
ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ. ಡಿಸೆಂಬರ್ 1ರಂದು ಬಿಡುಗಡೆಯಾದ ಈ ಚಿತ್ರ 12ನೇ ದಿನಕ್ಕೆ ಕಾಲಿಟ್ಟಿದೆ. ಇದಾಗಲೇ ಚಿತ್ರ 718 ಕೋಟಿ ರೂಪಾಯಿಗಳನ್ನು ವಿಶ್ವಾದ್ಯಂತ ಬಾಚಿಕೊಂಡಿದೆ. ಹಲವು ಸೂಪರ್ಹಿಟ್, ಬ್ಲಾಕ್ಬಸ್ಟರ್ ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿದೆ. ಮಿತಿ ಮೀರಿದ ಅಶ್ಲೀಲತೆ, ಹಿಂಸಾಚಾರ, ಕೌಟುಂಬಿಕ ದೌರ್ಜನ್ಯ, ರಕ್ತಪಾತ ಇವುಗಳನ್ನು ಎಂಜಾಯ್ ಮಾಡುತ್ತಿರುವ ಪ್ರೇಕ್ಷಕರು ದಿನದಿಂದ ದಿನಕ್ಕೆ ಈ ಚಿತ್ರದತ್ತ ವಾಲುತ್ತಿದ್ದಾರೆ. ಚಿತ್ರದ ಹಲವಾರು ಹಿಂಸಾತ್ಮಕ, ಅಶ್ಲೀಲ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿ ಅಡಲ್ಟ್ ಸರ್ಟಿಫಿಕೇಟ್ ನೀಡಿದ್ದು ಸುತ್ತಿಯಾಗುತ್ತಿದ್ದಂತೆಯೇ ಜನರು ಈ ಚಿತ್ರ ನೋಡಲು ಮತ್ತಷ್ಟು ಉತ್ಸುಕರಾಗುತ್ತಿದ್ದಾರೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ದಂಪತಿಯಾಗಿ ಕಾಣಿಸಿಕೊಂಡಿದ್ದರೆ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ಹಾಡೊಂದರ ಟ್ರೇಲರ್ ರಿಲೀಸ್ ಆದಾಗ ರಶ್ಮಿಕಾ ಮಂದಣ್ಣನವರ ಹಸಿಬಿಸಿ ದೃಶ್ಯದಿಂದ ಭಾರಿ ಸುದ್ದಿಯಾಗಿತ್ತು. ಆದರೆ ಈಕೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೋರ್ವ ನಟಿ ತೃಪ್ತಿ ಡಿಮ್ರಿ ಮತ್ತು ರಣಬೀರ್ ಕಪೂರ್ ಅವರ ಸಂಪೂರ್ಣ ಬೆತ್ತಲೆ ದೃಶ್ಯದ ಸುದ್ದಿಯಾಗುತ್ತಿದ್ದಂತೆಯೇ ರಶ್ಮಿಕಾ ಸೈಡ್ಗೆ ಹೋಗಿದ್ದಾರೆ, ಎಲ್ಲೆಲ್ಲೂ ತೃಪ್ತಿಯದ್ದೇ ಮಾತು. ರಾತ್ರೋರಾತ್ರಿ ಈಕೆ ರಶ್ಮಿಕಾ ಮಂದಣ್ಣನವರ ನ್ಯಾಷನಲ್ ಕ್ರಷ್ ಪಟ್ಟವನ್ನೂ ಕಿತ್ತುಕೊಂಡಿದ್ದಾರೆ. ಈಕೆಯ ಇನ್ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆ ದಿಢೀರನೆ ಐದಾರು ಪಟ್ಟು ಹೆಚ್ಚಾಗಿದೆ.
