ಆಸ್ಕರ್ ಅಂಗಳದಲ್ಲಿ ದೀಪಿಕಾ ಪಡುಕೋಣೆ ಮಿಂಚುತ್ತಿದ್ದಾರೆ. ನಾಟು ನಾಟು ಹಾಡನ್ನು ಪ್ರಶಸ್ತಿಗೆ ಘೋಷಣೆ ಮಾಡುತ್ತಿದ್ದಂತೆಯೇ ಅವರು ಭಾವುಕರಾಗಿದ್ದಾರೆ. ನೆಟ್ಟಿಗರು ಏನು ಹೇಳುತ್ತಿದ್ದಾರೆ ನೋಡಿ..
2023ನೇ ಸಾಲಿನ 95ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್ ನಲ್ಲಿ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಆರಂಭ ಆಗಿದೆ. ವಿಶ್ವದ ಕಣ್ಣು ಇಂದು ಅಮೆರಿಕದತ್ತ ನೆಟ್ಟಿದೆ. ಜಗತ್ತೇ ಕಾಯುತ್ತಿದ್ದ ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಳು ಘೋಷಣೆಯಾಗಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ (Natu Natu) ಹಾಡಿಗೆ (Song) ಆಸ್ಕರ್ ಪ್ರಶಸ್ತಿ ಸಂದಿದೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡು ವಿಶ್ವಮಟ್ಟದಲ್ಲಿ ಟ್ರೆಂಡ್ ಆಗಿದೆ. ಅನೇಕ ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ‘ನಾಟು ನಾಟು’ ಪ್ರಶಸ್ತಿ ಬಾಚಿಕೊಂಡಿದೆ. ದೇಶಕ್ಕೆ ಕೀರ್ತಿ ತಂದಿದೆ. ಅದೇ ಇನ್ನೊಂದೆಡೆ, ಆಸ್ಕರ್ ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಇವೆರಡೂ ಭಾರತೀಯ ಚಿತ್ರರಂಗಕ್ಕೆ ಹೊಸ ಹಿರಿಮೆ ತಂದುಕೊಟ್ಟಿದೆ. ರಾಜಮೌಳಿ (Rajamouli) ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಚಿತ್ರದ ಈ ಹಾಡು ಆಸ್ಕರ್ ತರುವ ಭರವಸೆಯನ್ನೂ ಮೂಡಿಸಿತ್ತು. ಆಸ್ಕರ್ ವೇದಿಕೆಯ ಮೇಲೆ ಈ ಹಾಡನ್ನು ಗಾಯಕರಾದ ಸಿಪ್ಲಿಗಂಜ ಹಾಗೂ ಕಾಲಭೈರವ ಹಾಡಿದರೆ, ಅಮೆರಿಕದ ನಟ, ಡಾನ್ಸರ್ ಲಾರೆನ್ ಗೋತ್ಲಿಬ್ ನೃತ್ಯ ಮಾಡಿದರು. ಆಸ್ಕರ್ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ಮಿಂಚಿರುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ದೀಪಿಕಾ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರು ಅಕಾಡೆಮಿ ಅವಾಡ್ರ್ಸ್ ಶಾಂಪೇನ್ ಕಾರ್ಪೆಟ್ ಮೇಲೆ ನಡೆದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಅವರ ವಜ್ರದ ನೆಕ್ಲೇಸ್, ಬಳೆ ಮತ್ತು ವೆಲ್ವೆಟ್, ಕ್ಲಾಸಿ ಕಪ್ಪು ಗೌನ್‍ನಲ್ಲಿ ಮನಮೋಹಕವಾಗಿ ಕಾಣುತ್ತಿರುವ ನಟಿ, ಆರ್‌ಆರ್‌ಆರ್‌ನ 'ನಾಟು ನಾಟು' ಪ್ರದರ್ಶನವನ್ನು ಘೋಷಿಸಲು ಆಸ್ಕರ್ ವೇದಿಕೆಯನ್ನು ಅಲಂಕರಿಸಿದಾಗ ಹರ್ಷೋದ್ಗಾರಗಳ ಸುರಿಮಳೆಯೇ ಆಯಿತು. ಈ ಸಂದರ್ಭದಲ್ಲಿ ನಾಟು ನಾಟುವಿನ ಕುರಿತು ಅವರು ಮಾತನಾಡುವಾಗ ಭಾವುಕರಾದರು. ನಾಟು ನಾಟು ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ (Best Original song) ವಿಭಾಗದಲ್ಲಿ ಆಸ್ಕರ್ ಪಡೆದಿದೆ. ಇದನ್ನು ಘೋಷಣೆ ಮಾಡುವಾಗ ನಟಿ ಭಾವುಕರಾಗಿರುವ ವಿಡಿಯೋ ವೈರಲ್ ಆಗಿದೆ. ನಾಟು ನಾಟು ಹಾಡಿಗೆ ನೃತ್ಯ ಮಾಡಿದ ಸಂದರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಎಂ.ಎಂ.ಕೀರವಾಣಿ ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸಿದಾಗ ದೀಪಿಕಾ ಭಾವುಕರಾದರು.
