Latest Videos

Disha Irani: ಉರ್ಫಿಗೇ ಕಾಂಪಿಟೀಷನ್ನಾ? ಪ್ಯಾಂಟ್​ ಬಟನ್​ ಬಿಚ್ಚಿ ಒಳ ಉಡುಪು ತೋರಿದ ನಟಿ

By Suvarna NewsFirst Published Feb 24, 2023, 5:41 PM IST
Highlights

ಅತ್ಯಂತ ಕಡಿಮೆ ಉಡುಪು ತೊಟ್ಟು ಪ್ರದರ್ಶನ ಮಾಡುವ ನಟಿ ದಿಶಾ ಇರಾನಿ ಈಗ ಜಿಪ್​ಲೆಸ್ ಪ್ಯಾಂಟ್​ ಧರಿಸಿ ಒಳ ಉಡುಪು ತೋರಿಸಿ ಟ್ರೋಲ್​ಗೆ ಒಳಗಾಗಿದ್ದಾರೆ. 
 

ಬಾಲಿವುಡ್​ನ ಗ್ಲಾಮರಸ್​ ಹೀರೋಯಿನ್ ಎನಿಸಿಕೊಂಡಿರುವ ದಿಶಾ ಪಟಾನಿ (Disha Patani) ನಟನೆಗಿಂತಲೂ ಹೆಚ್ಚಾಗಿ ತಮ್ಮ ಬೋಲ್ಡ್​ ಲುಕ್​ನಿಂದಲೇ ಖ್ಯಾತಿ ಪಡೆದವರು. 2016 ರಲ್ಲಿ ಎಂಎಸ್ ಧೋನಿಯ ಅನ್ ಟೋಲ್ಡ್ ಲವ್ ಸ್ಟೋರಿ ಮೂಲಕ ಬಾಲಿವುಡ್​ಗೆ  ಎಂಟ್ರಿ ಕೊಟ್ಟ ದಿಶಾ ಪಟಾನಿ.  ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟದ್ದು ತೆಲುಗು ಚಿತ್ರದ ಮೂಲಕ. 2015ರಲ್ಲಿ ತೆರೆ ಕಂಡ ಲೋಫರ್ (Loffer) ಚಿತ್ರದ ಮೂಲಕ ವರುಣ್ ತೇಜ್ (Varun Tej) ರವರ ಜೊತೆ ನಟಿಸಿ ಬೆಳ್ಳಿ ಪರದೆಯಗೆ ಪದಾರ್ಪಣೆ  ಮಾಡಿದ್ದರು. ಇವರು ಚೀನಾದ ಆಕ್ಷನ್ ಹಾಸ್ಯ ಕುಂಗ್ ಫೂ ಯೋಗ (2017)ದಲ್ಲಿಯೂ ನಟಿಸಿದ್ದಾರೆ.  ಇದು ಸಾರ್ವಕಾಲಿಕ ಅತಿ ಗಳಿಕೆಯ ಚೀನಾದ ಚಲನಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ವಾಣಿಜ್ಯಿಕವಾಗಿ ಯಶಸ್ವಿಯಾದ ಹಿಂದಿ ಆಕ್ಷನ್ ಚಿತ್ರಗಳಾದ ಬಾಘಿ 2 (2018) ಮತ್ತು ಭಾರತ್ (2019) ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.

 ಉತ್ತರಪ್ರದೇಶದ ಬರೇಲಿ ಮೂಲಕ 31 ವರ್ಷದ ಬೆಡಗಿ ದಿಶಾ ಪಟಾನಿ, ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಫೋಟೋ ಶೇರ್​ ಮಾಡಿಕೊಂಡೇ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.  ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ (Dating affair) ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿತ್ತು. ಇದಾದ ಬಳಿಕ, ಇತ್ತೀಚೆಗೆ ತಮ್ಮ ಹೊಸ ಬಾಯ್ ಫ್ರೆಂಡ್ ಜೊತೆ ಲಿಫ್ಟ್​ನಲ್ಲಿ  ರೊಮಾಂಟಿಕ ಫೋಟೋಶೂಟ್​ ಮಾಡಿಸಿಕೊಂಡಿದ್ದರು.  ಈ ಹೊಸ ಗೆಳೆಯನ ಹೆಸರು  ಅಲೆಕ್ಸಾಂಡರ್ ಅಲೆಕ್ಸ್ ಆಗಿದ್ದು ಈಗ  ಜಿಮ್ ಟ್ರೈನರ್ ಎಂದು ಪರಿಚಯ ಮಾಡಿಸಿದ್ದರು.  ಬಿಕಿನಿ ಡ್ರೆಸ್​, ತುಂಡುಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಇವರು ಸಕತ್​ ಆ್ಯಕ್ಟೀವ್​ ಆಗಿರುತ್ತಾರೆ. ಇವರ ಗ್ಲಾಮರಸ್​ ಫೋಟೋಗಳು  ಹೆಚ್ಚು ಜನಪ್ರಿಯವಾಗುತ್ತಿವೆ. 

