ಓರಿ ಜೊತೆ ಸೆಲ್ಫಿಗೆ ಸೆಲೆಬ್ರಿಟಿಗಳು ನೀಡ್ತಾರೆ 20-30 ಲಕ್ಷ ರೂ! ನಿಮಗೋ ಇಲ್ಲಿದೆ ಫ್ರೀ ಅವಕಾಶ...

By Suvarna News  |  First Published Dec 11, 2023, 4:48 PM IST

ಸದಾ ನಟಿಯರ ಮೈಗೆ ಅಂಟಿಕೊಂಡೇ, ತಬ್ಬಿಕೊಂಡೇ ಇರೋ  ಓರಿ ಜೊತೆ ಉಚಿತವಾಗಿ ಸೆಲ್ಫಿ ಪಡೆಯಲು ಎಲ್ಲರಿಗೂ ಸುವರ್ಣಾವಕಾಶ ಇಲ್ಲಿದೆ... 
 


ನೋಡಲು ವಿಚಿತ್ರ ಆದ್ರೂ ಈ ವ್ಯಕ್ತಿ ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್​ ನಟಿಯರಿಗೆ ಅಚ್ಚುಮೆಚ್ಚು. ನಟಿಯರ ಮೈ ಕೈಗಳನ್ನು ಮುಟ್ಟುತ್ತಲೇ ಫೋಟೋಶೂಟ್​ ಮಾಡಿಸಿಕೊಳ್ಳುತ್ತಾರೆ. ನಟಿಯರು ಕೂಡ ಅಷ್ಟೇ ಸಲೀಸಾಗಿ ಖುಷಿಯಿಂದ ಈ ವ್ಯಕ್ತಿಯನ್ನು ಕಂಡರೆ ಓಡೋಡಿ ಬರುತ್ತಾರೆ. ಬಹುತೇಕ ಎಲ್ಲಾ ಖ್ಯಾತ ಬಾಲಿವುಡ್​ ನಟಿಯರ ಜೊತೆ ಇವರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ನಟಿಯರು ಮಾತ್ರವಲ್ಲದೇ ನಟರು ಹಾಗೂ ಉದ್ಯಮಿಗಳೂ ಇವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಹೌದು. ಈ ವ್ಯಕ್ತಿಯ ಹೆಸರು ಓರಿ.  ಪಾರ್ಟಿಗಳಂತೂ ಓರಿ ಇಲ್ಲದೆ ಅಪೂರ್ಣ ಎಂದೇ ಹೇಳುವಷ್ಟರ ಮಟ್ಟಿಗೆ ಓರಿ ಎಲ್ಲರಿಗೂ ಬೇಕು.  ಓರಿ ಎಂದು ಕರೆಯಲ್ಪಡುವ ಈ ಯುವಕನ ಹೆಸರು ಓರ್ಹನ್ ಅವತ್ರಮಣಿ.  ಬಾಲಿವುಡ್​ ನಟ-ನಟಿಯರ ಜೊತೆ ಸದಾ ಇವರ ಒಡನಾಟ ಇದ್ದು, ಪಾರ್ಟಿಗೂ ಓರಿ ಬೇಕೇ ಬೇಕು. ಇತ್ತೀಚೆಗೆ ನೀತಾ ಅಂಬಾನಿ ಜೊತೆಗಿದ್ದ ಓರಿ ಫೊಟೋ ವೈರಲ್ ಆಗಿತ್ತು.  ಅದಾದ ಮೇಲೆ ಓರಿ ಕುರಿತು ಸಾಕಷ್ಟು ಕುತೂಹಲ ಕೆರಳಿಸಿತ್ತು. ಈ ನಡುವೆ, ಈ ವ್ಯಕ್ತಿಯ ಕುರಿತು ಒಂದಿಷ್ಟು ಮಾಹಿತಿಗಳನ್ನು ಮಾಧ್ಯಮಗಳು ಬಿತ್ತರಿಸಿವೆ. ಓರಿಯ ಕುರಿತು ವಿಜಯ್ ಪಟೇಲ್ ಎಂಬುವವರು ತಮ್ಮ ಎಕ್ಸ್​ ಖಾತೆಯಲ್ಲಿ  ಸರಣಿ ಟ್ವಿಟ್ ಮಾಡಿದ್ದರು. ಸಾಮಾನ್ಯನಂತೆ ಕಾಣುವ ಈತ ಬಾಲಿವುಡ್‌ನಲ್ಲಿ ತುಂಬಾ ಪ್ರಭಾವಿಯಂತೆ ಕಾಣುತ್ತಾನೆ. ಬಹುತೇಕ ಬಾಲಿವುಡ್‌ನ ಎಲ್ಲರೂ ಆತನ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಹಾಗಿರುವಾಗ ಆತನ ಬಗ್ಗೆ ಕೆಲವೊಂದು ವಿಷಯ ತಿಳಿಸುತ್ತೇನೆ ಎಂದಾಗಲೇ ಇವರ ಬಗ್ಗೆ ಕೆಲವು ಇಂಟರೆಸ್ಟಿಂಗ್​ ವಿಷ್ಯಗಳು ಹೊರಬಂದಿದ್ದವು. 

