ನನ್ನ ತಂದೆ ಕ್ರೂರಿ... ಹೆಣ್ಣಾಗಿ ಹುಟ್ಟಿದ್ದಕ್ಕೆ ಮಕ್ಕಳಿಗೆ, ತಾಯಿಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ: ಕರಾಳ ದಿನಗಳ ನೆನೆದ ಉರ್ಫಿ

Published : Nov 01, 2024, 03:43 PM IST
ನನ್ನ ತಂದೆ ಕ್ರೂರಿ... ಹೆಣ್ಣಾಗಿ ಹುಟ್ಟಿದ್ದಕ್ಕೆ ಮಕ್ಕಳಿಗೆ, ತಾಯಿಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ: ಕರಾಳ ದಿನಗಳ ನೆನೆದ ಉರ್ಫಿ

ಸಾರಾಂಶ

ಅತ್ಯಂತ ಕ್ರೂರಿಯಾಗಿದ್ದ   ತಂದೆಯಿಂದ ಮಕ್ಕಳು ಮತ್ತು ತಾಯಿ ಅನುಭವಿಸಿರುವ ಚಿತ್ರಹಿಂಸೆಯ ಕುರಿತು ನಟಿ ಉರ್ಫಿ ಜಾವೇದ್​ ಮಾತನಾಡಿದ್ದಾರೆ.  

ಯಾರೇ ಅರೆಬರೆ ಬಟ್ಟೆ ತೊಟ್ಟರೂ ಅವರನ್ನು ನಟಿ ಉರ್ಫಿ ಜಾವೇದ್​ಗೆ  (Uorfi Javed) ಹೋಲಿಸುವುದು ಮಾಮೂಲು. ಬಟ್ಟೆಗಳಿಂದಲೇ ಅಷ್ಟು ಫೇಮಸ್​ ಆಗಿರುವವರು ಉರ್ಫಿ. ಬಟ್ಟೆ ಮಾತ್ರವಲ್ಲದೇ, ನಟಿ ಮೈಮೇಲೆ ಬಟ್ಟೆಯ ರೂಪದಲ್ಲಿ ಹಾಕಿಕೊಳ್ಳದ ವಸ್ತುಗಳೇ ಇಲ್ಲ ಎನ್ನಬಹುದೇನೋ. ಇದೇ ಕಾರಣಕ್ಕೆ ಉರ್ಫಿ ಎಂದಾಕ್ಷಣ ಎಲ್ಲರ ಕಣ್ಣೆದುರಿಗೆ ಬರುವುದು ಚಿತ್ರ ವಿಚಿತ್ರ ಬಟ್ಟೆಗಳನ್ನು ತೊಟ್ಟ ಇಲ್ಲವೇ ದೇಹ ಪೂರ್ತಿ ಕಾಣುವ ಅರ್ಧಬಂರ್ಧ ಬಟ್ಟೆ ತೊಟ್ಟ ನಟಿ. ನಟಿಯಾಗಿದ್ದರೂ ಈಕೆ ನಟನೆಯಿಂದ ಗುರುತಿಸಿಕೊಳ್ಳಲಿಲ್ಲ, ಬದಲಿಗೆ ಆಕೆಯ ಬಟ್ಟೆಯಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನವೂ ಚಿತ್ರ ವಿಚಿತ್ರ ವೇಷಭೂಷಣ ಮಾಡಿಕೊಳ್ಳುತ್ತಾ ಫೋಟೋಗೆ ಪೋಸ್​ ಕೊಟ್ಟು ಟ್ರೋಲ್​ ಆಗುವುದು ಎಂದರೆ ಇವರಿಗೆ ತುಂಬಾ ಇಷ್ಟ. ಹೂವುಗಳಿಂದ, ಹಣ್ಣುಗಳಿಂದ ಇಲ್ಲವೇ ಸಿಕ್ಕಸಿಕ್ಕ ಸಾಮಗ್ರಿಗಳಿಂದ ಖಾಸಗಿ ಅಂಗಗಳನ್ನಷ್ಟೇ ಮುಚ್ಚಿಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲಿ ಈಕೆ ನಿಸ್ಸೀಮರು.  

