
ಟಾಲಿವುಡ್ ಹ್ಯಾಂಡ್ಸಮ್ ನಟ ಪ್ರಭಾಸ್ ಕೆಲವು ದಿನಗಳಿಂದ ರಾಧೇ ಶ್ಯಾಮ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಪರ್ಸನಲ್ ಮೇಕಪ್ ಮ್ಯಾನ್‌ಗೆ ಕೊರೋನಾ ಸೋಂಕು ತಗುಲಿದೆ. ಈ ಕಾರಣಕ್ಕೆ ಪ್ರಭಾಸ್ ಹಾಗೂ ಇಡೀ ಚಿತ್ರತಂಡ ಸೆಲ್ಫ್ ಐಸೋಲೇಟ್ ಆಗಿದೆ.
ನಟಿ ಅನು ಪ್ರಭಾಕರ್‌ಗೆ ಕೊರೋನಾ ಸೋಂಕು
ರಾಧೇ ಶ್ಯಾಮ್ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೇವಲ ಹಾಡುಗಳು ಹಾಗೂ ಪ್ರಮುಖ ದೃಶ್ಯಗಳ ಪ್ಯಾಚ್ ಅಪ್ ವರ್ಕ್ ನಡೆಯುತ್ತಿದೆ. ಮೇಕಪ್ ಮ್ಯಾನ್‌ಗೆ ಕೊರೋನಾ ತಗುಲಿರುವ ಕಾರಣ ಇಡೀ ಚಿತ್ರೀಕರಣದ ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದಾರೆ. ಆದರೆ ಪ್ರಭಾಸ್ ಎಷ್ಟು ದಿನ ಕ್ವಾರಂಟೈನ್ ಆಗಿರುತ್ತಾರೆ, ಅವರ ಜೊತೆ ಯಾರೆಲ್ಲಾ ಬ್ರೇಕ್ ತೆಗದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಆದಿಪುರುಷ್' ಸಿನಿಮಾದ ಒಂದು ಶೆಡ್ಯೂಲ್ ಮುಗಿಸಿದರೆ 'ರಾಧೇ ಶ್ಯಾಮ್' ಚಿತ್ರದ ಮತ್ತೊಂದು ಶೆಡ್ಯೂಲ್ ಕೈಗೆತ್ತುಕೊಳ್ಳುತ್ತಿದ್ದಾರೆ. ಈ ಎರಡು ಸಿನಿಮಾಗಳು ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಶೆಡ್ಯೂಲ್ Hectic ಆಗಿರುವ ಕಾರಣ ಪ್ರಶಾಂತ್ ನೀಲ್ ನಿರ್ದೇಶನ 'ಸಲಾರ್' ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.
ನಿರೂಪಕಿ ಶಾಲಿನಿಗೆ ಅನಾರೋಗ್ಯ;ಈಗ 'ಸೂಪರ್ ಸ್ಟಾರ್' ಸಾರಥಿ ಅನುಪಮಾ ಗೌಡ!
ಕೊರೋನಾ ಸೋಂಕಿನ ಕಾಟ ಇಲ್ಲದಿದ್ದರೆ, ಪ್ರಭಾಸ್ ತಮ್ಮ 21ನೇ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಬೇಕಿತ್ತು. ಈ ಚಿತ್ರದಲ್ಲಿ ಪ್ರಭಾಸ್‌ಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಲಿದ್ದಾರೆ. ವಿಶೇಷ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ಪಾತ್ರ ರಿವೀಲ್; ಈಗಲೂ ಉಗ್ರಂ ಸಿನಿಮಾ ಅಂತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.