ಕಾಲಿವುಡ್ ಕಾಮಿಡಿ ಸ್ಟಾರ್ ಯೋಗಿ ಬಾಬು ಹಾಗೂ ಮಂಜು ಭಾರ್ಗವಿ ತಮ್ಮ ಕುಂಬ ದೇವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
ಟಾಲಿವುಡ್ ಚಿತ್ರರಂಗದಲ್ಲಿ 122ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಮಾಡುತ್ತಾ, ಪ್ರೇಕ್ಷಕರನ್ನು ಮನರಂಜಿಸುತ್ತಿರುವ ಅಮೀರ್ ಅಲಿಯಾಸ್ ಯೋಗಿ ಇಂದು (ಫೆಬ್ರವರಿ 5) ಸರಳ ವಿವಾಹವಾಗಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಗೋವಾದಲ್ಲಿ ಫಿಲ್ಮಿ ಸ್ಟೈಲ್ ಪ್ರಪೋಸ್; ಏಪ್ರಿಲ್‌ನಲ್ಲಿ ನಿಖಿಲ್ ಮದುವೆ ಡೇಟ್ ಫಿಕ್ಸ್!
ಯೋಗಿ ಹಾಗೂ ಮಂಜುಳಾ ತಮಿಳುನಾಡಿನ ತಿತುಟ್ಟನಿಯಲ್ಲಿರುವ ಮುರುಗನ್ ದೇವಾಲಯದಲ್ಲಿ, ಹಿರಿಯರ ಉಪಸ್ಥಿತಿಯಲ್ಲಿ ಸಪ್ತಪದಿ ತುಳಿದರು. ಮುರುಗನ್ ದೇವಾಲಯವೂ ಯೋಗಿ ಅವರ ಮನೆ ದೇವರು. ಆಪ್ತರು, ಕುಟುಂಬದವರು ಹಾಗೂ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಮುಂದಿನ ತಿಂಗಳು ಚಿತ್ರರಂಗದ ಗಣ್ಯರು ಹಾಗೂ ಇನ್ನಿತರೆ ಆಪ್ತರಿಗೂ ಈ ಜೋಡಿ ಚೆನ್ನೈನಲ್ಲಿ ಆರತಕ್ಷತೆ ಹಮ್ಮಿಕೊಂಡಿದೆ.
ಸರಳ ವಿವಾಹಕ್ಕೆ ಸ್ಫೂರ್ತಿಯಾಯ್ತು 'ಆ ದಿನಗಳು' ಚೇತನ್- ಮೇಘ ಮದುವೆ!
ಇತ್ತೀಚಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರದಲ್ಲಿ ಯೋಗಿ ಅವರ ಸೂಪರ್ ಕಾಮಿಡಿ ಹೈಲೈಟ್ ಆಗಿದೆ. ಅಷ್ಟೇ ಅಲ್ಲದೇ ಯೋಗಿ ಅವರ ಕೈಯಲ್ಲಿ ಸುಮಾರು 5ಕ್ಕೂ ಹೆಚ್ಚು ಚಿತ್ರಗಳಿದ್ದು, ಚಿತ್ರೀಕರಣ ನಡೆಯುತ್ತಿವೆ.