ನಗ್ನರಾಗಿ 'ಕಾಲಿಫ್ಲವರ್' ಹಿಡಿದು ಅಸೆಂಬ್ಲಿ ಮುಂದೆ ನಿಂತ ನಟ ಸಂಪೂರ್ಣೇಶ್ ಬಾಬು!

Published : Jul 04, 2021, 12:16 PM ISTUpdated : Jul 04, 2021, 12:40 PM IST
ನಗ್ನರಾಗಿ 'ಕಾಲಿಫ್ಲವರ್' ಹಿಡಿದು ಅಸೆಂಬ್ಲಿ ಮುಂದೆ ನಿಂತ ನಟ ಸಂಪೂರ್ಣೇಶ್ ಬಾಬು!

ಸಾರಾಂಶ

ಡಿಫರೆಂಟ್ ಆಗಿರುವ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಸಂಪೂರ್ಣೇಶ್ ಬಾಬು. ಟ್ರೋಲ್‌ ಮಾಡೋಕೆ ಕಾರಣನೇ ಬೇಡ. 

ತೆಲುಗು ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಛಾಪು ಮೂಡಿಸಿರುವ ಬರ್ನಿಂಗ್ ಸ್ಟಾರ್ ಸಂಪೂರ್ಣೇಶ್ ಬಾಬು ತಮ್ಮ ಮುಂದಿನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಏನೇ ಮಾಡಿದರೂ ಡಿಫರೆಂಟ್ ಬಯಸುವ ಸಂಪೂರ್ಣೇಶ್ ಪೋಸ್ಟರ್‌ ಎಲ್ಲೆಡೆ ವೈರಲ್ ಆಗುತ್ತಿದೆ. 

ಸಮಾಜ ಮತ್ತು ರಾಜಕೀಯವನ್ನು ವ್ಯಂಗ್ಯ ಮಾಡುವ ಸಿನಿಮಾಗಳನ್ನಷ್ಟೇ ಸಂಪೂರ್ಣೇಶ್ ಬಾಬು ಮಾಡುವುದು. ಇದೇ ಕಾರಣಕ್ಕೆ 'ಕಾಲಿಫ್ಲವರ್' ಹೆಸರಿನ ಸಿನಿಮಾವನ್ನು ಘೋಷಿಸಿದ್ದಾರೆ.  ಪೋಸ್ಟರ್‌ನಲ್ಲಿ ಬಾಬು ಅಸೆಂಬ್ಲಿ ಮುಂದೆ ನಗ್ನವಾಗಿ ನಿಂತು ಕಾಲಿಫ್ಲವರ್ ಹಿಡಿದಿರುವುದಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನಮ್ಮ ರಾಜಕೀಯ ಸ್ಥಿತಿ ಬಗ್ಗೆ ಮಾತನಾಡುವುದಕ್ಕೆ ವ್ಯಂಗ್ಯ ಮಾಡುವುದಕ್ಕೆ ಸಂಪೂರ್ಣೇಶ್ ಬಾಬುಗೆ ಮಾತ್ರ ಹಕ್ಕಿರುವುದು ಎಂದು ಕಾಲೆಳೆಯುತ್ತಿದ್ದಾರೆ. 

ಸಂಪೂರ್ಣೇಶ್ ಬಾಬುಗೆ ಇಷ್ಟವಾದ ಕನ್ನಡ 'ರಿಯಲ್ ಸ್ಟಾರ್'! 

'ಕಾಲಿಫ್ಲವರ್' ಶೀರ್ಷಿಕೆಗೆ 'ಶೀಲೊ ರಕ್ಷತಿ ರಕ್ಷಿತಃ' ಎಂಬ ಟ್ಯಾಗ್‌ಲೈನ್ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ 'ಪ್ಯಾರೆಡಿ' ಸಿನಿಮಾ ಕೂಡ ಸಖತ್ ಟ್ರೋಲ್ ಅಗಿತ್ತು.  ಚಿತ್ರದಲ್ಲಿ ಇತರರನ್ನು ಗೇಲಿ ಮಾಡುವ ಜೊತೆಗೆ ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುವುದು ಸಿನಿಮಾ ಹಿಟ್ ಆಗುವುದಕ್ಕೆ ದೊಡ್ಡ ಕಾರಣ ಎನ್ನಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಲೇಡಿ ಸೂಪರ್‌ಸ್ಟಾರ್ ಆದ್ರೂ ಚಿಕ್ಕ ಚಿಕ್ಕ ಕಿವಿ ಓಲೆ ಮಾರಿ ಮನೆ ಮಾಡಲು ರೆಡಿಯಾಗಿದ್ದ ನಟಿ ರಚಿತಾ ರಾಮ್
Ramayana Trailer: 'ರಾಮಾಯಣ' ಟ್ರೇಲರ್ ರಿಲೀಸ್ ಬಳಿಕ ಜಗತ್ತಿನ ರೆಸ್ಪಾನ್ಸ್ ಹೇಗಿದೆ? ನೆಟ್ಟಿಗರು ಹೇಳ್ತಿರೋದೇನು? ಇಲ್ಲಿ ನೋಡಿ..