ಆದರೆ ಉರ್ಫಿಯ ಬಾಲ್ಯ, ಯೌವನ ಎಲ್ಲವೂ ನರಕವೇ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ, ಅವರ ತಂದೆ ಜಾವೇದ್​ ಒಬ್ಬ ಕ್ರೂರಿ, ಹಿಂಸಾತ್ಮಕ ವ್ಯಕ್ತಿಯಾಗಿದ್ದರು. ಅವರು ಮಕ್ಕಳಿಗೆ ಮತ್ತು ತಮ್ಮ ತಾಯಿಗೆ ಕೊಡುತ್ತಿದ್ದ ನರಕಯಾತನೆ ಯಾರಿಗೂ ಬೇಡ ಎಂದಿದ್ದಾರೆ ಉರ್ಫಿ. ಅವರ ಹಳೆಯ ಸಂದರ್ಶನವೊಂದು ವೈರಲ್​ ಆಗಿದೆ. ಇದು ಅವರ  ಕಣ್ಣೀರಿನ ಕಥೆ. ನನ್ನ ತಂದೆ ಮಕ್ಕಳಿಗೆ ಮತ್ತು ತಾಯಿಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ನಾವೆಲ್ಲಾ ಹೆಣ್ಣು ಮಕ್ಕಳು ಎನ್ನುವುದು. ನಾನು ಮೂರನೆಯವಳು. ನಾನು ಕೂಡ ಹೆಣ್ಣಾಗಿ ಹುಟ್ಟಿದ ಮೇಲೆ ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ನಾಲ್ಕನೆಯ ಬಾರಿಗೆ ಅಮ್ಮ ಗರ್ಭಿಣಿಯಾದರು. ಈಗಲೂ ಹೆಣ್ಣು ಹುಟ್ಟಿದರೆ ಡಿವೋರ್ಸ್​ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಸಿಕ್ಕಾಪಟ್ಟೆ ದೌರ್ಜನ್ಯ ಮಾಡುತ್ತಿದ್ದರು ಎಂದಿದ್ದಾರೆ ಉರ್ಫಿ.

ಲವ್​ ಸಲ್ಮಾನ್​ ಮೇಲೆ, ಮದ್ವೆಯಾದದ್ದು ಅಭಿಷೇಕ್​ಗೆ? ಐಶ್ವರ್ಯ ರೈ ಈ ವಿಡಿಯೋದಿಂದ ರಟ್ಟಾಗೋಯ್ತು ಗುಟ್ಟು...

 ಮನೆಯಿಂದ ಹೊರಕ್ಕೆ ಹೋಗಲು ನಮಗೆ ಅವಕಾಶವೇ ಇರಲಿಲ್ಲ. ಕುತ್ತಿಗೆ ಪೂರ್ತಿ ಬಟ್ಟೆ ಹಾಕಬೇಕಿತ್ತು. ಕುತ್ತಿಗೆ ಸ್ವಲ್ಪ ಕಂಡರೂ ಥಳಿಸುತ್ತಿದ್ದರು. ಹೊಡೆಯುತ್ತಿದ್ದರು, ಯಾರಿಗೆ ದೇಹ ತೋರಿಸಲು ಹೀಗೆ ಹಾಕಿಕೊಂಡಿರುವೆ ಬಟ್ಟೆ ಎಂದು ಬೈಯುತ್ತಿದ್ದರು ಎಂದು ಉರ್ಫಿ ಹೇಳಿದ್ದಾರೆ. ಹಾಗೆಂದು ಉರ್ಫಿ ಸುಮ್ಮನೇ ಇರುವ ಹುಡುಗಿ ಅಲ್ಲವೇ ಅಲ್ಲ. ತಮ್ಮ ಕೋಣೆಯ  ಹಿಂದುಗಡೆ ಒಂದು ಬಾಗಿಲು ಇತ್ತು. ಎಲ್ಲರೂ ಮಲಗಿದಾಗ ಅಲ್ಲಿಂದ ಓಡಿ ಹೋಗಿ ಗೇಟ್​ ಹಾರಿ ಹೋಗುತ್ತಿದ್ದೆ. ಅಲ್ಲಿ ನನ್ನ ಸ್ನೇಹಿತರು ಕಾರಿನಲ್ಲಿ ಕಾಯುತ್ತಿದ್ದರು. ರಾತ್ರಿ ಪೂರ್ತಿ ಎಂಜಾಯ್​ ಮಾಡಿ ಮನೆಗೆ ಬರುತ್ತಿದ್ದೆ ಎಂದು ಹೇಳಿದ್ದಾರೆ. 
 
