
ಚಿಕ್ಕಬಳ್ಳಾಪುರ(ಮಾ.20): ಬ್ರಿಟಿಷರ ವಿರುದ್ಧ ಅನೇಕ ಮಹನೀಯರು ಹೋರಾಟ ನಡೆಸಿ ತ್ಯಾಗ ಬಲಿದಾನ ಮಾಡಿದ್ದರ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಆದರೆ ಅನೇಕ ಸ್ವಾತಂತ್ರ್ಯ ಹೋರಾಟದ ಸತ್ಯ ಸಂಗತಿಗಳು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಈ ಸ್ವಾತಂತ್ರ್ಯ ಹೋರಾಟದ ಸತ್ಯ ಹೊರಗೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜತೆಗೆ, ಸ್ವಾತಂತ್ರ್ಯ ಸೇನಾನಿಗಳ ಆರ್‌ಆರ್‌ಆರ್ ಸಿನಿಮಾ ನೋಡಿ ಇಡೀ ದೇಶ ಹೆಮ್ಮೆ ಪಡುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ನಗರದ ಹೊರ ವಲಯದ ಚೊಕ್ಕನಹಳ್ಳಿ ಸಮೀಪ ಶನಿವಾರ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಮಹಿಳೆಯಾಗಿ ರಣಹಕಳೆ ಊದಿದ್ದು ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ಆರ್‌ಆರ್‌ಆರ್ ಸಿನಿಮಾದಲ್ಲಿ ಬೆಳಕು ಚೆಲ್ಲಿರುವುದು ನಿಜಕ್ಕೂ ನನಗೆ ಹೆಮ್ಮೆ ಅನಿಸಿತು ಎಂದರು.
ಕನ್ನಡದಲ್ಲಿ ಸಿನಿಮಾ-ಸಿಎಂ ಸಂತಸ: ಆರ್‌ಆರ್‌ಆರ್ ಸಿನಿಮಾವನ್ನು ಕನ್ನಡದಲ್ಲಿ ಮಾಡಿರುವುದು ನಮಗೆ ಸಂತಸ ತಂದಿದೆ. ತೆಲುಗು, ಕನ್ನಡ ಭಾಷೆಗಳು ಸಹೋದರರಿದ್ದಂತೆ, ತೆಲುಗು, ಕನ್ನಡ ಭಾಷೆ, ಸಂಸ್ಕೃತಿ, ಬದುಕು ಪರಸ್ಪರ ಬೆಸೆದುಕೊಂಡಿದೆ. ಆರ್‌ಆರ್‌ಆರ್ ಸಿನಿಮಾ ಇತಿಹಾಸದಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂದರು.
ಇಷ್ಟೇ ದೊಡ್ಡ ಸಮಾರಂಭ ಮಾಡಿ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ
ಆರ್‌ಆರ್‌ಆರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಕೆಲ ಕ್ಷಣ ಭಾವುಕರಾದರು. ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಶೀಘ್ರದಲ್ಲೇ ಆಯೋಜಿಸಲು ತೀರ್ಮಾನಿಸಿದ್ದೇವೆ. ಆ ಕಾರ್ಯಕ್ರಮವನ್ನೂ ಅಪ್ಪುಗೆ ಗೌರವ ಬರುವ ರೀತಿಯಲ್ಲಿ ಇಷ್ಟೇ ದೊಡ್ಡದಾಗಿ ಆಯೋಜಿಸುತ್ತೇವೆ ಎಂದರು. ಪ್ರತಿಯೊಬ್ಬ ಕನ್ನಡಿಗಲ್ಲಿ ಅಪ್ಪು ಶಾಶ್ವತವಾಗಿ ನೆಲೆಸಿದ್ದಾನೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು, ಅಂತ್ಯವೆಂಬುದಿಲ್ಲ. ಸಾವಿನ ನಂತರವೂ ಬದುಕುವುದು ಸಾಧಕ ಮಾತ್ರ. ನಮ್ಮ ಅಪ್ಪು ಒಬ್ಬ ಸಾಧಕ, ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾನೆ. ಸೂರ್ಯ, ಚಂದ್ರ ಇರುವವರೆಗೂ ಎಲ್ಲರ ಹೃದಯದಲ್ಲಿ ಅಪ್ಪು ಇರುತ್ತಾನೆಂದರು.