Urfi Javed ವಸ್ತುಗಳೆಲ್ಲಾ ಡ್ರೈವರ್​ ಕೈಯಲ್ಲಿ! ನೋವು ತೋಡಿಕೊಂಡ ನಟಿ...

ಜನಪ್ರಿಯತೆ ಹೆಚ್ಚಿದಷ್ಟೂ ಅತ್ಯಂತ ಕಡಿಮೆ ಉಡುಪುಗಳನ್ನು ತೊಡುವ ಖಯಾಲಿ ಕೆಲವು ನಟಿಯರಿಗೆ. ಅದರಂತೆ ದಿಶಾ ಕೂಡ ಈಗ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಕಡಿಮೆ ಉಡುಗೆಯ ಮೊರೆ ಹೋಗಿದ್ದಾರೆ. ಇದಾಗಲೇ ಸಾಕಷ್ಟು ಚಿತ್ರಗಳಲ್ಲಿ ಬಿಕಿನಿ ತೊಟ್ಟು ಬಹುತೇಕ ಸಂಪೂರ್ಣ ಶರೀರವನ್ನು ಪ್ರದರ್ಶನಕ್ಕೆ ಇಟ್ಟಿದ್ದ ನಟಿ, ಈಗ ಅನ್​ಬಟನ್​ ಪ್ಯಾಂಟ್​ (Zipless Pant)ಧರಿಸಿ ಒಳ ಉಡುಪನ್ನು ಪ್ರದರ್ಶಿಸಿದ್ದಾರೆ. ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಇದರ ಫೋಟೋಗಳನ್ನು ಹಾಕಿದ್ದಾರೆ. ಇದರಿಂದ ಬಹಳ ಟ್ರೋಲ್​ ಆಗಿದ್ದು, ಉರ್ಫಿ ಜಾವೇದ್​ (Urofi Javed) ಜೊತೆ ಕಾಂಪಿಟೀಷನ್ನಾ ಎಂದು ಹಲವು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಉರ್ಫಿ ಜಾವೇದ್​ ಅತ್ಯಂತ ಕನಿಷ್ಠ ಬಟ್ಟೆಯ ಜೊತೆಗೆ ಇದ್ದಬಿದ್ದ ವಸ್ತುಗಳನ್ನೆಲ್ಲಾ ಬಟ್ಟೆಯಂತೆ ಸುತ್ತಿಕೊಂಡು ಫೋಟೋಶೂಟ್​ ಮಾಡಿಸಿಕೊಳ್ಳುವಲ್ಲಿ ಫೇಮಸ್​. ಆದ್ದರಿಂದ ಯಾರೇ ಚಿತ್ರ ವಿಚಿತ್ರ ಬಟ್ಟೆ ಹಾಕಿಕೊಂಡರೆ ಆಕೆಯ ಜೊತೆ ಹೋಲಿಕೆ ಮಾಡುವುದು ಸಾಮಾನ್ಯ. ಅದರಂತೆ ಈಗ ಒಳ ಉಡುಪು ತೋರಿಸಿರೋ ದಿಶಾನಿಯನ್ನೂ ಉರ್ಫಿಗೆ ಹೋಲಿಕೆ ಮಾಡಿದ್ದಾರೆ. 

ಇನ್ನು ದಿಶಾ ಅವರ ಮುಂದಿನ ಸಿನಿಮಾದ ಕುರಿತು ಹೇಳುವುದಾದರೆ, ಪ್ರಭಾಸ್ ಮುಂಬರುವ ಬಿಗ್ ಸಿನಿಮಾ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಏಕ್ ವಿಲನ್ ರಿಟರ್ನ್ಸ್ ಎಂಬ ಮತ್ತೊಂದು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇದಾಗಲೇ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ, ಸ್ಟಾರ್ ಡಸ್ಟ್ ಪ್ರಶಸ್ತಿ (Star Dust Award), ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪಡೆದಿರುವ ದಿಶಾ ಇನ್ನೂ ಹೆಚ್ಚಿನ ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ. 

ಗಂಡ ಬದುಕಿರುವಾಗ್ಲೇ ಇದೆಂಥ ವೇಷನಮ್ಮಾ? ಭಾರಿ ಟ್ರೋಲ್​ ಆಗ್ತಿರೋ Kiara Advani

 

click me!