ಖ್ಯಾತ ನಟನ ಸಹೋದರನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

Published : Mar 09, 2020, 04:03 PM IST
ಖ್ಯಾತ ನಟನ ಸಹೋದರನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಸಾರಾಂಶ

ಕಾಲಿವುಡ್‌ ಚಿತ್ರರಂಗದಲ್ಲಿ ಮತ್ತೆ ಕೇಳಿ ಬರುತ್ತಿದೆ #Metoo ಸದ್ದು. ಕಿರುತೆರೆ ನಟಿ ಮೇಲೆ ಖ್ಯಾತ ನಟನ ಸಹೋದರನಿಂದ ಲೈಂಗಿಕ ಕಿರುಕುಳ ಹಾಗೂ ಕೊಲೆ ಬೆದರಿಕೆ ಅರೋಪ ಕೇಳಿ ಬಂದಿದೆ.

ಕಾಲಿವುಡ್ ವರ್ಸಟೈಲ್‌ ಆ್ಯಕ್ಟರ್‌, ಡೈರೆಕ್ಟರ್‌ ಹಾಗೂ ಪ್ರೊಡ್ಯೂಸರ್‌ ರಾಘವ್‌ ಲಾರೆನ್ಸ್‌ ಕಿರಿಯ ಸಹೋದರ ಎಲ್ವಿನ್ ಅಲಿಯಾಸ್ ವಿನೋದ್ ಮೇಲೆ ಲೈಂಗಿಕ ಕಿರುಕುಳ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.

ಎರಡು ವರ್ಷಗಳ ಹಿಂದೆ ಚಿತ್ರೀಕರಣದ ವೇಳೆ ಕಿರುತೆರೆ ಹಾಗೂ ಕಿರಿಯ ಕಲಾವಿದೆಯನ್ನು ಭೇಟಿ ಮಾಡಿದ ಎಲ್ವಿನ್ಸ್ 'ನನ್ನನು ಪ್ರೀತಿಸು' ಎಂದು ಪೀಡಿಸುತ್ತಿದ್ದರಂತೆ. ಎಲ್ವಿನ್‌ ನೀಡುತ್ತಿದ್ದ ಮಾನಸಿಕ ಕಾಟದಿಂದ ನೊಂದ ನಟಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರ ಜೊತೆ ವಿನೋದ್ ಕೈ ಜೋಡಿಸಿ, ನಟಿ ವಿರುದ್ಧ ಪ್ರತಿ ದೂರು ದಾಖಲಿಸಿ, ಕಂಬಿ ಎಣಿಸುವಂತೆ ಮಾಡಿದ್ದರು.

1 ಕೋಟಿ ಕೊಟ್ಟು ಅಳಿಯನ ಮರ್ಯಾದಾ ಹತ್ಯೆ ಮಾಡಿಸಿದ್ದ ಉದ್ಯಮಿ ರಾವ್‌ ಆತ್ಮಹತ್ಯೆ!

ಅನ್ಯಾಯವಾಗಿ 21 ದಿನಗಳ ಕಾಲ ಕಸ್ಟಡಿಯಲ್ಲಿ ಕಾಲ ಕಳೆದ ನಟಿ ಪೊಲೀಸರಿಂದಲೂ ಕಿರುಕುಳ ಅನುಭವಿಸಿದ್ದೇನೆ, ಜೈಲಿನಿಂದ ಹೊರ ಬಂದ ನಂತರವೂ ರಾಘವ್‌ ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್ ಸಿನಿಮಾದ ಇಂಗ್ಲಿಷ್ ವರ್ಷನ್‌ಗೆ ಭಾರೀ ಮುಖಭಂಗ! ಕೇವಲ 450 ಟಿಕೆಟ್ ಮಾರಾಟ
2ನೇ ವಾರವೂ ಬಾಕ್ಸ್ ಆಫೀಸಲ್ಲಿ 'ಟಾಕ್ಸಿಕ್' ಅಬ್ಬರ; ಯಶ್ ಸಿನಿಮಾ ಹಿಂದಿಯಲ್ಲಿ ಗಳಿಸಿದ್ದೆಷ್ಟು?