ಆರ್‌ಆರ್‌ಆರ್ ಸಿನಿಮಾ ಸ್ವಾತಂತ್ರ್ಯ ಹೋರಾಟದ ಹಿನ್ನಲೆ ಬಗ್ಗೆ ಕಥೆ ಹೊಂದಿದೆ. ನಿರ್ದೇಶಕ ರಾಜಮೌಳಿ ನಿಮ್ಮ ರಾಜ್ಯದ ರಾಯಚೂರಿನವರು, ಜೂನಿಯರ್ ಎನ್‌ಟಿಆರ್ ರವರು ಅವರ ತಾಯಿಂದ ಕಡುನಾಡಿಗೆ ನಂಟು, ರಾಮಚರಣ್ ತಂದೆ ಚಿರಂಜೀವಿ ಕನ್ನಡದಲ್ಲಿ ಮೇಗಾಸ್ಟಾರ್. ಕನ್ನಡದಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.
ಅಪ್ಪುನ ನಾನು ಹೇಗೆ ಮರೆಯಲಿಕ್ಕೆ ಸಾಧ್ಯ
ಇವತ್ತು ನಾನು ಸುರಪುರಕ್ಕೆ ಹೋಗಿದ್ದೆ. ಎಲ್ಲಿ ನೋಡಿದರೂ ಅಪ್ಪು ಕಾಣುತ್ತೇ®ಂದು ಸಿಎಂ ಬೊಮ್ಮಾಯಿ ಭಾವುಕರಾಗಿ ನುಡಿದರು. ಪ್ರತಿಯೊಬ್ಬ ಕನ್ನಡಿಗಲ್ಲಿ ಶಾಶ್ವತ ಅಪ್ಪು ನೆಲಸಿದ್ದಾನೆ. ಸ್ವಾಮಿ ವಿವೇಕಾನಂದರು ಹೇಳಿದಾಗೆ ಸಾಧಕನಿಗೆ ಸಾವು ಅಂತ್ಯವಿಲ್ಲ. ಸಾವಿನ ನಂತರವೂ ಬದುಕುವುದು ಸಾಧಕ ಎಂದರು. ನಮ್ಮ ಅಪ್ಪು ಒಬ್ಬ ಸಾಧಕ, ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಸೂರ್ಯ, ಚಂದ್ರ ಇರುವವರೆಗೂ ಎಲ್ಲರ ಹೃದಯದಲ್ಲಿ ಅಪ್ಪು ಇರುತ್ತಾರೆಂದ ಅವರು, ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಶೀಘ್ರದಲ್ಲಿಯೆ ಮಾಡಲು ತಿರ್ಮಾನಿಸಿದ್ದೇವೆ. ಆ ಕಾರ್ಯಕ್ರಮವೂ ಕೂಡ ಇಷ್ಟೇ ದೊಡ್ಡ ಕಾರ್ಯಕ್ರಮವಾಗಿ ಅಪ್ಪುಗೆ ಗೌರವ ಬರುವ ರೀತಿಯಲ್ಲಿ ¨ ಮಾಡುತ್ತೇವೆಂದು ಸಿಎಂ ಬೊಮ್ಮಾಯಿ ತಿಳಿಸಿದರು.
ರಾಮಚರಣ್, ತಾರಕ್, ಶಿವಣ್ಣ ಎಲ್ಲರೂ ಬ್ರಹ್ಮ, ವಿಷ್ಣು, ಮಹೇಶ್ವರನ ರೀತಿಯಲ್ಲಿ ನಿಂತಿದ್ದಾರೆ. ಈ ಕಾರ್ಯಕ್ರಮ ಕನ್ನಡ, ತೆಲುಗಿನ ಸಹೋದರತ್ವದ ಬೆಸುಗೆಗೆ ಕಾರಣವಾಗಿದೆ. ಈ ಸಿನಿಮಾವನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಚಂದ್ರಬೋಸ್ ಮತ್ತಿತರರಿಗೆ ಸಮರ್ಪಿಸಬೇಕೆಂದು ರಾಜಮೌಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಶಾಸಕ ಬಸವರಾಜ್ ದಂಡೆಸೂರ್, ನಟ ಡಾ.ಶಿವರಾಜ್ ಕುಮಾರ್, ಆರ್‌ಆರ್‌ಆರ್ ನಟರಾದ ರಾಮಚರಣ್, ಜೂನಿಯರ್ ಎನ್‌ಟಿಆರ್ ತಾರಕ್, ಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ, ಚಿತ್ರ ನಿರ್ಮಾಪಕ ದಾನಯ್ಯ, ಸಂಗೀತ ನಿರ್ದೇಶಕ ಕಿರುವಾಣಿ, ಕೆವಿಎನ್ ನಿರ್ಮಾಣ ಸಂಸ್ಥೆಯ ಕೆ.ವೆಂಕಟನಾರಾಯಣ್ ಇತರರು ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.