Snehal Rai: 21 ವರ್ಷ ಹಿರಿಯ ರಾಜಕಾರಣಿಯನ್ನು ಮದ್ವೆಯಾದ ನಟಿ ಕಾರು ಅಪಘಾತ!

By Suvarna NewsFirst Published Jun 11, 2023, 12:03 PM IST
Highlights

ತಮಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾಗಿ ಸುದ್ದಿಯಾಗಿರೋ ಕಿರುತೆರೆ ನಟಿ ಸ್ನೇಹಲ್ ರೈ ಅವರ ಕಾರು ಅಪಘಾತವಾಗಿದೆ. ಆಗಿದ್ದೇನು? 
 

ಕಿರುತೆರೆಯ ಖ್ಯಾತ ನಟಿ, ನಿರೂಪಕಿ ಸ್ನೇಹಲ್ ರೈ (Snehal Rai) ಇತ್ತೀಚಿಗೆ ಭಾರಿ ಸುದ್ದಿಯಲ್ಲಿದ್ದ ನಟಿ. ಇದಕ್ಕೆ ಕಾರಣ ಕಳೆದ ವಾರ ಇವರು ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು. ಅದೇನೆಂದರೆ ತಾವು 21 ವರ್ಷ ಹಿರಿಯ ರಾಜಕಾರಣಿಯ ಜೊತೆ ಮದುವೆಯಾಗಿರುವುದಾಗಿ ಬಹಿರಂಗಪಡಿಸಿದ್ದರು. ಕುತೂಹಲದ ಸಂಗತಿ ಏನೆಂದರೆ, ಈವರೆಗೂ ಮದುವೆಯ (Marriage) ಬಗ್ಗೆ ಮಾತನಾಡದೇ ಇದ್ದ ನಟಿ ಸ್ನೇಹಲ್, ಏಕಾಏಕಿ   ಹತ್ತು ವರ್ಷಗಳ ಹಿಂದೆಯೇ ತಾವು ಮದುವೆ ಆಗಿರುವುದಾಗಿ ಹೇಳಿಕೊಂಡು ಬಹಳ ಸುದ್ದಿ ಮಾಡಿದ್ದರು. ಅಷ್ಟಕ್ಕೂ ನಟ-ನಟಿಯರು ಹೀಗೆ ಅತಿ ಹೆಚ್ಚು ವಯಸ್ಸಿನ ಅಂತರ ಇರುವವರ ಜೊತೆ ಮದುವೆಯಾಗುವ ಸುದ್ದಿಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಎಲ್ಲವೂ ಹಣದ ಮಹಿಮೆ ಎಂದು ಟ್ರೋಲ್​ಗೆ ಒಳಗಾಗುವುದು ಇದೆ. ಆದರೆ ನಟ-ನಟಿಯರು ಈ ರೀತಿ ಮದುವೆಯಾಗುವುದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡುತ್ತಿದ್ದಾರೆ.  ಕಳೆದ ವಾರವಷ್ಟೇ  60 ವಯಸ್ಸಿನ ನಟ ಆಶೀಶ್​ ವಿದ್ಯಾರ್ಥಿ ಅವರನ್ನು  ಫ್ಯಾಷನ್ ಉದ್ಯಮಿ ರೂಪಾಲಿ ಅವರನ್ನು ಮದುವೆಯಾಗಿ ಸುದ್ದಿಯಲ್ಲಿದ್ದಾರೆ.  

ಹೀಗೆ 10 ವರ್ಷಗಳ ಹಿಂದೆಯೇ ತಾವು ರಾಜಕಾರಣಿಯನ್ನು ಮದುವೆಯಾಗಿರುವುದಾಗಿ ನಟಿ ಸ್ನೇಹಲ್​ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡು ಸುದ್ದಿಯಾಗಿದ್ದಾರೆ.  ತಾವು ಮಿಸಸ್​ ಬ್ಯೂಟಿ ಕಾಂಟೆಸ್ಟ್​ನಲ್ಲಿ  (Mrs beauty contest) ಭಾಗವಹಿಸಲು ರೆಡಿಯಾಗಿರುವುದಾಗಿ ಹೇಳಿದ್ದಾರೆ. ಮಿಸಸ್​ ಎಂದ ಮೇಲೆ ಮದುವೆಯಾಗಬೇಕಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದನ್ನು ಬಹಿರಂಗಪಡಿಸಿದ್ದಾರೆ.  ತಾವು ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದರು. 

Latest Videos

Snehal Rai: 21 ವರ್ಷ ಹಿರಿಯ ರಾಜಕಾರಣಿ ಜೊತೆ ಮದುವೆ: ಕಾರಣ ಬಹಿರಂಗಪಡಿಸಿದ ನಟಿ​!

