ಕೋವಿಡ್19ನಿಂದ ಖ್ಯಾತ ಹಾಸ್ಯ ನಟ ವೇಣುಗೋಪಾಲ್‌ ನಿಧನ

By Suvarna News  |  First Published Sep 24, 2020, 10:43 AM IST

ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ  ತೆಲುಗು ಹಾಸ್ಯ ನಟ ವೇಣುಗೋಪಾಲ್ ಹೈದರಾಬಾದ್‌ನಲ್ಲಿ ಕೊನೆ ಉಸಿರೆಳೆದಿದ್ದಾರೆ.


ತೆಲುಗು ಚಿತ್ರರಂಗದ ಹೆಸರಾಂತ ಹಾಸ್ಯ ನಟ ವೇಣುಗೋಪಾಲ್‌ ಕೊಸುರಿ ಕೋವಿಡ್‌19ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Breaking: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಚಿವ ಸುರೇಶ್ ಅಂಗಡಿ ನಿಧನ 

Latest Videos

undefined

ಉಸಿರಾಟದ ತೊಂದರೆ ಆಗುತ್ತಿದ್ದ ಕಾರಣ ಕಳೆದ 23 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು, ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲವಾದರೂ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆ ವಿಫಲವಾದ ಕಾರಣ ಸೆಪ್ಟೆಂಬರ್ 23ರಂದ ನಿಧನರಾಗಿದ್ದಾರೆ.

ಆಂಧ್ರಪ್ರದೇಶದ ನರ್ಸಾಪುರದ ವೇಣುಗೋಪಾಲ್ 1994ರಲ್ಲಿ 'Thegimpu' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು.  ಕೆಲವು ವರ್ಷಗಳ ಹಿಂದೆ ಎಸ್‌ಎಸ್‌ ರಾಜಮೌಳಿ ಅವರ 'ಮರ್ಯಾದೆ ರಾಮಣ್ಣ', 'ಚಲೋ' ಹಾಗೂ 'ವಿಕ್ರಮಾದ್ರು' ಚಿತ್ರಗಳು ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿತ್ತು.

100ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಹಿರಿಯ ನಟಿ ಆಶಲತಾ ಇನ್ನಿಲ್ಲ 

ಸುಮಾರು 26 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ವೇಣುಗೋಪಾಲ್‌ಗೆ ಚಿತ್ರರಂಗ ಗಣ್ಯರು ಕಂಬನಿ ಮಿಡಿದಿದ್ದಾರೆ. ವೇಣುಗೋಪಾಲ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸೋಣ.

click me!