ಈ ಹಿಂದಿನ ಸಂದರ್ಶನದಲ್ಲಿ ನಟಿ, ತಂದೆಯ ಹಿಂಸೆ ತಾಳದೇ ಆತ್ಮಹತ್ಯೆಗೂ ಹಲವು ಬಾರಿ ಯತ್ನಿಸಿರುವುದಾಗಿ ಹೇಳಿದ್ದರು.   ಹಲವು ಬಾರಿ ಆತ್ಮಹತ್ಯೆಗೂ  ಪ್ರಯತ್ನಿಸಿದೆ. ಆದರೆ ಸಾಯಲಿಲ್ಲ, ಬದುಕಿದೆ. ಆದರೆ ಆ ನರಕದಲ್ಲಿ ಇರಲು ನನಗೆ ಕಷ್ಟವಾಯಿತು. ನಾನು ಹೇಗಾದರೂ ಮನೆಯಿಂದ ಹೊರಕ್ಕೆ ಬರಲು ಕಾಯುತ್ತಿದ್ದೆ. ಆದರೆ  ತಂದೆ ಅದಕ್ಕೂ ಬಿಡಲಿಲ್ಲ. ಸಾಯುವ ಬದಲು ಓಡಿ ಬರುವುದೇ ಒಳ್ಳೆಯದು ಎನಿಸಿ ಓಡಿ ಬಂದೆ.  ನನಗೆ ಫ್ಯಾಷನ್​ ಎಂದರೆ ತುಂಬಾ ಇಷ್ಟವಾಗಿತ್ತು. ಆದರೆ ನಾನು ಹುಟ್ಟಿದ ದಮನೆಯಲ್ಲಿ ಫ್ಯಾಷನ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ, ಆದರೆ ಏನು ಧರಿಸಬೇಕೆಂದು ನನಗೆ ತಿಳಿದಿತ್ತು. ನಾನು ನಾಲ್ಕು ಜನರು ಎದುರು ಎದ್ದು ಕಾಣಲು ಬಯಸುತ್ತಿದ್ದೆ. ಈಗಲೂ ಅದೇ ನನ್ನ ಆಸೆ.  ನಾನು ಉತ್ತಮವಾಗಿ ಕಾಣಬೇಕೆಂದು ಹಂಬಲ. ಎಲ್ಲಿಗೆ ಹೋದರೂ ಜನ  ನನ್ನನ್ನೇ ನೋಡಬೇಕು ಎಂಬ ಆಸೆ. ಈಗ ಆ ಆಸೆ ಈಡೇರಿದೆ ಎಂದಿದ್ದರು ಉರ್ಫಿ.  

ಫಸ್ಟ್​ ನೈಟ್​ ವಿಡಿಯೋ ಶೇರ್​ ಮಾಡಿದ ದಂಪತಿ! ಈ ಕಣ್ಣಿಂದ ಇನ್ನು ಏನೇನು ನೋಡ್ಬೋಕೋ ಅಂತಿರೋ ನೆಟ್ಟಿಗರು...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?