ಹೀಗೆ ಸುದ್ದಿಯಾಗಿರುವ ನಟಿ ಸ್ನೇಹಲ್​ ಫ್ಯಾನ್ಸ್​ಗೆ (Fans) ಮತ್ತೊಂದು ಆಘಾತದ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ, ಅವರ ಕಾರು ನಿನ್ನೆ ಅಪಘಾತಕ್ಕೀಡಾಗಿದೆ.  ಮುಂಬೈ-ಪುಣೆ ಹೈವೇನಲ್ಲಿ ಈ ಘಟನೆ ನಡೆದಿದೆ.  ಸ್ನೇಹಲ್  ಪುಣೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿ ಬಳಿ ಈ ದುರ್ಘಟನೆ ನಡೆದಿದೆ.  ಮುಂಬೈ ಮೂಲಕ ಪಾಸ್ ಆಗುವಾಗ  ಟ್ರಕ್ ಒಂದು ನಟಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಸ್ನೇಹಲ್ ಹಾಗೂ ಅವರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
 
ಈ ಕುರಿತು ನಟಿ ಇನ್​ಸ್ಟಾಗ್ರಾಮ್​ನಲ್ಲಿ (Instagram) ಬರೆದುಕೊಂಡಿದ್ದಾರೆ. ಯಾರೂ  ಆತಂಕಗೊಳ್ಳಬೇಡಿ, ನಾನು ಆರಾಮಾಗಿದ್ದೇನೆ. ಅಪಘಾತ ಸಂಭವಿಸಿದಾಗ  ಹೆದರಿಕೊಂಡಿದ್ದೆ. ಇನ್ನು ಕೆಲವು ದಿನಗಳ ತನಕ ಟ್ಯಾಕ್ಸಿ ಜಿಂದಾಬಾದ್ ಎಂದು ಬರೆದುಕೊಂಡಿದ್ದಾರೆ. ಈ ನಡುವೆಯೇ, ಸ್ನೇಹಲ್​,  ಟ್ರಕ್ ಮಾಲೀಕರನ್ನು ನಷ್ಟ ಪರಿಹಾರ ಕೊಡುವಂತೆ ಕೇಳಿದ್ದರು. ಆದರೆ ಟ್ರಕ್​ ಚಾಲಕ ನಟಿಯನ್ನು ಬೆದರಿಸಿದ್ದಲ್ಲದೆ ಪರಿಹಾರ ಕೊಡಲು ನಿರಾಕರಿಸಿದ್ದಾನೆ ಹಾಗೂ ಅಪಘಾತ ಸ್ಥಳದಿಂದ ತಪ್ಪಿಸಿಕೊಂಡಿದ್ದಾಗಿ ತಿಳಿದು ಬಂದಿದೆ.
 
ಅಂದಹಾಗೆ ಸ್ನೇಹಲ್​, ತಮಗಿಂತ ತುಂಬಾ ಹಿರಿಯರಾದ ಮಾಧವೇಂದ್ರ ಕುಮಾರ್ ರೈ (Madhavendra Kumar Rai) ಅವರನ್ನು ಮದುವೆಯಾಗಿದ್ದು ಏಕೆ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. ಮಾಧವೇಂದ್ರ  ಅವರು ನನ್ನ ಕರೀಯರ್​ಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ನೀನು ನನ್ನ ರಾಣಿ. ಹೋಗಿ ರಾಣಿಯಂತೆ ಕೆಲಸ ಮಾಡು. ನೀನು ಗೆಲ್ಲುತ್ತೀಯೋ ಇಲ್ಲವೋ ಆದರೆ ಎಂದು ರಾಣಿಯಾಗಿ ನನ್ನ ಹೃದಯವನ್ನು ಆಳುತ್ತಿ ಎಂದಿದ್ದರು. ಇದು ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ.  ನಟಿಯಾಗಿ ತಾನು ಮಾಧವೇಂದ್ರ ಹಾಗೂ ಅವರ ಕುಟುಂಬದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಸ್ನೇಹಲ್ ರೈ (Snehal Rai) ಬಹಿರಂಗಪಡಿಸಿದ್ದಾರೆ. ಆ ಮಾತುಗಳು ನನಗೆ ಮತ್ತಷ್ಟು ಪ್ರೇರಣೆ ನೀಡಿತು. ಹಾಗಾಗಿ ವೈವಾಹಿಕ ಜೀವನ ಹಾಗೂ ಕೆಲಸ ಎರಡನ್ನೂ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದಿದ್ದಾರೆ.

The Kerala Story: ಈಕೆ ಅದಾ ಶರ್ಮಾ ಅಲ್ಲ... ಚಾಮುಂಡೇಶ್ವರಿ ಅಯ್ಯರ್​! ಅಸಲಿ ವಿಷ್ಯ ಬಯಲು

click me!