ವಿಜಯ್ ಸೇತುಪತಿ ಚಿತ್ರದಿಂದ ಹೊರ ಬಂದ ಸಮಂತಾ ತಾಯಿಯಾಗ್ತಾ ಇದಾರಾ?

Suvarna News   | Asianet News
Published : Mar 07, 2020, 03:28 PM IST
ವಿಜಯ್ ಸೇತುಪತಿ ಚಿತ್ರದಿಂದ ಹೊರ ಬಂದ ಸಮಂತಾ ತಾಯಿಯಾಗ್ತಾ ಇದಾರಾ?

ಸಾರಾಂಶ

ಕಾಲಿವುಡ್‌ ಸುಂದರಿ ಸಮಂತಾ ಅಕ್ಕಿನೇನಿ ವಿಜಯ್ ಸೇತುಪತಿಗೆ ನಾಯಕಿಯಾಗಿ ಒಪ್ಪಿಕೊಂಡ ಚಿತ್ರದಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗೆ ಯಾವಾಗ ಬ್ರೇಕ್ ಹಾಕ್ತಾರೆ?

ಸಮಂತಾ- ನಯನತಾರಾ ಕಾಂಬಿನೇಷನ್‌ ತೆರೆ ಮೇಲೆ ನೋಡಲು ಬಯಸುತ್ತಿದ್ದ ಅಭಿಮಾನಿಗಳಿಗೆ ಬಿಗ್‌ ಶಾಕ್. ಹಿಟ್ ನಟ ವಿಜಯ್ ಸೇತುಪತಿಗೆ ಜೋಡಿಯಾಗಿ ಕಾಣಿಸಿಕೊಳ್ಳುವುದಾಗಿ ನಯನತಾರಾ ಹಾಗೂ ಸಮಂತಾ 'Kaathuvaakula Rendu Kaadhal' ಸಿನಿಮಾ ಒಪ್ಪಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಸಮಂತಾ ಚಿತ್ರದಿಂದ ಹೊರ ಬಂದಿದ್ದಾರೆ. 

ವಿಘ್ನೇಶ್‌ ಶಿವನ್‌ ನಿರ್ದೇಶನದ 'ಕೆಆರ್‌ಕೆ' ಚಿತ್ರದಿಂದ ಸಮಂತಾ ಹೊರ ಬಂದಿರುವುದು ಅಭಿಮಾನಿಗಳಿಗೆ ಬೇಸರವಾಗಿದೆ. ಕಾಲಿವುಡ್‌ನಲ್ಲಿ ಹರಿದಾಡುತ್ತಿರುವ ಗಾಸಿಪ್‌ ಪ್ರಕಾರ, ನಾಗ ಚೈತನ್ಯಾ ಹಾಗೂ ಸಮಂತಾ ಕುಟುಂಬಕ್ಕೆ ಹೊಸ ಅಥಿತಿಯನ್ನು ಬರ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

'I Love You' ಅಂದವನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?

ಹಲವು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ ಹಾಗೂ ಸಮಂತಾ ಈ ವರ್ಷ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿದ್ದಾರೆ. ಈ ಕಾರಣಕ್ಕೆ ಸಮಂತಾ ಒಪ್ಪಿಕೊಂಡಿರುವ ಚಿತ್ರಗಳಿಂದ ಹೊರ ನಡೆದು, 2 ವರ್ಷಗಳ ಕಾಲ ಬ್ರೇಕ್‌ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆಂಬ ಸುದ್ದಿ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಆದರೆ, ಈ ಗಾಸಿಪ್‌ಗೆ ಸಮಂತಾ ಅದ್ಯಾವಾಗ ಬ್ರೇಕ್ ಕೊಡ್ತಾರೋ ಗೊತ್ತಿಲ್ಲ. ನೋಡೋಣ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೊಡ್ತಾರಾ ಅಂತ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?