ಬೆತ್ತಲೆ ಸೀನ್ ವೇಳೆ ನಾಲ್ವರು ಇದ್ವಿ, ರಣಬೀರ್ ನರ್ವಸ್ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ
ತೃಪ್ತಿ ಡಿಮ್ರಿ ಸಂಪೂರ್ಣ ಬೆತ್ತಲೆ ದೃಶ್ಯ ಮಾಡಿದ್ದನ್ನು ನೋಡಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಲಿದ್ದಾರೆ. ಅಸಭ್ಯದ ಪರಮಾವಧಿ ಎಂದೆಲ್ಲಾ ಹೇಳುತ್ತಿದ್ದಾರೆ. ಅದೇ ವೇಳೆ ಮಗಳು ಇಂಥ ದೃಶ್ಯದಲ್ಲಿ ಕಾಣಿಸಿಕೊಂಡಾಗ ಅಪ್ಪ-ಅಮ್ಮ ಸುಮ್ಮನಿರುತ್ತಾರಾ ಎಂದು ಹಲವು ಮಂದಿಗೆ ಅನ್ನಿಸುವುದು ಉಂಟು. ಆದರೆ ಬಹುಶಃ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ಇವೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ ಎನ್ನುವ ಮಾತೂ ಇದೆ. ಆದರೆ ಇದೇ ಪ್ರಶ್ನೆ ತೃಪ್ತಿ ಅವರಿಗೂ ಎದುರಾಗಿದೆ. ಅಪ್ಪ-ಅಮ್ಮನಿಗೆ ಏನು ಹೇಳಿದರು ಎಂದು ತೃಪ್ತಿಗೆ ಪ್ರಶ್ನಿಸಲಾಗಿದೆ. ಆಗ, ನಟಿ, ಬೆತ್ತಲೆ ದೃಶ್ಯವನ್ನು ನೋಡಿ ಅಪ್ಪ ಕಾಲ್ ಮಾಡಿ ತುಂಬಾ ನರ್ವಸ್ ಆದ ಹಾಗೆ ಕಾಣಿಸುತ್ತಿದೆ ಎಂದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಹೌದು. ನಿನಗೆ ಹೇಗೆ ಗೊತ್ತಾಯ್ತು ಎಂದು ಕೇಳಿದೆ. ಆಗ ಅವರು, ಆ ಬೆತ್ತಲೆ ವಿಡಿಯೋದಲ್ಲಿ ಕೈಗಳನ್ನು ನಿರಂತರವಾಗಿ ಉಜ್ಜಿಕೊಳ್ಳುತ್ತಿದ್ದಿ. ಸಾಮಾನ್ಯವಾಗಿ ನಿನಗೆ ಟೆನ್ಷನ್ ಆದಾಗ ಹೀಗೆ ಮಾಡುತ್ತಿ ಎನ್ನುವುದು ಗೊತ್ತು. ಅದಕ್ಕೇ ಆ ದೃಶ್ಯವನ್ನು ಮಾಡುವಾಗ ನೀನು ಟೆನ್ಷನ್ ಆಗಿದ್ದಿ ಎನ್ನುವುದು ತಿಳಿಯಿತು ಎಂದಿದ್ದಾರೆ.
ಅದೇ ವೇಳೆ ರಣಬೀರ್ ಕಪೂರ್ ಅಂಥ ನಟನ ಎದುರು ಯಾರಾದರೂ ಉದ್ವೇಗಗೊಳ್ಳುವುದು ಸಹಜ. ಅದೇ ರೀತಿ ನನಗೂ ಆಯಿತು. ದೃಶ್ಯ ಮಾಡುವಾಗ ಟೆನ್ಷನ್ ಆಗಿತ್ತು. ಇದೇ ಕಾರಣಕ್ಕೆ ಕೈ ಉಜ್ಜಿಕೊಳ್ಳುತ್ತಿದ್ದೆ. ಅದನ್ನೇ ಅಪ್ಪ ಕೇಳಿದರು ಎಂದು ಹೇಳಿದ್ದಾರೆ. ಅದೇ ವೇಳೆ, ತಾವು ಟೆನ್ಷನ್ ಆಗಿರುವುದಕ್ಕೆ ಇನ್ನೊಂದು ಕಾರಣ ನೀಡಿದ ನಟಿ, ಐದು ವರ್ಷಗಳ ನಂತರ ಇದು ತನ್ನ ಮೊದಲ ಬಿಡುಗಡೆಯಾದ ಸಿನಿಮಾ. ಈ ಕಾರಣದಿಂದ ನಾನು ಆತಂಕಕ್ಕೊಳಗಾಗಿದ್ದೆ. ರಣಬೀರ್‌ನಂತಹ ಸೂಪರ್‌ಸ್ಟಾರ್‌ನೊಂದಿಗೆ ನಿಂತಾಗ ಜನರು ಭಯಭೀತರಾಗುತ್ತಾರೆ. ರಣಬೀರ್ ಯಾರೊಂದಿಗಾದರೂ ಸಂಭಾಷಿಸುತ್ತಿರುವಾಗ, ಎದುರು ಇರುವವರು ತಮಗೆ ಅರಿವಿಲ್ಲದೇ ಅವರನ್ನು ನೋಡುವುದು ಸಹಜ ಎಂದಿದ್ದಾರೆ.
'ಅನಿಮಲ್'ನಲ್ಲಿ ರಶ್ಮಿಕಾ ನೋಡಿ ಡೀಪ್ಫೇಕ್ನವ್ರು ಬೆಚ್ಚಿ ಬಿದ್ರಂತೆ! ಕ್ಷಮಿಸಿ ಎಂದ ಅಮಿತಾಭ್- ಕಾಲೆಳೆದ ಫ್ಯಾನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.