
ಬಹುಭಾಷಾ ನಟಿ ತಮನ್ನಾ ಸದ್ಯ ಕಾವಾಲಾ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಎಲ್ಲಿ ನೋಡಿದ್ರೋ ಈಗ ಕಾವಾಲಾ ಹಾಡಿನದ್ದೇ ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ಕಾವಾಲಾ ಹಾಡು ಹಲ್ ಚಲ್ ಎಬ್ಬಿಸಿದೆ. ಅಂದಹಾಗೆ ಇದು ಜೈಲರ್ ಸಿನಿಮಾದ ಹಾಡು. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಸಿನಿಮಾವಾಗಿದ್ದು ತಮನ್ನಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟಿ ತಮನ್ನಾ ಪ್ರತಿ ಸಿನಿಮಾದಲ್ಲೂ ಅತ್ಯುತ್ತಮವಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ.
ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟಿ ತಮನ್ನಾ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮನ್ನಾ ನಟನೆ ಜೊತೆಗೆ ಫ್ಯಾಷನ್ ಮೂಲಕವೂ ಗಮನ ಸೆಳೆಯುತ್ತಿರುತ್ತಾರೆ. ತಮನ್ನಾ ಬಳಿ ಅತೀ ದೊಡ್ಡ ವಜ್ರದ ಉಂಗುರವಿದೆ. ಇದು ವಿಶ್ವದಲ್ಲಿಯೇ 5ನೇ ಅತೀ ದೊಡ್ಡ ಉಂಗುರವಾಗಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ತಮನ್ನಾ ಬಳಿ ಇರುವ ಉಂಗುರವನ್ನು ಕೊಟ್ಟಿದ್ದು ಒಬ್ಬರು ಸ್ಟಾರ್ ನಟನ ಪತ್ನಿ.
ಹೌದು ವಿಶ್ವದದಲ್ಲಿಯೇ 5ನೇ ಅತೀ ದೊಡ್ಡ ಉಂಗುರದ ವಡತಿಯಾಗಿದ್ದಾರೆ ತಮನ್ನಾ. ಇದರ ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿ ಎನ್ನಲಾಗಿದೆ. ಅಂದಹಾಗೆ ಇದು ತಮನ್ನಾ ಖರೀದಿ ಮಾಡಿದ ಉಂಗುರವಲ್ಲ. ಇದನ್ನು ತೆಲುಗು ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಗಿಫ್ಟ್ ನೀಡಿದ್ದು. ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದ ಕಾರಣ ತಮನ್ನಾ ಅವರಿಗೆ ಈ ಉಂಗುರವನ್ನು ಗಿಫ್ಟ್ ಆಗಿ ನೀಡಲಾಗಿದೆ ಎನ್ನಲಾಗಿದೆ.
Tamannah Bhatia: ‘ಕಾವಾಲಾ’ ಹಾಡಿನ ಹವಾ; ಏರ್ಪೋರ್ಟ್ನಲ್ಲೇ ಡ್ಯಾನ್ಸ್ ಮಾಡಿದ ಮಿಲ್ಕಿ ಬ್ಯೂಟಿ
ಆ ಸಿನಿಮಾದಲ್ಲಿ ತಮನ್ನಾ ಜೊತೆಗೆ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ಅನುಷ್ಕಾ ಶೆಟ್ಟಿ, ವಿಜಯ್ ಸೇತುಪತಿ, ನಯನತಾರಾ ಮತ್ತು ನಿಹಾರಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವನ್ನು ಕೊನಿಡೇಲಾ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ರಾಮ್ ಚರಣ್ ನಿರ್ಮಿಸಿದ್ದರು. ಈ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಸುಂದರವಾದ ಉಡುಗೊರೆಯನ್ನು ತಮನ್ನಾಗೆ ಗಿಫ್ಟ್ ನೀಡಲಾಗಿದೆ. ತಮನ್ನಾ ಈ ಉಂಗುರವನ್ನು ಬೆರಳಿಗೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಹಳೆಯ ಫೋಟೋ ಮತ್ತೆ ವೈರಲ್ ಆಗಿದೆ.
ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್ ವಿಡಿಯೋ ವೈರಲ್!
ತಮನ್ನಾ ಫೋಟೋವನ್ನು ಉಪಾಸನಾ ಶೇರ್ ಮಾಡಿದ್ದರು. ತಮನ್ನಾ ಕೂಡ ಪ್ರತಿಕ್ರಿಯೆ ನೀಡಿ ಪ್ರೀತಿ ವ್ಯಕ್ತಪಡಿಸಿದ್ದರು. ತಮನ್ನಾ ಗಿಫ್ಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಸೈರಾ ಸಿನಿಮಾದಲ್ಲಿ ತಮನ್ನಾ ನಟನೆಯನ್ನು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಅದ್ಭುತ ನಟನೆಗೆ ಸಿಕ್ಕ ಸುಂದರ ಗಿಫ್ಟ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು. ಹಳೆಯ ಗಿಫ್ಟ್ ವಿಚಾರ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.