Urfi Javed: ಶಾರುಖ್​ ಖಾನ್​ ಎರಡನೇ ಹೆಂಡ್ತಿಯಾಗಲು ಉರ್ಫಿ ಸಿದ್ಧ , ಏನಿದು ಹೊಸ ವಿಷ್ಯ?

By Suvarna News  |  First Published Jan 28, 2023, 4:16 PM IST

ಸದಾ ಬಟ್ಟೆಗಳಿಂದ ಟ್ರೋಲ್​  ಆಗ್ತಿರೋ ಉರ್ಫಿ ಜಾವೇದ್​ ಈಗ ಶಾರುಖ್​ ಖಾನ್​ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದಾರೆ. ಏನದು?
 


ಮುಂಬೈ: ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ಇವರ ಕನಿಷ್ಠ ಉಡುಪುಗಳುಳ್ಳ ದೇಹ. ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಉಡುಪು ಧರಿಸುವುದರಿಂದಲೇ ಕೆಲ ತಿಂಗಳಿನಿಂದ ಟ್ರೋಲ್​ ಆಗುತ್ತಲೇ (ಕು)ಖ್ಯಾತಿ ಗಳಿಸಿದ್ದಾರೆ ಉರ್ಫಿ. ಟ್ರೋಲ್​ (Troll) ಮೂಲಕವೇ ಖುಷಿ ಪಡುತ್ತಾ, ಇನ್ನಷ್ಟು ಕಡಿಮೆ ಉಡುಪುಗಳ ಜೊತೆಗೆ ಚಿತ್ರ ವಿಚಿತ್ರ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಉರ್ಫಿ. ತನ್ನ ಈ ಉಡುಪುಗಳಿಂದಲೇ ಮುಂಬೈನಲ್ಲಿ ಎಲ್ಲಿಯೂ ಮನೆ ಸಿಗುತ್ತಿಲ್ಲ ಎಂದು ಮೊನ್ನೆಯಷ್ಟೇ ಗೋಳು ತೋಡಿಕೊಂಡಿದ್ದರು ನಟಿ.   ಮುಂಬೈಯಂತಹ ದೊಡ್ಡ ನಗರದಲ್ಲಿಯೂ ಅವರಿಗೆ ಬಾಡಿಗೆಗೆ ಮನೆ ನೀಡಲು ಯಾವುದೇ ಮಾಲೀಕರು ಸಿದ್ಧರಿಲ್ಲ. ಈ ನೋವನ್ನು ಉರ್ಫಿ ಜಾವೇದ್ ಟ್ವೀಟ್ (Tweet) ಮೂಲಕ ಹಂಚಿಕೊಂಡಿದ್ದರು. ಮುಂಬೈನಲ್ಲಿ ಬಾಡಿಗೆಗೆ ಮನೆ ಸಿಗದ ಕಾರಣ ತಮಗೆ ವಾಸಿಸಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದರು ಈಕೆ. 

ಅಷ್ಟಕ್ಕೂ ಉರ್ಫಿ ಜಾವೇದ್ ಹೇಳಿದ್ದು ಏನೆಂದರೆ,  'ನನಗೆ ಯಾರೂ ಬಾಡಿಗೆ ಮನೆ (rented house) ಕೊಡಲು ಮುಂದೆ ಬರ್ತಿಲ್ಲ.  ನಾನು ಮುಸ್ಲಿಂ (muslim) ಎಂಬ ಕಾರಣಕ್ಕೆ ಹಿಂದೂ ಮಾಲೀಕರು ನನಗೆ ಮನೆ ನೀಡುತ್ತಿಲ್ಲ, ಮುಸ್ಲಿಂ ಮನೆಗೆ ಹೋದರೆ ನಾನು  ಬಟ್ಟೆ ತೊಡುವ ರೀತಿ ಸರಿಯಿಲ್ಲ ಎಂದು ಅವರೂ ಮನೆ ಕೊಡ್ತಿಲ್ಲ. ಇನ್ನು ಕೆಲವರು ನನಗೆ  ಬರುತ್ತಿರುವ ರಾಜಕೀಯ ಬೆದರಿಕೆಗಳಿಗೆ ಹೆದರಿ ಮನೆ ಕೊಡಲು ಹೆದರುತ್ತಿದ್ದಾರೆ. ಮುಂಬೈನಲ್ಲಿ ನನಗೆ ಎಲ್ಲಿಯೂ ಮನೆ ಸಿಗ್ತಿಲ್ಲ. ಏನು ಮಾಡಲಿ ನಾನು  ನಿರಾಶ್ರಿತರಾಳಿಬಿಟ್ಟಿದ್ದೇನೆ ಎಂದು ಟ್ವಿಟರ್​ನಲ್ಲಿ ದುಃಖ ತೋಡಿಕೊಂಡಿದ್ದರು. ಇಂತಿಪ್ಪ ಉರ್ಫಿಗೆ ಈಗ ಮದುವೆಯಾಗುವ ಆಸೆಯಾಗಿದೆ.

