ಸಲ್ಮಾನ್​ ತಾಯಿ 81ನೇ ಹುಟ್ಟುಹಬ್ಬ: ಗಿಣಿಯಂತೆ ಸಾಕುವೆನೆಂದು ಸುಶೀಲಾಳನ್ನು ಮದ್ವೆಯಾಗಿದ್ದ ಸಲೀಂ- ಮುಂದೇನಾಯ್ತು?

By Suvarna NewsFirst Published Dec 11, 2023, 5:50 PM IST
Highlights

ಸಲ್ಮಾನ್​ ಖಾನ್​ ತಾಯಿ ಸಲ್ಮಾ ಅಲಿಯಾಸ್​ ಸುಶೀಲಾ ಅವರ ಜನ್ಮದಿನದಂದು ಅವರ ಬದುಕಿನ ನೋವಿನ ಕಥೆಯ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. 
 

ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಸಲ್ಮಾನ್​ ಖಾನ್​ ಅವರ ತಾಯಿ ಸಲ್ಮಾ ಖಾನ್​ ಅವರ 81ನೇ ಹುಟ್ಟುಹಬ್ಬದ ಸಂಭ್ರಮ. ಮೊನ್ನೆ ಡಿಸೆಂಬರ್​ 9ರಂದು ಸಲ್ಮಾ ಅವರ ಹುಟ್ಟುಹಬ್ಬವನ್ನು ಸಲ್ಮಾನ್​ ಖಾನ್​ ಸೇರಿದಂತೆ ಅವರ ಕುಟುಂಬಸ್ಥರು ಭರ್ಜರಿಯಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದದ್ದು, ನಟಿ ಹೆಲನ್​.  ಹೆಲೆನ್ (Helen) ಯಾರಿಗೆ ತಾನೇ ಗೊತ್ತಿಲ್ಲ? 60ರ ದಶಕದಿಂದ ಕೆಲ ದಶಕಗಳವರೆಗೆ ಬಾಲಿವುಡ್​ ಆಳಿದ್ದ, ಹಲವರ ನಿದ್ದೆ ಕದ್ದ ಬೆಡಗಿ ಈಕೆ. ಡಿಜಿಟಲ್​ ಯುಗದಿಂದ ಬಹುದೂರವಾಗಿದ್ದ ದಿನಗಳಲ್ಲಿ ತಮ್ಮ ಅಂದವಾದ ಮೈಮಾಟವನ್ನು  ಪ್ರದರ್ಶನ ಮಾಡುತ್ತಾ ಎಷ್ಟೋ ಮಂದಿಯ ನಿದ್ದೆಯನ್ನೇ ಹಾರಿಸಿದ್ದ  ಹೆಲೆನ್ ಅವರ ಸೌಂದರ್ಯಕ್ಕೆ ಸರಿಯಾಟಿಯಿಲ್ಲ. ಅವರ ನೃತ್ಯದ ಶೈಲಿಗೆ ಮನಸೋಲದವರೇ ಇಲ್ಲ. ಇಂದಿನ  ನಟಿಯರು ಸ್ವಲ್ವವೂ ಮಾನ ಮರ್ಯಾದೆಗೆ ಅಂಜದೆ ಅಂಗಗಳನ್ನೆಲ್ಲಾ ಪ್ರದರ್ಶನ ಮಾಡುವಂತೆ ಅಂದಿನ ದಶಕಗಳಲ್ಲಿ ಇಲ್ಲದ ಕಾರಣ, ನಟಿ  ಹೆಲೆನ್ ಅವರನ್ನು ನೋಡುವುದಕ್ಕಾಗಿಯೂ ಒಂದಿಷ್ಟು ಮಂದಿ ಚಿತ್ರ ಮಂದಿರಗಳಿಗೆ ನುಗ್ಗಿದ್ದುಂಟು.  ಆದರೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದೇ  ಹೆಲೆನ್ ಬಾಲಿವುಡ್​ನ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ (Salman Khan) ಅವರ ಚಿಕ್ಕಮ್ಮನೆಂದು, ಅರ್ಥಾತ್​ ಇವರು ಸಲ್ಮಾನ್​ ಖಾನ್​ ತಂದೆಯ ಎರಡನೆಯ ಪತ್ನಿ. 

