
ವಯಸ್ಕರ ಸಿನಿಮಾದಖ್ಯಾತ ನಟಿ ಸನ್ನಿ ಲಿಯೋನ್ (Sunny Lione) ಹೆಸರು ಈಗ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ (Ranveer Allahbadia) ಜೊತೆ ತಳುಕು ಹಾಕಿಕೊಂಡಿದೆ. ಕೆಲವರು ರಣವೀರ್ ಅವರನ್ನು ಟ್ರೋಲ್ ಮಾಡುತ್ತಿದ್ದರೆ ಕೆಲವರು 'ಸನ್ನಿ ಲಿಯೋನ್ ಅವರಿಂದ ನೀನು ಕಲಿ..' ಎಂದು ಕಾಮೆಂಟ್ ಹಾಕಿದ್ದಾರೆ. ರಣವೀರ್ ಮಾಡಿಕೊಂಡ ಯಡವಟ್ಟು ಈಗ ಇಡೀ ವಿಶ್ವಕ್ಕೇ ಗೊತ್ತಾಗಿದೆ. ಕಾಮಿಡಿ ಮಾಡಲು ಹೋಗಿ ಬಾಯಿಗೆ ಬಂದಿದ್ದು ಹೇಳಿ ಎಲ್ಲರಿಂದ ಛೀ ಮಾರಿ ಹಾಕಿಸಿಕೊಂಡು, ಈಗ ಮಖಮರೆಸಿಕೊಳ್ಳುವ ಸ್ಥಿತಿ ತಲುಪಿದ್ದಾರೆ. 'ಬೇಕಿತ್ತಾ ಇದೆಲ್ಲಾ?' ಅಂತ ಹಲವರು ಹೇಳುವಂತಾಗಿದೆ.
ಖ್ಯಾತ ಯೂಟ್ಯೂಬರ್ ಆಗಿದ್ದ ರಣವೀರ್ ಅಲಹಾಬಾದಿಯಾ, ದೇಶದ ಗಣ್ಯಾತಿಗಣ್ಯರನ್ನು ಸಂದರ್ಶನ ಮಾಡಿದ್ದಾರೆ. ಅವರಿಂದ ಭೇಷ್ ಎನ್ನಿಸಿಕೊಂಡಿದ್ದರು. ಆದರೆ, ಯಡವಟ್ಟು ಹೇಳಿಕೆ ನೀಡಿ ಈಗ ಕುಖ್ಯಾತಿ ಪಡೆದಿದ್ದಾರೆ. ರಣವೀರ್ ಸಿಂಗ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಅವರನ್ನೀಗ ಅನ್‌ಫಾಲೋ ಮಾಡಿದ್ದಾರೆ. ದಿನದಿನಕ್ಕೂ ಅನ್‌ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿಭೆ ಹಾಗೂ ಒಮ್ಮೆಗೇ ಕಟ್ಟಿಕೊಂಡಿದ್ದ ಕೋಟೆ ಕುಸಿದಿದೆ. ಈಗ ಅಲಹಾಬಾದಿಯಾ ಅಂದ್ರೆ ಜನರು ನಗುವಂತಾಗಿದೆ.
ನಟಿ ಆಸಿನ್ ಮೊದಲ ಪ್ರೇಮ ಪುರಾಣ ದುರಂತ ಅಂತ್ಯ, ಎರಡನೆಯದು ಸುಖ ಸಂಸಾರ!
ಅದಿರಲಿ, ಕೆನಡಾದಲ್ಲಿ ಅಡಲ್ಟ್ ಫಿಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಸನ್ನಿ ಲಿಯೋನ್ ಭಾರತಕ್ಕೆ ಬಂದು 'ಬಿಗ್ ಬಾಸ್' ಮೂಲಕ ಸಿನಿಮಾಗೂ ಕಾಲಿಟ್ಟರು. ಮಾಡೆಲಿಂಗ್ ಹಾಗೂ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ಸನ್ನಿ ಲಿಯೋನ್ ಅವರನ್ನು ಒಮ್ಮೆ ಸಂದರ್ಶನ ಮಾಡಿದ್ದರು ಈ ರಣವೀರ್ ಸಿಂಗ್ ಅಲಹಾಬಾದಿಯಾ. ಆಗ ಸನ್ನಿ ಲಿಯೋನ್ ಆ ಒಂದು ಮಾತನ್ನು ಈ ರಣವೀರ್ ಭವಿಷ್ಯ ತಿಳಿದವರಂತೆ ಹೇಳಿಬಿಟ್ಟಿದ್ದರು. ಅದೀಗ ವೈರಲ್ ಆಗ್ತಿದೆ.
