Kantara; ರಿಷಬ್ ಶೆಟ್ಟಿ ಸಿನಿಮಾ ಸಕ್ಸಸ್‌ಗೆ ಅಭಿನಂದನೆ ಸಲ್ಲಿಸಿದ ನಟ ಅಲ್ಲು ಅರ್ಜುನ್

By Shruthi Krishna  |  First Published Dec 20, 2022, 5:21 PM IST

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಸಕ್ಸಸ್ ಬಗ್ಗೆ ನಟ ಅಲ್ಲು ಅರ್ಜುನ್ ಮಾತನಾಡಿದ್ದು ಅಭಿನಂದನೆ ಸಲ್ಲಸಿದ್ದಾರೆ.


ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ​ ‘ಕಾಂತಾರ’ ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಾಂತಾರ ಸದ್ದು ಮಾಡಿದ ಕಾಂತಾರ ಚಿತ್ರದ ಬಗ್ಗೆ ಅನೇಕ ಸ್ಟಾರ್​ ಕಲಾವಿದರು ಮಾತನಾಡಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್​, ಅನುಷ್ಕಾ ಶೆಟ್ಟಿ, ಪ್ರಭಾಸ್​, ವಿವೇಕ್​ ಅಗ್ನಿಹೋತ್ರಿ, ಕಂಗನಾ ರಣಾವತ್​, ಹೃತಿಕ್​ ರೋಷನ್, ಅನಿಲ್ ಕಪೂರ್, ​ ಸೇರಿದಂತೆ ಅನೇಕರು ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ಇದೀಗ ಟಾಲಿವುಡ್​ ನಟ ಅಲ್ಲು ಅರ್ಜುನ್​  ಕೂಡ ‘ಕಾಂತಾರ’ ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾರಿಗೆ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ರಿಷಬ್ ಶೆಟ್ಟಿ ಗೆಲುವುಗೆ ಅಭಿನಂದನೆ ಸಲ್ಲಿಸಿದ್ದಾರೆ. ತೆಲುಗು ಚಿತ್ರವೊಂದರ ಪ್ರಚಾರದ ವೇಳೆ ವೇದಿಕೆಯಲ್ಲಿ ಮಾತನಾಡಿದ ಸ್ಟೈಲಿಶ್ ಸ್ಟಾರ್‘ಕಾಂತಾರ’ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದರು. 

ಅಲ್ಲು ಅರ್ಜುನ್ ಕಾಂತಾರ ಬಗ್ಗೆ ಮಾತನಾಡಿರುವ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಿಷಬ್​ ಶೆಟ್ಟಿ ಅವರ ಕೆಲಸದ ಬಗ್ಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೆಚ್ಚುಗೆ ಕೇಳಿಬಂದಿದೆ. ಈ ನಡುವೆ ಅಲ್ಲು ಅರ್ಜುನ್, ಕಾಂತಾರ ಸಕ್ಸಸ‌್‌ಗೆ ಅಭಿಮಾನಿಗಳು ಎಂದು ಹೇಳಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್ನಟನೆಯ ಪುಷ್ಪ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಪುಷ್ಪ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿತ್ತು. ದಕ್ಷಿಣ ಭಾರತದ ಸಿನಿಮಾಗಳು ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಸದ್ಯ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Ego Less Actor ❤‍🩹 pic.twitter.com/wgHCBzsDZw

— RAAjesh Bunny™⛏️🥁💥 (@RajeshBunny654)

Tap to resize

Latest Videos

ಅನಿಲ್ ಕಪೂರ್ ಪ್ರತಿಕ್ರಿಯೆ 

ಪಿಂಕ್‌ವಿಲ್ಲಾದ ರೌಂಡ್ ಟೇಬಲ್ ಮೀಟಿಂಗ್‌ನಲ್ಲಿ ಮಾತನಾಡಿದ ಅನಿಲ್ ಕಪೂರ್, ರಿಷಬ್ ಶೆಟ್ಟಿಯನ್ನು ಹಾಡಿ ಹೊಗಳಿದರು. ರಿಷಬ್ ಶೆಟ್ಟಿ ಕೆಲಸವನ್ನು ಶ್ಲಾಘಿಸಿದ ಅನಿಲ್ ಕಪೂರ್, ಮುಂದಿನ ಸಿನಿಮಾವನ್ನು ನನ್ನೊಂದಿಗೆ ಮಾಡಿ' ಎಂದು ಕೇಳಿಕೊಂಡರು. ಅನಿಲ್ ಕಪೂರ್ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕುತೂಹಲ ಮೂಡಿಸಿದ ರಿಷಬ್ ಶೆಟ್ಟಿ ಮುಂದಿನ ಸಿನಿಮಾ 

ಸದ್ಯ ಕಾಂತಾರ ಸಕ್ಸಸ್ ನಲ್ಲಿರುವ ರಿಷಬ್ ಶೆಟ್ಟಿ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಕಾಂತಾರ-2 ಮಾಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ರಿಷಬ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಹಾಗಾಗಿ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ರಿಷಬ್ ಮತ್ತೆ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

   

click me!