ಸಲ್ಮಾ ಅವರ ಹುಟ್ಟುಹಬ್ಬಕ್ಕೆ ಹೆಲೆನ್​ ಹಾಗೂ ಆಕೆಯ ಮಕ್ಕಳು ಕೂಡ ಬಂದಿದ್ದರು. ಹೆಲೆನ್​ ಅವರು ಜನ್ಮತಃ ಕ್ರೈಸ್ತ ಧರ್ಮದವರಾದರೆ, ಹಲವರಿಗೆ ತಿಳಿದಿರಲಿಕ್ಕಿಲ್ಲ, ಸಲ್ಮಾನ್​ ಖಾನ್​ ಅವರ ಅಮ್ಮ ಸಲ್ಮಾ ಅವರು ಜನ್ಮತಃ ಹಿಂದೂ ಎಂದು! ಹೌದು.  ಸಲ್ಮಾನ್​ ಖಾನ್​ ಅವರ ತಂದೆ ಸಲೀಂ ಖಾನ್​ (Saleem Khan) ಅವರಿಗೆ ಇಬ್ಬರು ಪತ್ನಿಯರು. ಮೊದಲನೆಯವರ ಹೆಸರು ಸುಶೀಲಾ ಚರಕ್​. ಇವರೇ ಸಲ್ಮಾನ್​ ಖಾನ್​ ಹೆತ್ತಮ್ಮ.  ಮದುವೆಯ ಬಳಿಕ ಇವರ ಹೆಸರನ್ನು  ಸಲ್ಮಾ ಎಂದು ಬದಲಾಯಿಸಲಾಯಿತು. ಸಲ್ಮಾನ್​ ಖಾನ್​ ಸೇರಿ ನಾಲ್ವರು ಮಕ್ಕಳು ಇವರಿಗೆ. ಅರ್ಬಾಜ್ ಖಾನ್, ಸೊಹೇಲ್ ಖಾನ್ ಹಾಗೂ ಅವಿರಾ.

Latest Videos

ಓರಿ ಜೊತೆ ಸೆಲ್ಫಿಗೆ ಸೆಲೆಬ್ರಿಟಿಗಳು ನೀಡ್ತಾರೆ 20-30 ಲಕ್ಷ ರೂ! ನಿಮಗೋ ಇಲ್ಲಿದೆ ಫ್ರೀ ಅವಕಾಶ...

ಒಂದೇ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದ ಸುಶೀಲಾ ಮತ್ತು ಸಲ್ಮಾನ್​ ಖಾನ್​ ತಂದೆ ಸಲೀಂ ಅವರ ನಡುವೆ ಪ್ರೇಮ ಉಂಟಾಯಿತು.  ಕದ್ದು ಮುಚ್ಚಿ ಭೇಟಿ ಆಗುತ್ತಿದ್ದರು. ಮದುವೆ ಮಾಡಿಕೊಳ್ಳಬೇಕೆಂದು ಮನಸ್ಸು ಮಾಡಿದ್ದಾಗ, ಇದಕ್ಕೆ ಧರ್ಮ ಅಡ್ಡಿ ಬಂದಿತ್ತು. ಮುಸ್ಲಿಮರನ್ನು ತಮ್ಮ ಮಗಳಿಗೆ ಕೊಡಲು ಸಾಧ್ಯವೇ ಇಲ್ಲ ಎಂದು  ಸುಶೀಲಾ ಪಾಲಕರು ಖಡಾಖಂಡಿತವಾಗಿ ಹೇಳಿದ್ದರು. ಈ ಬಗ್ಗೆ ಒಮ್ಮೆ ಖುದ್ದು ಸಲೀಂ ಅವರು ಹೇಳಿಕೊಂಡಿದ್ದರು.  'ನಾನು ಸುಶೀಲಾ ಮನೆಗೆ ಹೋದಾಗ ಎಲ್ಲರೂ ನನ್ನ ಜೂದಲ್ಲಿರುವ ಹೊಸ ಪ್ರಾಣಿ ರೀತಿ ನೋಡುತ್ತಿದ್ದರು. ಅವರು ಮದುವೆಗೆ ಒಪ್ಪೇ ಇರಲಿಲ್ಲ. ನೀನು ಒಳ್ಳೆಯವನು ಇರಬಹುದು. ಆದರೆ ಬೇರೆ ಧರ್ಮದವರಿಗೆ ಮಗಳನ್ನು ಕೊಡಲ್ಲ ಎಂದರು. ಆದರೆ ತಮ್ಮಿಬ್ಬರ ಮಧ್ಯೆ ಧರ್ಮ ಅಡ್ಡಿ ಬರುವುದಿಲ್ಲ,ಮಗಳನ್ನು ಗಿಣಿಯಂತೆ ಸಾಕುವೆ ಎಂದು ಭರವಸೆ ನೀಡಿದ್ದ ಸಲೀಂ ಜೊತೆ 1964 ನವೆಂಬರ್ 18ರಂದು  ಸುಶೀಲಾ ಮದುವೆ ನಡೆದಿತ್ತು. ಮದುವೆ ನಂತರ ಸಲ್ಮಾ ಎಂದು ಹೆಸರು ಬದಲಾಯಿಸಲಾಯಿತು.