ಇಂಟರ್‌ವ್ಯೂದಲ್ಲಿ ರಣವೀರ್ 'ನಿಮ್ಮ ಜೀವನದ ಬೆಸ್ಟ್ ಪಾರ್ಟ್ ಮತ್ತು ಬ್ಯಾಡ್ ಪಾರ್ಟ್ ಯಾವುದು ಎಂದು ಕೇಳಿದ್ದಕ್ಕೆ ಸನ್ನಿ 'ಬೆಸ್ಟ್ ಪಾರ್ಟ್ ಅಂದ್ರೆ ಅಲ್ಲಿನ ದೊಡ್ಡ ದೊಡ್ಡ ಬ್ರಾಂಡ್‌ಗಳ ಜೊತೆ, ಬೆಸ್ಟ್ ಜನಗಳ ಜೊತೆ ಕೆಲಸ ಮಾಡಿದ್ದು. ಅಲ್ಲಿನ ಉದ್ಯಮ ಮತ್ತು ಸ್ಟ್ರೀಟ್ ಸ್ಮಾರ್ಟ್‌ನೆಸ್ ನನಗೆ ನೆರವಾಯಿತು. ಯಾರ ಜೊತೆ ಕೆಲಸ ಮಾಡಬೇಕು, ಯಾರ ಜೊತೆ ಮಾಡಬಾರದು ಅಂತ ನಿರ್ಧರಿಸೋಕೆ ಕೆಲವು ಸಲ ನನ್ನ ಒಳನೋಟ, ಕೆಲವು ಸಲ ಹೊರಗಿನ ವಾಸ್ತವಾಂಶಗಳು ನೆರವಾಗುತ್ತಿದ್ದವು.
Actress Asin Tragedy: ಆಸಿನ್ ದುರಂತ ಕಥೆ- ತಮಿಳಿನಿಂದ ಬ್ಯಾನ್, ಹಿಂದಿಯಿಂದ ರಿಜೆಕ್ಟ್!.. ಈಗೆಲ್ಲಿದಾರೆ?
ಇನ್ನು ಬ್ಯಾಡ್ ಪಾರ್ಟ್ ಅಂದರೆ ನಾವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ನಮ್ಮನ್ನು ಇನ್ಯಾರೋ ಬೈಪಾಸ್ ಮಾಡಿಕೊಂಡು ಹೋಗಿಬಿಡುವುದು. ಇತರರಿಗಿಂತ ಎರಡು ಪಟ್ಟು ಮೂರು ಪಟ್ಟು ಶ್ರಮ ಹಾಕಬೇಕಾಗಿ ಬರುತ್ತಿತ್ತು ಎಂದು ಸನ್ನಿ ಹೇಳಿದ್ದಾಳೆ. ಆದರೆ, ಇದೇ ಸಮಯದಲ್ಲಿ ಈ ರಣವೀರ್‌ಗೆ ಅಪ್ಲೈ ಆಗುವ ಒಂದು ಮಾತನ್ನೂ ಸನ್ನಿ ಅಂದೇ ಹೇಳಿದ್ದಾರೆ. ಹೇಳಿದ್ದಾರೆ. ನನ್ನ ಲೈಫಲ್ಲಿ ಯಾವುದೂ ಕೂಡ ಸಡನ್ನಾಗಿ ಸಿಗಲಿಲ್ಲ. ಎಲ್ಲವೂ ನನಗೆ ಹಂತ ಹಂತವಾಗಿ, ಸ್ಟೆಪ್ ಬೈ ಸ್ಟೆಪ್ ಬೆಳವಣಿಗೆ ದೊರೆಯಿತು.
ಹೀಗಾಗಿ ನನ್ನ ಯಶಸ್ಸು ದೃಢವಾಗಿತ್ತು. ಆದರೆ ಕೆಲವರು ಫಾಸ್ಟ್ ಆಗಿ ಮೇಲೆ ಹೋಗ್ತಾರೆ. ಆದ್ರೆ ಟೈಮ್ ಬದಲಾಗಿ ಬಿದ್ದಾಗ ಅವರಿಗೆ ಬೀಳುವ ಏಟು ತುಂಬಾ ಬಲವಾಗಿರುತ್ತೆ. ಯೂಟ್ಯೂಬರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಎಲ್ಲರಲ್ಲೂ ಇದನ್ನು ಕಾಣ್ತೀವಿ. ಬೇರೆಯವರ ವಿಡಿಯೋಗಳಿಗೆ ಮಿಲಿಯಗಟ್ಟಲೆ ವ್ಯೂಸ್ ಸಿಗ್ತಿವೆ, ಆದ್ರೆ ನಂಗೆ ಯಾಕೆ ಸಿಗ್ತಿಲ್ಲ ಅಂತ ಕೊರಗೋದ್ರಲ್ಲಿ ಅರ್ಥವಿಲ್ಲ. ಕೆಲಸದಲ್ಲಿ ಬದ್ಧತೆ ಹಾಗೂ ನಿರಂತರತೆ ಇದ್ದರೆ ನಿಧಾನವಾಗಿಯಾದರೂ ಯಶಸ್ಸು ಬರುತ್ತೆ, ಬಂದಮೇಲೆ ಇದು ಶಾಶ್ವತವಾಗಿ ಇರುತ್ತೆ' ಎಂದಿದ್ದಾರೆ ಸನ್ನಿ ಲಿಯೋನ್. ಈಗೇನಾಗಿದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ...!
Chandan Shetty: ಹೊಸ ಲುಕ್ ನೋಡಿ ಚಂದನ್ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್, 'ಏನ್ ಬಾಸ್.. ಗುಡ್ ನ್ಯೂಸ್ ಆಆ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.