ಇವರು,  ಸಲ್ಮಾನ್​ ಖಾನ್​ ನಡೆಸಿಕೊಡುತ್ತಿರುವ ಬಿಗ್​ಬಾಸ್​ ಸೀಸನ್​ 17 ಮನೆಯೊಳಕ್ಕೆ ಓರಿ ಕಾಲಿಟ್ಟಿದ್ದರು.  ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದಿದ್ದರು.  ಈ ಸಂದರ್ಭದಲ್ಲಿ ನಟ-ನಟಿಯರ ಜೊತೆಗಿನ ಫೋಟೋಶೂಟ್​ ಬಗ್ಗೆ ಅಚ್ಚರಿಯ ಹೇಳಿಕೆ ಇವರು ಹೊರಹಾಕಿದ್ದರು. ಓರಿ ಫೋಟೋಗೆ ಫೋಸ್ ನೀಡುವ ಸ್ಟೈಲೇ ಒಂಥರಾ ವಿಚಿತ್ರ, ಬಹುತೇಕ ಫೋಟೋಗಳಲ್ಲಿ ಆತ ನಟಿಯರ ಎದೆ ಮೇಲೆ, ತೊಡೆ ಮೇಲೆ ಎಲ್ಲೆಂದರಲ್ಲಿ ಕೈ ಇಡುತ್ತಾರೆ. ಈ ವಿಚಾರದ ಬಗ್ಗೆ ಸಲ್ಮಾನ್ ಖಾನ್ ಕೇಳಿದ್ದರು.  ಈ ರೀತಿ ಇಡಬಾರದಲೆಲ್ಲಾ ಕೈ ಇಟ್ಟು ಹೆಣ್ಣು ಮಕ್ಕಳೊಂದಿಗೆ ಫೋಟೋ ತೆಗೆಸಿಕೊಳ್ಳುವಿರಿ ಇದರಿಂದ ನಿಮಗೇನು ಸಿಗುತ್ತಿದೆ ಎಂಬ ಪ್ರಶ್ನೆಗೆ ಓರಿ ಹೇಳಿದ್ದು ಕೇಳಿ ಎಲ್ಲರೂ ಶಾಕ್​ ಆಗಿದ್ದರು. ಅದೇನೆಂದರೆ, ಆಹ್ವಾನದ ಮೇರೆಗೆ  ಹೋಗುವ ನನಗೆ ಒಂದು ಫೋಟೋಗೆ ಅವರು 20 ರಿಂದ 30 ಲಕ್ಷ ನೀಡುತ್ತಾರೆ ಒಂದು ರಾತ್ರಿಗೆ ಇಷ್ಟು ಹಣ ನೀಡುತ್ತಾರೆ ಎಂದು ಓರಿ ಹೇಳಿದ್ದರು. 

Tap to resize

Latest Videos

ಸದಾ ನಟಿಯರ ಮೈಗೆ ಅಂಟಿಕೊಂಡೇ, ತಬ್ಬಿಕೊಂಡೇ ಇರೋ 'ಡ್ರಗ್ಸ್​ ಪ್ರೇಮಿ' ಓರಿ ಬಿಗ್​ಬಾಸ್​ಗೆ?

ನಮ್ಮ ಮನೆಗೆ ಬನ್ನಿ ನಮ್ಮ ಕಾರ್ಯಕ್ರಮಕ್ಕೆ ಬನ್ನಿ ನಮ್ಮ ಮದುವೆಗೆ ಬನ್ನಿ ಎಂದು ಕರೆಯುವ ಶ್ರೀಮಂತ ಜನರು ತಮ್ಮ ಜೊತೆ ಫೋಟೋಗೆ ಫೋಸ್ ನೀಡುವಂತೆ  ಕೇಳಿಕೊಳ್ಳುತ್ತಾರೆ.  ಕೆಲವರು ತಮ್ಮ ಜೊತೆ ಹೀಗೆಯೇ ಕೈ ಇಟ್ಟು ಪೋಸ್ ನೀಡಬೇಕು ಎಂದು  ಮನವಿ ಮಾಡುತ್ತಾರೆ.  ತಮ್ಮ ಜೊತೆ ಹೀಗೆ ಫೋಸ್ ನೀಡಿ, ತಮ್ಮ ಹೆಂಡ್ತಿ ಮೇಲೆ ಹೀಗೆ ಕೈ ಇಟ್ಟು ಫೋಸ್ ನೀಡಿ ತಮ್ಮ ಮಕ್ಕಳ ಮೇಲೆಯೂ ಹೀಗೆ ಕೈ ಇಟ್ಟು ಫೋಸ್ ನೀಡಿ ಎಂದು ಅವರೇ ನನ್ನನ್ನು ಕರೆಯುತ್ತಾರೆ. ಹೀಗೆ ಆಹ್ವಾನದ ಮೇರೆಗೆ  ಹೋಗುವ ನನಗೆ ಒಂದು ಫೋಟೋಗೆ ಅವರು 20 ರಿಂದ 30 ಲಕ್ಷ ನೀಡುತ್ತಾರೆ ಎಂದು ಓರಿ ಹೇಳಿದ್ದರು. ಓರಿ ಮಾತು ಕೇಳಿ ಸ್ವತಃ ಸಲ್ಮಾನ್ ಖಾನ್ ಕೂಡ ಶಾಕ್‌ಗೆ ಒಳಗಾಗಿದ್ದರು. 

