'ಕಾಶ್ಮೀರ್ ಫೈಲ್ಸ್ ಗಾರ್ಬೇಜ್' ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ತಿರುಗೇಟು

Published : Dec 20, 2022, 03:27 PM IST
'ಕಾಶ್ಮೀರ್ ಫೈಲ್ಸ್ ಗಾರ್ಬೇಜ್' ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ತಿರುಗೇಟು

ಸಾರಾಂಶ

'ಕಾಶ್ಮೀರ್ ಫೈಲ್ಸ್ ಸಿನಿಮಾ ಗಾರ್ಬೇಜ್' ಎಂದ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ ಅವರಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ತಿರುಗೇಟು ನೀಡುತ್ತಿದ್ದಾರೆ. 

'ಕಾಶ್ಮೀರ್ ಫೈಲ್ಸ್ ಗಾರ್ಬೇಜ್' ಎಂದ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ ಅವರಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ತಿರುಗೇಟು ನೀಡುತ್ತಿದ್ದಾರೆ. ನಾವು ದೆಹಲಿ ಫೈಲ್ಸ್ ಆದ್ಮೇಲೆ ಭೇಟಿಯಾಗೋಣ ಎಂದು ವ್ಯಂಗ್ಯವಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ಆಗಿ ಅನೇಕ ತಿಂಗಳಾದರೂ ಸದ್ದು ಮಾಡುತ್ತಿದೆ. ಇಂದಿಗೂ ಚರ್ಚೆಯಲ್ಲಿರುವ ಸಿನಿವಾಗಿದೆ. ಸಿನಿಮಾ ಸೂಪರ್ ಹಿಟ್ ಆಗಿದ್ದು ಕೋಟಿ ಕೋಟಿ ಕಮಾಯಿ ಮಾಡಿದೆ. ಈ ಸಿನಿಮಾದ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಲೇ ಇದೆ. ಇದೀಗ ಬಾಲಿವುಡ್‌ನ ಮತ್ತೋರ್ವ ಖ್ಯಾತ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ ಅವರು ಇದೀಗ ಕಾಶ್ಮೀರ್ ಫೈಲ್ಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಯೀದ್ ಅಖ್ತರ್ ಮಾತಿಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 

ಸಯೀದ್ ಅಖ್ತರ್ ಗೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ವಿವೇಕ್ ಅಗ್ನಿಹೋತ್ರಿ, 'ಮಿರ್ಜಾ ಸರ್ ಅವರಿಗೆ ನಾನು ನಮಸ್ಕಾರಗಳನ್ನು ಹೇಳುತ್ತೇನೆ. ದೆಹಲಿ ಫೈಲ್ಸ್ ನಂತರ ಮತ್ತೆ ಭೇಟಿಯಾಗೋಣ' ಎಂದು ಹೇಳಿದ್ದಾರೆ. 

ಕಾಶ್ಮೀರ್ ಫೈಲ್ಸ್ ಬಗ್ಗೆ ಸಯೀದ್ ಹೇಳಿದ್ದೇನು?

ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ, 'ನನಗೆ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾರ್ಬೇಜ್. ಹಾಗಂತ ಕಾಶ್ಮೀರಿ ಪಂಡಿತರ ವಿಚಾರವೇ ಗಾರ್ಬೇಜ್ ಅಂತ ಅಲ್ಲ. ಕಾಶ್ಮೀರಿ ಪಂಡಿತರ ಘಟನೆ ನಿಜ. ಕಾಶ್ಮೀರಿ ಹಿಂದೂಗಳಿಗೆ ಮಾತ್ರವಲ್ಲ. ಮುಸ್ಲಿಮರೂ ನರಕ ಅನುಭವಿಸಿದ್ದಾರೆ. ಗುಪ್ತಚರ ಸಂಸ್ಥೆಗಳ ಕುತಂತ್ರಗಳು, ರಾಷ್ಟ್ರೀಯ ಹಿತಾಸಕ್ತಿಗಳು ಎಂದು ಕರೆಸಿಕೊಳ್ಳುವ ರಾಷ್ಟ್ರೀಯವಾದಿಗಳ ಕತಂತ್ರದ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಲ್ಲಿ ಮುಖ್ಯ ವಿಷಯವೆಂದರೆ ಪಕ್ಷಗಳನ್ನು ತೆಗೆದುಕೊಳ್ಳಬಾರದು. ಮನುಷ್ಯರಾಗಿರಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ' ಎಂದು ಹೇಳಿದ್ದರು. 

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಗಾರ್ಬೇಜ್‌ಗೆ ಹೋಲಿಸಿದ ನಿರ್ದೇಶಕ ಸಯೀದ್ ಅಖ್ತರ್

ಸಯೀದ್ ಅಖ್ತರ್ ಮಿರ್ಜಾ,  ಮೋಹನ್ ಜೋಶಿ ಹಾಜಿರ್ ಹೋ (1984), ಆಲ್ಬರ್ಟ್ ಪಿಂಟೊ ಕೊ ಗುಸ್ಸಾ ಕ್ಯೂನ್ ಆತಾ ಹೈ (1980), ಸಲೀಂ ಲಾಂಗ್ಡೆ ಪೆ ಮತ್ ರೋ (1989) ಮತ್ತು ನಸೀಮ್ (1995) ಸೇರಿದಂತೆ  ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜೊತೆಗೆ ನುಕ್ಕಡ್ (1986) ಮತ್ತು ಇಂತೇಜಾರ್ (1988) ನಂತಹ ಜನಪ್ರಿಯ ಟಿವಿ ಧಾರಾವಾಹಿಗಳನ್ನು ನಿರ್ದೇಶಕರಾಗಿದ್ದಾರೆ. ಕೊನೆಯದಾಗಿ ಸಯೀದ್,  2018 ರಲ್ಲಿ ಬಿಡುಗಡೆಯಾದ ಕರ್ಮ ಕೆಫೆ ಎಂಬ ಕಿರುಚಿತ್ರಕ್ಕೆ ಕಥೆ ಬರೆದಿದ್ದರು.

ಸುಳ್ಳು ಎಂದು ಸಾಬೀತಾದ್ರೆ ಸಿನಿಮಾ ಮಾಡೋದನ್ನೇ ಬಿಡ್ತೀನಿ; 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಸವಾಲ್

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್, ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ವಲಸೆ ಬಗ್ಗೆ ಚಿತ್ರಿಸಲಾಗಿದೆ.  ಈ ವರ್ಷದ ಆರಂಭದಲ್ಲಿ ಮಾರ್ಚ್ 11 ರಂದು ಬಿಡುಗಡೆಯಾಯಿತು. ಇದು ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ಕಾಶ್ಮೀರ್ ಫೈಲ್ಸ್‌ನಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಸೇರಿದಂತೆ ಅನೇಕರು ನಟಿಸಿದ್ದಾರೆ. 

    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Thalapathy Vijay: ಗೆಲುವಿನ ಬಳಿಕ ವಿಜಯ್ ಫಸ್ಟ್‌ ರಿಯಾಕ್ಷನ್‌; ಮೋದಿ, ರಾಹುಲ್ ಗಾಂಧಿ ಪ್ರತಿಕ್ರಿಯೆಗೆ ದಳಪತಿ ಹೇಳಿದ್ದೇನು?
Leo to Master:'ದಳಪತಿ' ವಿಜಯ್ ದರ್ಬಾರ್: 'ಲಿಯೋ' ಇಂದ 'ಮಾಸ್ಟರ್'ವರೆಗೆ ಸೃಷ್ಟಿಯಾದ ದಾಖಲೆಗಳು ಇವು!