Tap to resize

Latest Videos

25 ವರ್ಷದ ಉರ್ಫಿಗೆ ಇನ್ನೂ ಮದುವೆಯಾಗಿಲ್ಲ. ಆದ್ದರಿಂದ ಈಗ ಈಕೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ ಜೊತೆಗೆ ಟ್ರೋಲ್​ ಕೂಡ ಆಗಿದ್ದಾರೆ. ಪ್ರೇಮ (Love) ನಿವೇದನೆ ಮಾಡಿಕೊಂಡರೆ ಟ್ರೋಲ್​ ಯಾಕೆ ಎಂದುಕೊಂಡ್ರಾ? ಅಲ್ಲೇ ಇರೋದು ವಿಶೇಷ. ಈಕೆ ಪ್ರೇಮ ನಿವೇದನೆ ಮಾಡಿಕೊಂಡಿರುವುದು ನಟ ಶಾರುಖ್​ ಖಾನ್​ಗೆ! ಶಾರುಖ್ ಖಾನ್ ಅವರನ್ನು ಮದುವೆಯಾಗಲು ಬಯಸುವುದಾಗಿ ಉರ್ಫಿ ಹೇಳಿದ್ದಾರೆ  ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಜ. ಉರ್ಫಿ, ಶಾರುಖ್ ಖಾನ್ (Shah Rukh Khan) ಅವರನ್ನು ಮದುವೆಯಾಗಬೇಕಂತೆ. ಎರಡನೇ ಹೆಂಡ್ತಿ (wife) ಮಾಡ್ಕೊಳ್ಳಿ ಎಂದಿರುವ ನಟಿ ಐ ಲವ್​ ಯೂ ಶಾರುಖ್​ ಎಂದಿದ್ದಾರೆ.  ಮಾಧ್ಯಮದವರ ಕಣ್ಣಿಗೆ ಕಂಡಿರುವ ಉರ್ಫಿ ಅವರನ್ನು ಪತ್ರಕರ್ತರು ಪ್ರಶ್ನೆ ಕೇಳಿದ್ದರು. 'ಶಾರುಖ್ ಅವರು ಸಿಕ್ಕರೆ ನೀವೇನು ಹೇಳುತ್ತೀರಿ' ಎಂದು ಪ್ರಶ್ನಿಸಿದ್ದಾಗ ಉರ್ಫಿ ಹಿಂದೆ ಮುಂದೆ ನೋಡದೆ, ಐ ಲವ್ ಯೂ ಶಾರುಖ್. ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ ಎಂದು ಹೇಳುತ್ತೇನೆ ಎಂದಿದ್ದಾರೆ ನಟಿ.

ಅಂದಹಾಗೆ ಉರ್ಫಿ ಜಾವೇದ್ ಟಿವಿ ಮತ್ತು ಬಾಲಿವುಡ್‌ನ ದಿಟ್ಟ ನಟಿ ಎನಿಸಿಕೊಂಡಿದ್ದಾರೆ. ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟವರೂ ಇವರೇ. ಇದಕ್ಕೆ ಕಾರಣ ಅವರ ಡ್ರೆಸ್ಸಿಂಗ್ ಸೆನ್ಸ್. ಯಾರೂ ಊಹಿಸಲೂ ಸಾಧ್ಯವಾಗದ ಕೆಲಸವನ್ನು ಉರ್ಫಿ ಮಾಡುತ್ತದೆ. ಪ್ಲಾಸ್ಟಿಕ್, ಕಸದ ಚೀಲ, ಕ್ಯಾಸೆಟ್ ರೀಲ್, ಚೈನ್, ಸಿಮ್, ಬಿಯರ್ ಕ್ಯಾನ್ ಮುಚ್ಚಳ ಹೀಗೆ ಹಲವು ವಸ್ತುಗಳನ್ನು ಬಳಸಿ ಡ್ರೆಸ್ ತಯಾರಿಸಿದ್ದಾರೆ. ಅನೇಕ ಜನರು ನಿಂದನೆ ಮತ್ತು ಕೆಲವರು ಎಫ್ಐಆರ್ (FIR) ದಾಖಲಿಸಿದ್ದಾರೆ. ಕಾಶ್ಮೀರಿ ಷಾ ಅವರಿಂದ  ಹಿಡಿದು ಬಿಜೆಪಿ ನಾಯಕರವರೆಗೂ ಇವರು ಬಟ್ಟೆಗಾಗಿ ಟೀಕೆಗೆ ಒಳಗಾಗಿದ್ದಾರೆ. ಇತ್ತೀಚೆಗೆ, ಬಿಜೆಪಿ ನಾಯಕಿ ಚಿತ್ರಾ ವಾಘ್ (Chitra Wagh) ಅವರು ರಸ್ತೆಯಲ್ಲಿ ಅಶ್ಲೀಲತೆಯನ್ನು ಹರಡಿದ್ದಕ್ಕಾಗಿ ಉರ್ಫಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದಕ್ಕೆ ಸುಮ್ಮನಿರದ ಉರ್ಫಿ, ತಿರುಗಿ ಅವರಿಗೇ ಅಶ್ಲೀಲತೆಯ ಪಾಠ ಹೇಳಿದ್ದರು. 

Malaika Arora: ಮಾಜಿ ಪತಿಯನ್ನು ತಬ್ಬಿಕೊಂಡು ಸುದ್ದಿಯಾಗ್ತಿದ್ದಾರೆ ನಟಿ ಮಲೈಕಾ ಅರೋರಾ!

 

 
 
 
 
 
 
 
 
 
 
 
 
 
 
 

A post shared by Voompla (@voompla)

click me!