ನಾಲ್ಕು ಮಕ್ಕಳಾದ ಬಳಿಕ ಸಲೀಂ ಅವರ ಕಣ್ಣು ನಟಿ ಹೆಲೆನ್​ ಮೇಲೆ ಬಿದ್ದಿತ್ತು. ಸುಶೀಲಾ ಅವರ ಅಪ್ಪ-ಅಮ್ಮನಿಗೆ ನೀಡಿದ್ದ ಭರವಸೆ ಮರೆತು ಹೋಗಿತ್ತು. ಹೆಲನ್​ ಜೊತೆ ಸಲೀಂ ಖಾನ್​ ಡೇಟಿಂಗ್ ಪ್ರಾರಂಭಿಸಿದರು. ಈ ಬಗ್ಗೆ ಹೆಲೆನ್​ ಒಮ್ಮೆ ಹೇಳಿಕೊಂಡಿದ್ದರು. ತಮ್ಮಿಂದಾಗಿ ಸಲೀಂ ಅವರ ಮೊದಲ ಪತ್ನಿಯ ಬಾಳು ನರಕವಾಯಿತು ಎಂದೂ ಹೇಳಿದ್ದರು. ಆದರೆ ತಾವಿಬ್ಬರೂ ಬಿಡಲಾರದಷ್ಟು ಒಂದಾಗಿದ್ದರಿಂದ  ಇಬ್ಬರೂ 1980 ರಲ್ಲಿ ವಿವಾಹವಾದರು. ಆಗ ಸಲೀಂಗೆ 45 ವರ್ಷ ವಯಸ್ಸಾಗಿದ್ದರೆ ಹೆಲೆನ್​ ಅವರಿಗೆ 42 ವರ್ಷ ವಯಸ್ಸಾಗಿತ್ತು. ಎರಡನೆಯ ಪತ್ನಿ ಬರುತ್ತಲೇ ಸಲೀಂ ಅವರ ವರಸೆ ಬದಲಾಗಿದ್ದರಿಂದ ಸುಶೀಲಾ ಅವರ ಬಾಳು ಕಣ್ಣೀರೇ ಆಗಿಹೋಯ್ತು. 1990 ರಲ್ಲಿ ಫಿಲ್ಮ್‌ಫೇರ್‌ಗೆ (Filmfare) ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಕೂಡ ತಮ್ಮ ಅಮ್ಮನ ನೋವಿನ ಬದುಕಿನ ಕುರಿತು ಮಾತನಾಡಿದ್ದಾರೆ.  ತಂದೆ ಸಲೀಂ ಖಾನ್​ ಹೆಲೆನ್​ ಅವರನ್ನು ಮದುವೆಯಾಗುವುದಾಗಿ ಹೇಳಿದಾಗ ತಮ್ಮ ತಾಯಿ ಹೇಗೆ  ಅತೃಪ್ತರಾಗಿದ್ದರು, ಆ ನಂತರ ಅವರ ಜೀವನ ಏನಾಯಿತು ಎಂಬುದನ್ನು ತಿಳಿಸಿದ್ದರು. 

 'ಅನಿಮಲ್'ನಲ್ಲಿ ರಶ್ಮಿಕಾ ನೋಡಿ ಡೀಪ್​ಫೇಕ್​ನವ್ರು ಬೆಚ್ಚಿ ಬಿದ್ರಂತೆ! ಕ್ಷಮಿಸಿ ಎಂದ ಅಮಿತಾಭ್- ಕಾಲೆಳೆದ ಫ್ಯಾನ್ಸ್​!
 

click me!