ಟಾಲಿವುಡ್ ಸುಂದರಿ ಸಮಂತಾ ಇದೇ ಮೊದಲ ಬಾರಿ ತಮ್ಮ ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ. 'ಆಂಟಿ' ಎಂದು ಕೇಳುವ ತವಕದಲ್ಲಿದ್ದಾರಾ? ಅದಕ್ಕೆ ಸಮಂತಾ ಹೇಳಿದ್ದೇನು ಕೇಳಿಸಿಕೊಳ್ಳಿ...
'Oh baby' ಸಮಂತಾ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಒಂದೊಂದು ಚಿತ್ರಗಳಲ್ಲೂ ವಿಭಿನ್ನವಾಗಿ ಕಾಣಿಸಿಕೊಂಡು, ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ತ್ರಿಪುರ ಸುಂದರಿ. ಅದರಲ್ಲೂ ನಾಗ ಚೈತನ್ಯ ಪತ್ನಿಯಾದ್ಮೇಲೆ ಅದೆಷ್ಟು ಜನರ ಹೃದಯ ಒಡೆಯಿತೋ ಗೊತ್ತಿಲ್ಲ.
'I Love You' ಅಂದವನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?
ಮದುವೆ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎಂಬ ಗುಸು-ಗುಸು ಕೇಳಿ ಬರುತ್ತಿತ್ತು. ಆದರೆ ಅದಕ್ಕೆ ಅವಕಾಶವನ್ನೇ ಕೊಡದೇ ಮತ್ತಷ್ಟು ಉತ್ತಮವಾದ ಕಥೆಗಳನ್ನು ಅಯ್ಕೆ ಮಾಡಿಕೊಂಡು, ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ.
ಮಿಯಾಮಿಯಲ್ಲಿ ನಡೆದ 'Halftime show 2020'ರಲ್ಲಿ ಹುಚ್ಚೆದ್ದು ಕುಣಿದ ಜೆನಿಫರ್ ಲೋಪೇಜ್ ಹಾಗೂ ಶಖಿರಾಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇವರಿಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಸುಮ್ಮನಿರಲಾಗದೆ ಕಾಮೆಂಟ್ ಮಾಡಿದ್ದಾರೆ.
ಸಮಂತಾಗೆ 'ಬೇಬಿ' ಹುಟ್ಟುತ್ತಿದೆ, ಡೇಟ್ ಕೂಡ ಫಿಕ್ಸ್!
ಸಮಂತಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ ಈ 'ಅದ್ಭುತ ವಿಡಿಯೋವನ್ನು. ಇವರನ್ನು ಆಂಟಿ ಎಂದು ಕರೆಯಲು ಯಾರಿಗಾದರೂ ಧೈರ್ಯ ಇದ್ಯಾ? ಸಾಧ್ಯವೇ ಇಲ್ಲ' ಎಂದೂ ಬರೆದಿದ್ದಾರೆ. ಪಿಗ್ಗಿ ಟ್ಟಿಟರ್ ಖಾತೆಯಲ್ಲಿ 'ಪವರ್ ಫುಲ್ ಮಹಿಳೆಯರು ಒಟ್ಟಾಗುತ್ತಿರುವುದನ್ನು ನೋಡಲು ಸಂತೋಷವಾಗುತ್ತದೆ. Incredible' ಎಂದು ಟ್ಟೀಟ್ ಮಾಡಿದ್ದಾರೆ.