ಹಲವರಿಗೆ ಅದ್ಯಾಕೋ ಓರಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆಸೆ. ಆದರೆ 20 ಲಕ್ಷ ರೂಪಾಯಿ ಜೀವಮಾನದಲ್ಲಿಯೇ ಕಂಡಿರದ ಅದೆಷ್ಟೋ ಮಂದಿ ಇದ್ದಾರೆ. ಆದರೂ ಹೇಗಾದರೂ ಮಾಡಿ ತಮ್ಮ ಲಕ್​ ನೋಡಲು ಒಮ್ಮೆಯಾದರೂ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಅವರಿಗೆ ಇದೀಗ ಉಚಿತ ಅವಕಾಶವಿದೆ. ಹೌದು. ತಂತ್ರಜ್ಞಾನವು ಮಾನವನ ಹೆಚ್ಚಿನ ಆಸೆಗಳಿಗೆ ಉತ್ತರಗಳನ್ನು ಹೊಂದಿದೆ.  ದೆಹಲಿ ಮೂಲದ ಸ್ನ್ಯಾಪ್‌ಚಾಟ್ ಲೆನ್ಸ್ ಸೃಷ್ಟಿಕರ್ತ ಜಸ್ನೂರ್ ಸಿಂಗ್ ಅವರು ಫಿಲ್ಟರ್ ಅಥವಾ ಸ್ನ್ಯಾಪ್‌ಚಾಟ್ ಲೆನ್ಸ್ ಅನ್ನು ರಚಿಸಿದ್ದಾರೆ, ಅದು ನಿಮ್ಮ ಪಕ್ಕದಲ್ಲಿ ಓರಿ ನಿಂತಿರುವಂತೆ ತೋರುವ ಚಿತ್ರವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

'ಅನಿಮಲ್'ನಲ್ಲಿ ರಶ್ಮಿಕಾ ನೋಡಿ ಡೀಪ್​ಫೇಕ್​ನವ್ರು ಬೆಚ್ಚಿ ಬಿದ್ರಂತೆ! ಕ್ಷಮಿಸಿ ಎಂದ ಅಮಿತಾಭ್- ಕಾಲೆಳೆದ ಫ್ಯಾನ್ಸ್​!

ಓರಿಯೊಂದಿಗೆ ಉಚಿತ ಸೆಲ್ಫಿ ತೆಗೆದುಕೊಳ್ಳಲು, ನೀವು ಸ್ನ್ಯಾಪ್‌ಚಾಟ್ ಅಪ್ಲಿಕೇಶನ್ ತೆರೆಯಬೇಕು > ಭೂತಗನ್ನಡಿ (magnifying glass)ಐಕಾನ್ ಮೇಲೆ ಟ್ಯಾಪ್ ಮಾಡಿ > ಮೇಲ್ಭಾಗದಲ್ಲಿರುವ ಬಾರ್‌ನಲ್ಲಿ ಓರಿ (Orry) ಎಂದು ಟೈಪ್ ಮಾಡಿ > ಸರ್ಚ್​ (search) ಒತ್ತಿ > ಸೆಲ್ಫಿ ವಿತ್ ಓರಿ ಲೆನ್ಸ್ (Selfie with Orry lens) ಮೇಲೆ ಟ್ಯಾಪ್ ಮಾಡಿ. ಒಮ್ಮೆ ನೀವು ಲೆನ್ಸ್ ಅನ್ನು ಆರಿಸಿದರೆ, ಸೆಲ್ಫಿ ತೆಗೆದುಕೊಳ್ಳುವಾಗ ನಿಮ್ಮ ಪಕ್ಕದಲ್ಲಿ ಓರಿಯನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ. ಲೆನ್ಸ್‌ನೊಂದಿಗೆ ಕ್ಲಿಕ್ ಮಾಡಿದ ಚಿತ್ರವನ್ನು ನಿಮ್ಮ ಫೋನ್‌ಗೆ ಉಳಿಸಬಹುದು ಮತ್ತು ಅದನ್ನು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಬಹುದು. 
 

click me!