RRR ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ
ಇದೇ ವೇಳೆ ನಾಟು ನಾಟು ಕುರಿತು ಮಾತನಾಡಿದ ಅವರು, ಈ ಹಾಡು ಅದ್ಭುತವಾಗಿದೆ ಎಂದಿದ್ದಾರೆ. ಹೇಳಲಾರದಷ್ಟು ಆಕರ್ಷಕವಾದ ಕೋರಸ್, ಎಲೆಕ್ಟ್ರಿಫೈಯಿಂಗ್ ಬೀಟ್ಗಳು (Electrifying Beats) ಎಲ್ಲರನ್ನೂ ಸೆಳೆದಿದೆ ಎಂದರು. ಈ ಹಾಡು ಜಾಗತಿಕ ಸಂಚಲನಕ್ಕೆ ಕಾರಣವಾಗಿವೆ. ಇದು ನಿಜ ಜೀವನದ ಭಾರತೀಯ ಕ್ರಾಂತಿಕಾರಿ ಎಂದರು. ಇದು ಯುಟ್ಯೂಬ್ ಮತ್ತು ಟಿಕ್ ಟಾಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ನೃತ್ಯ ಮಾಡುತ್ತಿದ್ದಾರೆ ಮತ್ತು ಆಸ್ಕರ್‌ಗೆ ನಾಮನಿರ್ದೇಶನಗೊಂಡ ಭಾರತೀಯ ನಿರ್ಮಾಣದ ಮೊದಲ ಹಾಡು ಇದಾಗಿದೆ ಎನ್ನುತ್ತಲೇ ಜನರು ಹರ್ಷೋದ್ಗಾರದಿಂದ ಕೂಗುತ್ತಿರುವುದನ್ನು ನೋಡಬಹುದು.
ದೀಪಿಕಾ ಪಡುಕೋಣೆ ಅವರ ಈ ನಿರೂಪಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಭಿನಂದನೆಗಳ ಸುರಿಮಳೆಯೇ ಆಗುತ್ತಿದೆ. ಆಸ್ಕರ್ ವೇದಿಕೆಯಲ್ಲಿ ಆಕೆಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅನೇಕರು ಇದನ್ನು 'ಹೆಮ್ಮೆಯ ಕ್ಷಣ' ಎಂದು ಕರೆದಿದ್ದಾರೆ. ಇನ್ನು ಕೆಲವರು ಆಹಾ! ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. 'ದೀಪಿಕಾ ಪಡುಕೋಣೆ ಅವರ ಪ್ರಸ್ತುತಿ ಸುಂದರ, ಅತಿ ಸುಂದರ' ಎಂದು ಇನ್ನು ಕೆಲವರು ಹೇಳಿದ್ದಾರೆ. ಅಂದಹಾಗೆ, ಆಸ್ಕರ್ 2023ರ (Oscar 2023) ಪ್ರೆಸೆಂಟರ್ಸ್ ಲಿಸ್ಟ್ ನಲ್ಲಿ ದೀಪಿಕಾ ಅವರ ಹೆಸರಿದೆ. ಈ ಲಿಸ್ಟ್ ನಲ್ಲಿ ಡ್ವೇನ್ ಜಾನ್ಸನ್, ಮೈಕಲ್ ಬಿ ಜಾರ್ಡನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲಾಸ್, ಜೆನಿಫರ್ ಕನೆಲ್ಲಿ, ಸ್ಯಾಮುವೆಲ್ ಎಲ್ ಜಾಕ್ಸನ್, ಮೆಲಿಸ್ಸಾ ಮೆಕಾರ್ತಿ, ಝಾಯ್ ಸಲ್ದಾನ, ಡಾನಿ ಯೆನ್, ಜೊನಾತನ್ ಮೇಜರ್ಸ್, ಟ್ರಾಯ್ ಕೋಚರ್, ಅರಿಯಾನಾ ಡಿಬೋಸ್, ಕ್ವೆಸ್ಟ್ ಲವ್, ಜುನೆಲ್ ಮೊನಿ ಅವರ ಹೆಸರುಗಳಿವೆ.
Oscar 2023 Winner; ಅತ್ಯುತ್ತಮ ನಟ, ನಟಿ ಸೇರಿದಂತೆ ಆಸ್ಕರ್ ಗೆದ್ದವರ ಸಂಪೂರ್ಣ ಲಿಸ್ಟ್ ಇಲ್ಲಿದೆ
1920ರ ದಶಕದಲ್ಲಿ ನಡೆದ ಕಥೆಯನ್ನು RRR ಒಳಗೊಂಡಿದೆ. ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಎಂಬ ಪೌರಾಣಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Just see the grace, the poise, the elegance and the confidence to be at the world stage and do India proud... 's introduction of is simply class apart!! pic.twitter.com/rlpjr0GcCa
— Faridoon Shahryar (@iFaridoon)