನಟಿಸಿದ ನಟರ ಜೊತೆ ಆಗಾಗ ಡೇಟ್ ಮಾಡುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.  ನಾನು ಯಾವಾಗಲೂ ನನ್ನ ಸೆಟ್‌ನಲ್ಲಿ ಭೇಟಿಯಾದ ಸಹ ನಟರೊಂದಿಗೆ ಡೇಟಿಂಗ್ ಮಾಡಿದ್ದೇನೆ. ಸಂಬಂಧಕ್ಕೆ ಬೆಲೆ ಕೊಡುತ್ತೇನೆ. ಪ್ರತಿಯೊಂದು ಸಂಬಂಧವು ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ.  ನನ್ನ ಜೀವನದಲ್ಲಿ ಬಂದ ಜನರ ಬಗ್ಗೆ ಹೇಗೆ ಸಂಬಂಧ ಹೊಂದಬೇಕು, ಡೇಟಿಂಗ್​ ಯಾವ ವ್ಯಕ್ತಿಯ ಜೊತೆ ಮಾಡಬೇಕು ಎಂಬ ತಿಳಿವಳಿಕೆ ನನಗಿತ್ತು. ಆದ್ದರಿಂದ  ಉತ್ತಮ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?