ಅತ್ಯುತ್ತಮ ಸಿನಿಮಾ ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್, ಅತ್ಯುತ್ತಮ ನಟಿ ಮಿಶೆಲ್ ಯೋಹ್, ಅತ್ಯುತ್ತಮ ನಟ ಬ್ರೆಂಡನ್ ಫ್ರೇಸರ್ ಆಸ್ಕರ್ ಮುಡಿಗೇರಿಸಿಕೊಂಡಿದ್ದಾರೆ.
95ನೇ ಅಕಾಡೆಮಿ ಅವಾರ್ಡ್ ಸಮಾರಂಭಕ್ಕೆ ಅದ್ದೂರಿ ತೆರೆಬಿದ್ದಿದೆ. ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದಿರುವುದು ವಿಶೇಷ. ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರ್ಸ್' ಮತ್ತು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ 'ಆರ್ ಆರ್ ಆರ್' ಸಿನಿಮಾದ 'ನಾಟು ನಾಟು...' ಹಾಡು ಪ್ರಶಸ್ತಿ ಗೆದ್ದುಕೊಂಡಿದೆ. ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಶ್ವ ಸಿನಿ ಜಗತ್ತಿನ ಅನೇಕ ಗಣ್ಯರು ಭಾಗಿಯಾಗಿದ್ದರು. ಅನೇಕರು ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡರು.
ಅತ್ಯುತ್ತಮ ಸಿನಿಮಾ ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್, ಅತ್ಯುತ್ತಮ ನಟಿ ಮಿಶೆಲ್ ಯೋಹ್, ಅತ್ಯುತ್ತಮ ನಟ ಬ್ರೆಂಡನ್ ಫ್ರೇಸರ್ ಈ ಬಾರಿಯ ಆಸ್ಕರ್ ಮುಡಿಗೇರಿಸಿಕೊಂಡಿದ್ದಾರೆ.
ತೆಲುಗು ಗೊತ್ತಿದ್ದವರಿಗೆ 'ನಾಟು ನಾಟು' ಅರ್ಥ ಇಷ್ಟ, ಗೊತ್ತಿಲ್ಲದವರಿಗೆ ಮ್ಯೂಸಿಕ್ ಇಷ್ಟ: ಚಂದ್ರಬೋಸ್- ಕೀರವಾಣಿ ರಿಯಾಕ್ಷನ್
ಈ ಬಾರಿ ಆಸ್ಕರ್ ಗೆದ್ದವರ ಸಂಪೂರ್ಣ ಲಿಸ್ಟ್ ಇಲ್ಲಿದೆ...
ಅತ್ತ್ಯುತ್ತಮ ಮೂಲ ಹಾಡು: ನಾಟು ನಾಟು.. (ಆರ್ ಆರ್ ಆರ್)
ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್: ದಿ ಎಲಿಫಂಟ್ ವಿಸ್ಪರರ್ಸ್
ಅತ್ಯುತ್ತಮ ಸಿನಿಮಾ- ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ (ಡ್ಯಾನಿಯಲ್ ಕ್ವಾನ್- ಡೇನಿಯಲ್ ಸ್ಕೀನೆರ್ಟ್ ನಿರ್ದೇಶನ)
ಅತ್ಯುತ್ತಮ ನಿರ್ದೇಶಕ- ಡ್ಯಾನಿಯಲ್ ಕ್ವಾನ್ ಹಾಗೂ ಡೇನಿಯಲ್ ಸ್ಕೀನೆರ್ಟ್ (ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್)
ಅತ್ಯುತ್ತಮ ನಟ; ಬ್ರೆಂಡನ್ ಫ್ರೆಸರ್- ದಿ ವೇಲ್
ಅತ್ಯುತ್ತಮ ನಟಿ; ಮಿಶೆಲ್ ಯೋ (ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ ಸಿನಿಮಾ)
ಅತ್ಯುತ್ತಮ ಪೋಷಕ ನಟ; ಕಿ ಹು ಕ್ವಾನ್ (ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ )
ಅತ್ಯುತ್ತಮ ಪೋಷಕ ನಟಿ; ಜೇಮಿ ಲೀ ಕರ್ಟಿಸ್ ( ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ )
ಅತ್ಯುತ್ತಮ ಛಾಯಾಗ್ರಹಣ; ಜೇಮ್ಸ್ ಫ್ರೆಂಡ್- ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್
ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ; ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್
ಬೆಸ್ಟ್ ಡಾಕ್ಯುಮೆಂಟರಿ ಫೀಚರ್; ನವಾಲ್ನಿ
ಅತ್ಯುತ್ತಮ ಸಂಕಲನ; ಪೌಲ್ ರೋಜರ್ಸ್ (ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್)
ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ಸ್; ಅವತಾರ್: ದಿ ವೇ ಆಫ್ ವಾಟರ್
ಅತ್ಯುತ್ತಮ ವಸ್ತ್ರವಿನ್ಯಾಸ; ರುತ್ ಕಾರ್ಟರ್ (ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್)